ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್, ಚೀನಾ ಜಂಟಿ ದಾಳಿ ಎದುರಿಸಲು ಭಾರತೀಯ ಸೇನೆ ಸಜ್ಜು: ಬದೌರಿಯಾ

|
Google Oneindia Kannada News

ನವದೆಹಲಿ,ಅಕ್ಟೋಬರ್ 05: ಭಾರತವು ಏಕಕಾಲದಲ್ಲಿ ಚೀನಾ ಹಾಗೂ ಪಾಕ್ ಗಡಿ ಪ್ರದೇಶದಲ್ಲಿನ ಯಾವುದೇ ದಾಳಿಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಬದೌರಿಯಾ ಹೇಳಿದ್ದಾರೆ.

ಭಾರತ ಹಾಗೂ ಚೀನಾ ನಡುವೆ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಬದೋರಿಯಾ, ಶತ್ರು ರಾಷ್ಟ್ರಗಳ ಯಾವುದೇ ಯುದ್ಧ ದಾಳಿಗಳನ್ನು ಎದುರಿಸಲು ಭಾರತ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.

ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಪೂರ್ವ ಲಡಾಖ್‌ನಲ್ಲಿ ಅಹಿತಕರ ಪರಿಸ್ಥಿತಿ:ಬದೌರಿಯಾ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಪೂರ್ವ ಲಡಾಖ್‌ನಲ್ಲಿ ಅಹಿತಕರ ಪರಿಸ್ಥಿತಿ:ಬದೌರಿಯಾ

ಅಗತ್ಯ ಸೇನೆಯನ್ನು ಗಡಿಯಲ್ಲಿ ಜಮಾವಣೆ ಮಾಡಲಾಗಿದೆ ,ಹಾಗೆಯೇ ಭಾರತವು ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ಬದೌರಿಯಾ ಎಚ್ಚರಿಸಿದ್ದಾರೆ.

ಚೀನಾಗಿಂತ ನಾವೇ ಮುಂದಿದ್ದೇವೆ

ಚೀನಾಗಿಂತ ನಾವೇ ಮುಂದಿದ್ದೇವೆ

ಲಡಾಖ್ ಗಡಿಯಲ್ಲಿ ಭಾರತವು ಒಂದು ಹಂತದ ಮೇಲುಗೈ ಸಾಧಿಸಿದೆ, ಭಾರತದ ವಾಯುಸೇನೆಯ ಬಲವನ್ನು ಚೀನಾ ಹೊಂದಿಲ್ಲ. ಭಾರತದ ವಾಯಸೇನೆಯು ಗಡಿ ಪ್ರದೇಶದಲ್ಲಿ ಸೂಕ್ತ ಜಾಗದಲ್ಲಿ ಯಾವುದೇ ರೀತಿಯ ಅತಿರೇಕದ ಕ್ರಮಗಳನ್ನು ಎದುರಿಸಲು ಸಜ್ಜಾಗಿದೆ. ಹಾಗೆಂದ ಮಾತ್ರಕ್ಕೆ ಭಾರತ ಚೀನಾದ ಸೇನಾ ಬಲವನ್ನು ಕಡೆಗಣಿಸಿಲ್ಲ ಎಂದು ಹೇಳಿದರು.

ಚೀನಾ ಪಾಕ್‌ಗೆ ಸೆಡ್ಡು

ಚೀನಾ ಪಾಕ್‌ಗೆ ಸೆಡ್ಡು

ಚೀನಾ ಪಾಕಿಸ್ತಾನಕ್ಕೆ ಸೆಡ್ಡು ಹೊಡೆದಿದೆ. ಚಳಿಗಾಲದ ಸಂದರ್ಭದಲ್ಲಿ ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ದಾಳಿ ನಡೆಸಲಿವೆ ಎಂಬ ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಭಾರತವು ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿರುವುದು ವಾಯುಸೇನಾ ಮುಖ್ಯಸ್ಥರ ಹೇಳಿಕೆಯಿಂದ ತಿಳಿದುಬರುತ್ತಿದೆ.
ಭಾರತ ಎರಡೂ ಗಡಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಅತಿರೇಕಗಳು ಎದುರಾದರೂ ಎದುರಿಸಲು ಭಾರತ ಸಜ್ಜಾಗಿದೆ. ಲಡಾಖ್ ಹಾಗೂ ಪಾಕ್ ಗಡಿಯಲ್ಲಿ ಅಗತ್ಯ ಸೇನಾ ಜಮಾವಣೆ ಮಾಡಲಾಗಿದೆ.

ಸೇನಾ ಬಲ ಹೆಚ್ಚಿಸಿದ ರಫೇಲ್

ಸೇನಾ ಬಲ ಹೆಚ್ಚಿಸಿದ ರಫೇಲ್

ಭಾರತೀಯ ಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆಯಾದ ಬಳಿಕ ಬಲ ಇನ್ನಷ್ಟು ಹೆಚ್ಚಿದೆ. ಇದರಿಂದ ಭಾರತದ ವಾಯು ಸಾಮರ್ಥ್ಯ ಕೂಡ ಹೆಚ್ಚಾದಂತಾಗಿದೆ ಎಂದು ಬದೌರಿಯಾ ಹೇಳಿದ್ದಾರೆ. ಅವರ ಹೇಳಿಕೆಗೆ ಪೂರಕವೆಂಬಂತೆ ಈಗಾಗಲೇ ಸೇನೆಯು ರಫೇಲ್, ಸುಖೇಯ್ ಸೇರಿ ಎಲ್ಲ ರೀತಿಯ ಯುದ್ಧ ವಿಮಾನವನ್ನು ಗಡಿಯಲ್ಲಿ ಜಮಾವಣೆ ಮಾಡಿದೆ.

ಪರಿಹಾರ ಕಂಡುಕೊಳ್ಳದ ಸೇನಾ ಅಧಿಕಾರಿಗಳ ಮಾತುಕತೆ

ಪರಿಹಾರ ಕಂಡುಕೊಳ್ಳದ ಸೇನಾ ಅಧಿಕಾರಿಗಳ ಮಾತುಕತೆ

ಈಗಾಗಲೇ ಭಾರತ ಹಾಗೂ ಚೀನಾ ಸೇನಾ ಅಧಿಕಾರಿಗಳ ನಡುವೆ ಸಾಕಷ್ಟು ಹಂತದ ಮಾತುಕತೆ ನಡೆದಿದೆ. ಉಭಯ ಸೇನೆಯ ಸೈನಿಕರನ್ನು ಜಮಾವಣೆಗೊಳಿಸಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಗಡಿಯಲ್ಲಿ ಶಾಂತಿ ಪುನಃಸ್ಥಾಪನೆ ಕುರಿತು ನಡೆಸುತ್ತಿರುವ ಮಾತುಕತೆಗಳು ಫಲಪ್ರದವಾಗಿಲ್ಲ, ಹೀಗಾಗಿ ವಾಯುಸೇನಾ ಮುಖ್ಯಸ್ಥರ ಮಾತು ಮಹತ್ವ ಕಳೆದುಕೊಂಡಿದೆ.

English summary
The Indian Air Force is very "well positioned" to deal with any threat and very strong deployments have been made in all relevant areas considering the security scenario, Air Chief Marshal RKS Bhadauria said on Monday, referring to the border standoff with China in Eastern Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X