ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೆಂದಿಗೂ ರಾಜಕೀಯಕ್ಕೆ ಬರೋಲ್ಲ: ನ್ಯಾ.ಚಲಮೇಶ್ವರ್

|
Google Oneindia Kannada News

ನವದೆಹಲಿ, ಜೂನ್ 23: "ನಾನು ಎಂದಿಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯಕ್ಕೆ ಪ್ರವೇಶಿಸೋಲ್ಲ" ಎಂದು ನ್ಯಾ ಜಸ್ತಿ ಚಲಮೇಶ್ವರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಚಲಮೇಶ್ವರ್ ನಿನ್ನೆ(ಜೂನ್ 22) ತಮ್ಮ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಪಡೆದರು. ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರಲ್ಲಿ ಎರಡನೇ ಸ್ಥಾನದಲ್ಲಿರುವ ಚಲಮೇಶ್ವರ್ ಕಳೆದ ಏಳು ವರ್ಷಗಳಲಿಂದ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ 'ಪದಚ್ಯುತಿ' ದೇಶ ನಿರ್ಧರಿಸಲಿ: ನ್ಯಾ. ಚೆಲಮೇಶ್ವರ್ಮುಖ್ಯ ನ್ಯಾಯಮೂರ್ತಿ 'ಪದಚ್ಯುತಿ' ದೇಶ ನಿರ್ಧರಿಸಲಿ: ನ್ಯಾ. ಚೆಲಮೇಶ್ವರ್

I will never enter politics and contest elections says Justice Chalameswar
ಈ ವರ್ಷ ಜನವರಿ 12 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿಯ ವಿರುದ್ಧ ಸಿಡಿದೆದ್ದಿದ್ದ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ಚಲಮೇಶ್ವರ್ ಸಹ ಒಬ್ಬರು. ಹಲವು ವಿವಾದಗಳಿಂದ ಹೆಸರಾಗಿದ್ದ ಚಲಮೇಶ್ವರ್ ಜೂನ್ 22 ರಂದು ಸೇವೆಯಿಂದ ನಿವೃತ್ತರಾಗಿದ್ದೆ.

ಈ ಸಂದರ್ಭದಲ್ಲಿ ಮಾಧ್ಯಗಳು ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ತಾವು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ನನಗೆ ಅದು ಇಷ್ಟವಿಲ್ಲ. ಯಾವುದೇ ರೀತಿಯ ಚುನಾವಣೆಯಲ್ಲೂ ಭಾಗವಹಿಸೋಲ್ಲ ಎಂದಿದ್ದಾರೆ.

ಸುಪ್ರೀಂ ಕೋರ್ಟಿನಲ್ಲಿ ಪ್ರಕರಣಗಳ ಹಂಚಿಕೆ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಹಾಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ತಿರುಗಿಬಿದ್ದಿದ್ದ ನಾಲ್ವರು ವಕೀಲರ ಪೈಕಿ ಚಲಮೇಶ್ವರ್ ಪ್ರಮುಖರು. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಅವರು ನೇರವಾಗಿ ದೂರಿದ್ದರು.

English summary
Justice Jasti Chalameswar retired from his service as one of the top most judges of supreme court on June 22. "I will never enter politics and contest elections" he told to media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X