ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ

|
Google Oneindia Kannada News

ನವದೆಹಲಿ, ಜೂನ್ 03: ಭಾರತೀಯ ವಾಯುಸೇನೆಗೆ ಸೇರಿದ ಏರ್ ಕ್ರಾಫ್ಟ್ ವೊಂದು ಸಂಪರ್ಕ ಕಳೆದುಕೊಂಡಿದೆ. ಚೀನಾ ಗಡಿಭಾಗದಲ್ಲಿ ಸಂಚರಿಸುತ್ತಿದ್ದಾಗ ಕೊನೆಯ ಬಾರಿಗೆ ಸಂಪರ್ಕ ಸಾಧಿಸಲಾಗಿತ್ತು.

ಮೋಡದ ಮರೆಯಲ್ಲಿ ರೇಡಾರ್: ಮೋದಿ ಹೇಳಿಕೆಗೆ ಏರ್ ಮಾರ್ಷಲ್ ಸಮರ್ಥನೆ ಮೋಡದ ಮರೆಯಲ್ಲಿ ರೇಡಾರ್: ಮೋದಿ ಹೇಳಿಕೆಗೆ ಏರ್ ಮಾರ್ಷಲ್ ಸಮರ್ಥನೆ

ಕಳೆದ ಎರಡು ಗಂಟೆಗಳಿಂದ ಸಂಪರ್ಕಕ್ಕೆ ಪ್ರಯತ್ನ ನಡೆದಿದೆ.ಐಎಎಫ್ ಎಎನ್ 32 ಏರ್ ಕ್ರಾಫ್ಟ್ ನಲ್ಲಿ 13 ಮಂದಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

8 ಸಿಬ್ಬಂದಿ ಹಾಗೂ 5 ಮಂದಿ ಪ್ರಯಾಣಿಕರಿದ್ದ Antonov AN-32 ಮಿಲಿಟರಿ ಸಾರಿಗೆ ಏರ್ ಕ್ರಾಫ್ ಇಂದು (ಜೂನ್ 03) ಮಧ್ಯಾಹ್ನ 1 ಗಂಟೆ ಸಾರಿಗೆ ಅಸ್ಸಾಂನ ಜೋಹ್ರಾತ್‌ ವಾಯುನೆಲೆಯಿಂದ ಟೇಕಾಫ್‌ ಆಗಿತ್ತು.

IAF’s AN-32 aircraft with 13 people on board loses contact near China border

ಚೀನಾ ಗಡಿಭಾಗದಲ್ಲಿರುವ ಮೆಂಚುಕಾ ವಾಯುನೆಲೆಗೆ ತಲುಪಬೇಕಾಗಿತ್ತು. ಆದರೆ, ಅರುಣಾಚಲಪ್ರದೇಶದ ಮೆಚುಕಾ ಕಣಿವೆ ಪ್ರದೇಶದಲ್ಲಿ ಹಾರಾಟ ಮಾಡುವಾಗ ಸಂಪರ್ಕ ಕಡೆದುಕೊಂಡಿದೆ.

ಬಿಕಾನೇರ್ ಬಳಿ ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ ಬಿಕಾನೇರ್ ಬಳಿ ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ

ಜುಲೈ2016ರಲ್ಲಿ ಭಾರತೀಯ ವಾಯುಸೇನೆಯ ಎಎನ್ 32 ವಿಮಾನವೊಂದು ಬೆಂಗಾಲ ಕೊಲ್ಲಿಯ ಮೇಲೆ ಹಾರುವಾಗ ನಾಪತ್ತೆಯಾಗಿತ್ತು. ಆ ವಿಮಾನದಲ್ಲಿ 29 ಮಂದಿ ಇದ್ದರು. ಚೆನ್ನೈನಿಂದ ಹೊರಟ್ಟಿದ್ದ ಈ ವಿಮಾನವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ತಲುಪಬೇಕಾಗಿತ್ತು. ಆದರೆ, ವಿಮಾನದ ಬಗ್ಗೆ ಸುಳಿವು ಸಿಗಲೇ ಇಲ್ಲ, ಸೆಪ್ಟೆಂಬರ್ 2016ರಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

English summary
AN-32 aircraft belonging to the Indian Air Force (IAF) has gone missing hours after it took off from Jorhat, Assam for Menchuka Advance Landing Ground in Arunachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X