ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲೈಕೆಗಾಗಿ ಬಜೆಟ್ ಇರಲ್ಲ, ಆರ್ಥಿಕ ಇಲಾಖೇಲಿ ತಲೆ ಹಾಕಲ್ಲ : ಮೋದಿ

|
Google Oneindia Kannada News

ಈ ಬಾರಿಯ ಕೇಂದ್ರ ಬಜೆಟ್ ಓಲೈಕೆಗಾಗಿಯೋ ಅಥವಾ ಜನಪ್ರಿಯ ಬಜೆಟ್ ಅಂತಲೋ ಮಾಡುವುದಿಲ್ಲ. ಜನ ಸಾಮಾನ್ಯರಿಗೆ ಪುಕ್ಕಟೆ ಕೊಡುವ ಯೋಜನೆಗಳು ತರುತ್ತದೆ ಕೇಂದ್ರ ಸರಕಾರ ಎಂಬ ನಿರೀಕ್ಷೆ ಎಲ್ಲ ಕಡೆ ಇದೆ. ಈ ಬಜೆಟ್ ಹಾಗಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಜಗತ್ತಿನ ಐದು ಪ್ರಬಲ ಆರ್ಥಿಕ ಶಕ್ತಿಯಲ್ಲಿ ಒಂದಾಗಿ ಭಾರತ ಗುರುತಿಸಿಕೊಂಡಿದೆ. ಅದಕ್ಕೆ ಕಾರಣವಾದ ಆರ್ಥಿಕ ಸುಧಾರಣೆಯನ್ನು ಕೇಂದ್ರ ಸರಕಾರವು ಮುಂದುವರಿಸುತ್ತದೆ ಎಂದು ಕೂಡ ಮೋದಿ ತಿಳಿಸಿದ್ದಾರೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳನ್ನು ಸಮರ್ಥಿಸಿಕೊಂಡ ಅವರು, ಅಪನಗದೀಕರಣವನ್ನು ದೊಡ್ಡ ಯಶೋಗಾಥೆ ಎಂದು ಕರೆದುಕೊಂಡಿದ್ದಾರೆ.

ಆದಾಯ ತೆರಿಗೆ ವಿನಾಯಿತಿ ಖಚಿತ: ಬಜೆಟ್ ಪೂರ್ವ ಸಮೀಕ್ಷೆಆದಾಯ ತೆರಿಗೆ ವಿನಾಯಿತಿ ಖಚಿತ: ಬಜೆಟ್ ಪೂರ್ವ ಸಮೀಕ್ಷೆ

ಹೊಸ ಜಿಎಸ್ ಟಿಯಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಅದರಲ್ಲಿನ ಲೋಪಗಳನ್ನು ಸರಿಪಡಿಸುವುದು ಹಾಗೂ ಹೆಚ್ಚು ಸಶಕ್ತವಾಗಿ ಮಾಡುವುದು ನಮ್ಮ ಉದ್ದೇಶ. ಕೇಂದ್ರ ಸರಕಾರದಿಂದ ಉದ್ಯೋಗ ಸೃಷ್ಟಿಯ ಪ್ರಯತ್ನಗಳು ನಡೆಯುತ್ತಿವೆ. ಆದರೆ ಆ ಬಗ್ಗೆ ಸುಳ್ಳು ಹಬ್ಬುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳುಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳು

ಕೃಷಿ ವಲಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರೈತರು ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಹುಡುಕುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ. ಟಿವಿ ಸಂದರ್ಶನದಲ್ಲಿ ಮೋದಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಹಣಕಾಸು ಇಲಾಖೆಯಲ್ಲಿ ಮೂಗು ತೂರಿಸಲ್ಲ

ಹಣಕಾಸು ಇಲಾಖೆಯಲ್ಲಿ ಮೂಗು ತೂರಿಸಲ್ಲ

ಆರ್ಥಿಕ ಇಲಾಖೆಯು ಹಣಕಾಸು ಸಚಿವರ ಜವಾಬ್ದಾರಿಗೆ ಬರುತ್ತದೆ. ಆದ್ದರಿಂದ ಬಜೆಟ್ ವಿಚಾರದಲ್ಲಿ ನಾನು ಮೂಗು ತೂರಿಸಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿ ಆಗಿ ನಾನೇನು ಎಂದು ಜನರು ನೋಡಿದ್ದಾರೆ. ಶ್ರೀಸಾಮಾನ್ಯರಿಗೆ ಇವೆಲ್ಲ ಬೇಡ. ಇವೆಲ್ಲ ಕೇವಲ ಮಿಥ್ಯೆ.

ಪ್ರಾಮಾಣಿಕ ಆಡಳಿತದ ನಿರೀಕ್ಷೆ

ಪ್ರಾಮಾಣಿಕ ಆಡಳಿತದ ನಿರೀಕ್ಷೆ

ಶ್ರೀ ಸಾಮಾನ್ಯರು ನಿರೀಕ್ಷೆ ಮಾಡುವುದು ಪ್ರಾಮಾಣಿಕವಾದ ಆಡಳಿತ. ಯಾವುದೇ ಪುಕ್ಕಟೆ ಯೋಜನೆಗಳಲ್ಲ. ಅದು ನಮ್ಮ ಮಿಥ್ಯೆ. ಜನ ಸಾಮಾನ್ಯರ ಆಶಯ- ನಿರೀಕ್ಷೆಗಳನ್ನು ಪೂರೈಸಲು ನಮ್ಮ ಸರಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ಕಾಂಗ್ರೆಸ್ ಸಂಸ್ಕೃತಿ ಮುಂದುವರಿಸಬೇಕಾ?

ಕಾಂಗ್ರೆಸ್ ಸಂಸ್ಕೃತಿ ಮುಂದುವರಿಸಬೇಕಾ?

ಬಜೆಟ್ ನ ಜನಪ್ರಿಯ ಮಾಡಲೇ ಬೇಕು ಎಂಬ ಹಠವಿಲ್ಲ. ದೇಶವು ಬೆಳೆಯಬೇಕಾ, ಮತ್ತಷ್ಟು ಬಲಿಷ್ಠವಾಗಬೇಕಾ? ಅಥವಾ ರಾಜಕೀಯ ಸಂಸ್ಕೃತಿ, ಕಾಂಗ್ರೆಸ್ ಅನುಸರಿಸಿದ ಸಂಸ್ಕೃತಿ ಮುಂದುವರಿಸಬೇಕಾ? ಎಂಬುದನ್ನು ಜನರೇ ನಿರ್ಧರಿಸಲಿ. ಇನ್ನು ಉದ್ಯೋಗ ಸೃಷ್ಟಿ ವಿಚಾರವಾಗಿ ಸುಳ್ಳು ಹಬ್ಬಿಸಲಾಗುತ್ತಿದೆ.

ಎಪ್ಪತ್ತು ಲಕ್ಷ ಖಾತೆ ಆರಂಭ

ಎಪ್ಪತ್ತು ಲಕ್ಷ ಖಾತೆ ಆರಂಭ

ಕಳೆದ ಒಂದು ವರ್ಷದಲ್ಲಿ ಎಪ್ಪತ್ತು ಲಕ್ಷ ಹೊಸ ನಿವೃತ್ತಿ ಫಂಡ್ ಅಥವಾ ಇಪಿಎಫ್ ಖಾತೆಯನ್ನು ಹದಿನೆಂಟರಿಂದ ಇಪ್ಪತ್ತೈದು ವರ್ಷದೊಳಗಿನವರು ಶುರು ಮಾಡಿದ್ದಾರೆ. ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಾನೇ ಇದರ ಅರ್ಥ.

ರಸ್ತೆ ನಿರ್ಮಾಣ ವೇಗ ದುಪ್ಪಟ್ಟು

ರಸ್ತೆ ನಿರ್ಮಾಣ ವೇಗ ದುಪ್ಪಟ್ಟು

ದುಪ್ಪಟ್ಟು ವೇಗ ಪಡೆದಿರುವ ರಸ್ತೆ ನಿರ್ಮಾಣ, ರೈಲು ಹಳಿ ನಿರ್ಮಾಣ, ವಿದ್ಯುದ್ದೀಕರಣ ಇವೆಲ್ಲವೂ ಉದ್ಯೋಗಕ್ಕೆ ಜನರನ್ನು ಸೇರಿಸಿಕೊಳ್ಳದೆ ಆಗುತ್ತದೆಯೇ? ಇನ್ನು ಪ್ರಧಾನಮಂತ್ರಿ ಮುದ್ರಾ ಯೋಜನಾದಲ್ಲಿ ಕಾರ್ಪೊರೇಟ್ ನ ಹೊರತುಪಡಿಸಿದ ವಲಯ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಹತ್ತು ಕೋಟಿ ರುಪಾಯಿ ಸಾಲ ನೀಡಲಾಗಿದೆ. ಟೆಕ್ಸ್ ಟೈಲ್ ಹಾಗೂ ಚರ್ಮೋದ್ಯಮ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.

ಯುಪಿಎ ಸರಕಾರಕ್ಕೆ ಹೋಲಿಸಿ ನೋಡಿ

ಯುಪಿಎ ಸರಕಾರಕ್ಕೆ ಹೋಲಿಸಿ ನೋಡಿ

ಬಿಜೆಪಿ ಸರಕಾರದ ಒಳ್ಳೆ ಕೆಲಸಗಳು ಗೊತ್ತಾಗಬೇಕು ಅಂದರೆ, ಈ ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹತ್ತು ವರ್ಷದ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಹೋಲಿಸಿ ನೋಡಬೇಕು ಎಂದು ಮೋದಿ ಹೇಳಿದರು.

English summary
I will not interfere in budget, it won't be populist, said PM Narendra Modi about union budget 2018 in an interview. People expect good governance, not freebies and sops, he further added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X