ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಟಾಪರ್ ಫೈಸಲ್ 'ರೇಪಿಸ್ತಾನ್' ಟ್ವೀಟ್ ವಿರುದ್ಧ ಕ್ರಮ

By Mahesh
|
Google Oneindia Kannada News

ಬೆಂಗಳೂರು. ಜುಲೈ 11 : ಜಮ್ಮು ಕಾಶ್ಮೀರದ ಮೊದಲ UPSC ಟಾಪರ್​ ಶಾಹ್ ಫೈಸಲ್ ಅವರ 'ರೇಪಿಸ್ತಾನ್' ಟ್ವೀಟ್ ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ರೇಪ್​ ಕಲ್ಚರ್​ಗಳಿಗೆ ಸಂಬಂಧಿಸಿದಂತೆ ಅವರು ಮಾಡಿರುವ ಟ್ವೀಟ್​ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಶಾಹ್​ ಫೈಸಲ್​ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ.

ಫೈಸಲ್​ ವಿರುದ್ಧ ಮಂಗಳವಾರದಂದು ಶಿಸ್ತುಕ್ರಮ ಜರುಗಿಸುವಂತೆ ಸರ್ಕಾರವು ಆದೇಶ ನೀಡಿದ್ದು, ಈ ಕುರಿತಾಗಿ ಫೈಸಲ್​ ಅಸಮಧಾನ ವ್ಯಕ್ತಪಡಿಸಿದ್ದಾರೆ.

"ನನ್ನ ಕೆಲಸ ಹೋಗಬಹುದು, ನನಗೆ ಈ ಬಗ್ಗೆ ಯಾವುದೇ ಭಯವಿಲ್ಲ. ಆದರೆ ಜಗತ್ತು ಸಾಧ್ಯತೆಗಳಿಂದಲೇ ತುಂಬಿದೆ. ಚರ್ಚೆ ನಡೆಸುವಾಗ ನನ್ನ ಕೆಲಸ ಹೋಗುತ್ತದೆ ಎಂದರೆ ಅದು ದೊಡ್ಡ ವಿಚಾರವಲ್ಲ" ಎಂದು ಮಾಧ್ಯಮದ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

Population +patriarchy +illiteracy +alcohol +porn +technology +anarchy = rapistan". ಎಂದು ಟ್ವೀಟ್ ಮಾಡಿದ್ದರು.

ಇದನ್ನು ಬದಲಾಯಿಸಬೇಕಾದ ಅಗತ್ಯವಿದೆ

ಇದನ್ನು ಬದಲಾಯಿಸಬೇಕಾದ ಅಗತ್ಯವಿದೆ

'ಸರ್ಕಾರಿ ಅಧಿಕಾರಿಗಳಿಗೆ ತಮ್ಮದೇ ಆದ ಘನತೆ ಇದೆ. ಆದರೆ ಅವರು ಇಂದು ಅನಾಮಧೇಯರಾಗಿದ್ದಾರೆ, ಚರ್ಚೆ ಮಾಡುವುದಿಲ್ಲ. ಸುತ್ತಮುತ್ತಲು ನಡೆಯುತ್ತಿರುವ ಅನಾಚಾರಗಳನ್ನು ಕಂಡರೂ, ಕಾಣದಂತೆ ಕಣ್ಮುಚ್ಚಿಕೊಂಡಿರುತ್ತಾರೆ. ಆದರೆ ಇದನ್ನು ಬದಲಾಯಿಸಬೇಕಾದ ಅಗತ್ಯವಿದೆ" ಎಂದಿದ್ದಾರೆ.

'ರೇಪಿಸ್ತಾನ್' ಟ್ವೀಟ್ ವಿರುದ್ಧ ಕ್ರಮ

ತಮ್ಮ ಟ್ವೀಟ್​ನಲ್ಲಿ ಸರ್ಕಾರವು ತನ್ನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆದೇಶಿಸಿರುವ ಪತ್ರವನ್ನೂ ಹಂಚಿಕೊಂಡಿದ್ದರು.

ನನ್ನ ಬಾಸ್​ ನೀಡಿದ ಲವ್​ ಲೆಟರ್

ಈ ಟ್ವೀಟ್​ನಲ್ಲಿ ಅವರು "ದಕ್ಷಿಣ ಏಷ್ಯಾದಲ್ಲಿ ರೇಪ್​ ಕಲ್ಚರ್​ ವಿರುದ್ಧ ನನ್ನ ಹಾಸ್ಯಾತ್ಮಕ ಟ್ವೀಟ್​ಗೆ ನನ್ನ ಬಾಸ್​ ನೀಡಿದ ಲವ್​ ಲೆಟರ್​. ನಾನು ನಿಯಮಗಳಲ್ಲಿ ಬದಲಾವಣೆಯ ಅಗತ್ಯತೆಗೆ ಮತ್ತಷ್ಟು ಬಲ ನೀಡಲು ಈ ಲೆಟರ್​ ಶೇರ್​ ಮಾಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಸರ್ಕಾರಿ ಅಧಿಕಾರಿ ಟ್ವೀಟ್ ಬಗ್ಗೆ ಅಪಸ್ವರ

ಸರ್ಕಾರಿ ಅಧಿಕಾರಿಯಾಗಿದ್ದು, ಐಎಎಸ್ ನಲ್ಲಿ ಟಾಪ್ ಆಗಿದ್ದು, ಇಂಥ ಟ್ವೀಟ್ ಮಾಡುವ ಬದಲು, ವ್ಯವಸ್ಥೆಯ ಸುಧಾರಣೆ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದ್ದಾರೆ.

English summary
The Jammu and Kashmir government has initiated disciplinary action against 2010-batch IAS exam topper Shah Faesal for his tweet about frequent rapes which was seen by the Centre's Department of Personnel and Training as his failure to maintain absolute honesty and integrity in discharge of duties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X