ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇನಾಮಿ ಆಸ್ತಿ ಪತ್ತೆಗೆ 24 ಕಡೆ ಕಚೇರಿ: ತೆರಿಗೆ ಇಲಾಖೆ ಚಿಂತನೆ

ಬೇನಾಮಿ ಆಸ್ತಿ ಪ್ರಕರಣಗಳ ಪತ್ತೆ ಹಚ್ಚುವಿಕೆಗೆ, ಆರೋಪಿಗಳ ವಿಚಾರಣೆಗೆ, ತ್ವರಿತ ದಾಳಿಗಳ ಸಂಘಟನೆಗೆ ಅನುಕೂಲವಾಗಲು ಕಚೇರಿಗಳನ್ನು ತೆರೆಯಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.

|
Google Oneindia Kannada News

ನವದೆಹಲಿ, ಮೇ 25: ದೇಶದಲ್ಲಿ ಬೇನಾಮಿ ಆಸ್ತಿಯನ್ನು ಮಟ್ಟ ಹಾಕಲು ಟೊಂಕ ಕಟ್ಟಿ ನಿಂತಿರುವ ಕೇಂದ್ರ ಆದಾಯ ತೆರಿಗೆ ಇಲಾಖೆಯು ದೇಶದ ನಾನಾ ಭಾಗಗಳಲ್ಲಿ ಒಟ್ಟು 24 ಬೇನಾಮಿ ಆಸ್ತಿ ತನಿಖಾ ಕಚೇರಿಗಳನ್ನು ತೆರೆಯಲು ನಿರ್ಧರಿಸಿದೆ. ಬೇನಾಮಿ ಆಸ್ತಿ ನಿಗ್ರಹ ಕಾಯ್ದೆ 2016ರ ನಿಯಮಗಳಿಗೆ ಅನುಗುಣವಾಗಿ ಈ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ.

28 ವರ್ಷಗಳ ಮುನ್ನವೇ ಬೇನಾಮಿ ಆಸ್ತಿ ನಿಗ್ರಹ ಕಾನೂನು ರಚಿಸಲಾಗಿದ್ದರೂ ಬಂದಿದ್ದರೂ ಆ ಕಾನೂನನ್ನು ಜಾರಿಗೆ ತರಲು ಅನೇಕ ತಾಂತ್ರಿಕ ತೊಡಕುಗಳಿದ್ದವು. ಇವನ್ನು ಕಳೆದ ವರ್ಷ ಪರಿಹರಿಸಿ, ಈಗ ಕಾನೂನಿನ ಸುಗಮ ಅನುಷ್ಠಾನಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ (ಮಾ. 24) ಹೇಳಿತ್ತು.[ಆರು ತಿಂಗಳಲ್ಲಿ 600 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ ಪತ್ತೆ]

ಈ ಹಿನ್ನೆಲೆಯಲ್ಲಿ, ಬೇನಾಮಿ ಆಸ್ತಿ ಹೊಂದಿರುವರ ವಿರುದ್ಧ ಹೋರಾಡಲು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಆನೆ ಬಲ ಬಂದಂತಾಗಿದ್ದು, ಕಳೆದ ಆರು ತಿಂಗಳಲ್ಲಿ ಇಂಥ 240 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಇಲಾಖೆ, 600 ಕೋಟಿ ರು. ಮೌಲ್ಯದ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.[ಪಾಕ್ ನಲ್ಲಿ ಮೋಸ ಹೋದ ಯುವತಿ ಭಾರತಕ್ಕೆ: ಸುಷ್ಮಾ ಸ್ವಾಗತ]

ಇದೂ ಸಹ ಬೇನಾಮಿ ಆಸ್ತಿಗೆ ಕಾನೂನಿಗೆ ಪರಿಧಿಯದ್ದು

ಇದೂ ಸಹ ಬೇನಾಮಿ ಆಸ್ತಿಗೆ ಕಾನೂನಿಗೆ ಪರಿಧಿಯದ್ದು

[ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಯಲ್ಲಿ ನಾಸಿಕ್ ಪೊಲೀಸರು!][ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಯಲ್ಲಿ ನಾಸಿಕ್ ಪೊಲೀಸರು!]

ತ್ವರಿತ ವಿಚಾರಣೆಗೆ ಅನುಕೂಲ

ತ್ವರಿತ ವಿಚಾರಣೆಗೆ ಅನುಕೂಲ

ಈ ಪ್ರಕರಣದ ಜಾಡು ಹಿಡಿದಿರುವ ತೆರಿಗೆ ಇಲಾಖೆಗೆ ಈಗ ದೇಶದ ಅಲ್ಲಲ್ಲಿ ಬೇನಾಮಿ ಆಸ್ತಿ ನಿಗ್ರಹ ತನಿಖಾ ಕಚೇರಿಗಳನ್ನು ತೆರೆಯುವ ಅವಶ್ಯತೆಯಿದೆಯೆಂಬ ಆಲೋಚನೆ ಬಂದಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ನಿರ್ಧರಿಸಿದೆ. ಇದರಿಂದ ಬೇನಾಮಿ ಆಸ್ತಿ ಪ್ರಕರಣಗಳಲ್ಲಿ ದೂರು ದಾಖಲಿಸಲು, ತ್ವರಿತಗತಿಯಲ್ಲಿ ಕಾರ್ಯಾಚರಣೆ ಅಥವಾ ಆರೋಪಿಗಳ ವಿಚಾರಣೆ ನಡೆಸಲು ಅನುಕೂಲವಾಗುತ್ತದೆ ಎಂಬುದು ಇಲಾಖೆ ಆಲೋಚನೆ.

ಕೆಲವು ಕಡೆ ಎರಡು ಕಚೇರಿ ಸಾಧ್ಯತೆ

ಕೆಲವು ಕಡೆ ಎರಡು ಕಚೇರಿ ಸಾಧ್ಯತೆ

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಒಟ್ಟು 24 ಕಡೆಗೆ ಬೇನಾಮಿ ಆಸ್ತಿ ನಿಗ್ರಹ ತನಿಖಾ ಕಚೇರಿಗಳನ್ನು ಆರಂಭಿಸಲು ನಿರ್ಧಾರವಾಗಿದೆ. ಕೆಲವು ರಾಜ್ಯಗಳಲ್ಲಿ ಅವಶ್ಯವಿದ್ದರೆ ಎರಡು ಕಚೇರಿಗಳನ್ನೂ ಸ್ಥಾಪಿಸಲು ನಿರ್ಧರಿಸಲಾಗಿದೆ.

ತಪ್ಪಿತಸ್ಥರಿಗೆ ಏಳು ವರ್ಷ ಸಜೆ

ತಪ್ಪಿತಸ್ಥರಿಗೆ ಏಳು ವರ್ಷ ಸಜೆ

ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತುಗೊಳ್ಳುವ ಅಪರಾಧಿಗೆ ಏಳು ವರ್ಷಗಳ ಕಠಿಣ ಸಜೆ ಹಾಗೂ ಆತನ ಒಟ್ಟು ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ. 25ರವರೆಗಿನ ಹಣವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಕಳೆದ ವರ್ಷದಿಂದಲೇ ಜಾರಿ

ಕಳೆದ ವರ್ಷದಿಂದಲೇ ಜಾರಿ

ಇಂಥದ್ದೊಂದು ಕಾನೂನಿನ ಅವಶ್ಯಕತೆಯನ್ನು ಮನಗಂಡೇ, ಕೇಂದ್ರ ಸರ್ಕಾರವು ಕಳೆದ 28 ವರ್ಷಗಳಿಂದ ಹಲ್ಲಿಲ್ಲದ ಹಾವಿನಂತೆ ಮಲಗಿದ್ದ ಕಾನೂನಿಗೆ ತಿದ್ದುಪಡಿ ತಂದು ಅನೇಕ ಅಡೆ ತಡೆಗಳನ್ನು ನಿವಾರಿಸಿ ಅದು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಕಳೆದ ವರ್ಷ ನವೆಂಬರ್ 1ರಿಂದಲೇ ಬೇನಾಮಿ ಆಸ್ತಿ ನಿಗ್ರಹ ಕಾನೂನು ಜಾರಿಗೊಂಡಿದೆ.

English summary
The Income-Tax department has set up 24 Benami Prohibition Units across India in the last week under Benami Transactions (Prohibition) Act, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X