ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ಆದರೆ ಪಾಕಿಸ್ತಾನವನ್ನು ಬಿಡಬೇಡಿ

|
Google Oneindia Kannada News

ಬಾಗಲ್ಪುರ (ಬಿಹಾರ), ಫೆ 15: ಜಮ್ಮು ಕಾಶ್ಮೀರದ ಇತಿಹಾಸದಲ್ಲೇ ಕಂಡುಕೇಳರಿಯದ ಉಗ್ರರ ಅಟ್ಟಹಾಸದಲ್ಲಿ ಹುತಾತ್ಮನಾದ ಯೋಧನೊಬ್ಬರ ತಂದೆ ಆಡಿರುವ ಮಾತಿಗೆ ಇಡೀ ದೇಶವೇ ಎದ್ದು ಸೆಲ್ಯೂಟ್ ಹೊಡೆಯಬೇಕಿದೆ.

"ಮಾತೃಭೂಮಿಯ ಸೇವೆಗಾಗಿ ಒಬ್ಬ ಮಗನನ್ನು ಕಳೆದುಕೊಂಡೆ, ಇನ್ನೊಬ್ಬ ಮಗನನ್ನೂ ಸೈನ್ಯಕ್ಕೆ ಕಳುಹಿಸುವೆ, ದೇಶಕ್ಕೋಸ್ಕರ ಅವನನ್ನೂ ಬಿಟ್ಟುಕೊಡಲು ಸಿದ್ದನಿದ್ದೇನೆ, ಆದರೆ ಪಾಕಿಸ್ತಾನಕ್ಕೆ ಮಾತ್ರ ಸರಿಯಾದ ಪಾಠವನ್ನು ಕಲಿಸಿ'.

ಸೈನಿಕರ ಮೇಲಿನ ದಾಳಿಯಲ್ಲಿ ರಾಜಕೀಯ ಹುಡುಕಿದ ಕಾಂಗ್ರೆಸ್ಸೈನಿಕರ ಮೇಲಿನ ದಾಳಿಯಲ್ಲಿ ರಾಜಕೀಯ ಹುಡುಕಿದ ಕಾಂಗ್ರೆಸ್

ಇದು, ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್ ಪಿಎಫ್ ಯೋಧ ರತನ್ ಠಾಕೋರ್ ಅವರ ತಂದೆಯ ಮಾತು. ಬಿಹಾರದ ಬಾಗಲ್ಪುರದ ನಿವಾಸಿಯಾಗಿರುವ ಇವರು, ಕಣ್ಣೀರುಡುತ್ತಲೇ ಈ ಮಾತನ್ನು ಹೇಳಿದ್ದಾರೆ.

I will send one more son, but give befitting reply to Pakistan

ಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರುಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರು

ಪ್ರತೀಬಾರಿ ಉಗ್ರರ ದಾಳಿಯಾದಾಗಲೂ, ಅದರ ಮೂಲ ಪಾಕಿಸ್ತಾನ ಎನ್ನುವುದು ವಿಶ್ವಕ್ಕೆ ಗೊತ್ತಿರುವ ವಿಚಾರ. ಹುತಾತ್ಮರಾದ ಕುಟುಂಬದ ಸದಸ್ಯರು ಅದೆಷ್ಟೋ ಬಾರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದುಂಟು.

ಅಂದು ಕೈಬೀಸಿ ಹೋಗಿದ್ದೇ ಕೊನೆ, ಮತ್ತೆಂದೂ ಮಗ ಮನೆಗೆ ಬರಲಾರ..!ಅಂದು ಕೈಬೀಸಿ ಹೋಗಿದ್ದೇ ಕೊನೆ, ಮತ್ತೆಂದೂ ಮಗ ಮನೆಗೆ ಬರಲಾರ..!

ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ, ಗುರು ಕೂಡಾ ಹೀರೋಗಳಂತೆ ದೇಶಕ್ಕೇನಾದರೂ ಸೇವೆ ಮಾಡಿಯೇ ತೀರಬೇಕೆಂಬ ಹಂಬಲ ಹೊಂದಿದ್ದವರು. ಅನೇಕ ಬಾರಿ ಮನೆಯವರಿಗೆ ನಾನು ಹುತಾತ್ಮನಾದಾಗ ನನ್ನನ್ನು ಹೀರೋ ಎಂದು ಕರೆಯಿರಿ ಎಂದಿದ್ದನ್ನು ತಾಯಿ ಚಿಕ್ಕ ತಾಯಮ್ಮ ನೆನೆದು ಕಣ್ಣೀರಿಡುತ್ತಿದ್ದಾರೆ.

English summary
I will send one more son, but give befitting reply to Pakistan,CRPF Personnel Ratan Thakur's (who lost his life in #PulwamaTerrorAttack ) father in Bhagalpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X