ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆಯನ್ನು ಹತ್ಯೆ ಮಾಡಿದವರ ಬಗ್ಗೆ ದ್ವೇಷವಿಲ್ಲ; ರಾಹುಲ್ ಗಾಂಧಿ

|
Google Oneindia Kannada News

ಪುದುಚೇರಿ, ಫೆಬ್ರವರಿ 17; "1991ರಲ್ಲಿ ನಮ್ಮ ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದು ನನಗೆ ಬಹಳ ನೋವು ತಂದಿದೆ. ಇದಕ್ಕೆ ಕಾರಣರಾದವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಪುದುಚೇರಿಯಲ್ಲಿ ಬುಧವಾರ ರಾಹುಲ್ ಗಾಂಧಿ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಆಗ "ಎಲ್‌ಟಿಟಿಐನವರು ನಿಮ್ಮ ತಂದೆಯ ಹತ್ಯೆ ಮಾಡಿದರು. ಅವರ ಬಗ್ಗೆ ನಿಮ್ಮ ಭಾವನೆ ಏನು?" ಎಂಬ ಪ್ರಶ್ನೆಯನ್ನು ಕೇಳಲಾಯಿತು.

ರಾಜೀವ್ ಹಂತಕರ ಬಿಡುಗಡೆ: 3-4 ದಿನದಲ್ಲಿ ತಮಿಳುನಾಡು ರಾಜ್ಯಪಾಲರ ನಿರ್ಧಾರರಾಜೀವ್ ಹಂತಕರ ಬಿಡುಗಡೆ: 3-4 ದಿನದಲ್ಲಿ ತಮಿಳುನಾಡು ರಾಜ್ಯಪಾಲರ ನಿರ್ಧಾರ

"ನನಗೆ ಅವರ ಬಗ್ಗೆ ಯಾವುದೇ ದ್ವೇಷವಿಲ್ಲ. ನಾನು ತಂದೆಯನ್ನು ಕಳೆದುಕೊಂಡೆ ನನ್ನ ಜೀವನದಲ್ಲಿ ಅದು ಅತ್ಯಂತ ಕಷ್ಟದ ಕಾಲವಾಗಿತ್ತು" ಎಂದು ರಾಹುಲ್ ಗಾಂಧಿ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದರು.

ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನ

I forgive Rahul Gandhi Says On His father Rajiv Gandhi Killers

"ನಾನು ಬಹಳ ನೋವು ಅನುಭವಿಸಿದ್ದೇನೆ. ಆದರೆ, ನಾನು ದ್ವೇಷ ಸಾಧಿಸುವುದಿಲ್ಲ. ಅವರ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡುವುದಿಲ್ಲ. ನಾನು ಕ್ಷಮಿಸಿದ್ದೇನೆ" ಎಂದು ರಾಹುಲ್ ಗಾಂಧಿ ತಿಳಿಸಿದರು.

ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಯ ಬಳಿಕದ ರಾಜಕೀಯ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, "ಹಿಂಸೆಯಿಂದ ನೀವು ಏನನ್ನೂ ಪಡೆಯಲು ಸಾಧ್ಯವಿಲ್ಲ. ನನ್ನ ತಂದೆ ನನ್ನ ಜೊತೆ ಜೀವಂತವಾಗಿದ್ದಾರೆ. ನನ್ನ ಜೊತೆ ಮಾತನಾಡುತ್ತಾರೆ" ಎಂದರು.

ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ 'ಸರ್' ಎಂದು ಕರೆಯಬೇಡಿ. ರಾಹುಲ್ ಎಂದು ಕರೆಯಿರಿ ಎಂದು ರಾಹುಲ್ ಗಾಂಧಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಲವಾರು ವಿದ್ಯಾರ್ಥಿಗಳು ಅಣ್ಣಾ ಎಂದು ಪ್ರಶ್ನೆಗಳನ್ನು ಕೇಳಿದರು.

ಸ್ನೇಹಿತರು, ಗೆಳತಿಯರ ಬಗ್ಗೆ ಪ್ರಶ್ನೆ ಕೇಳಲಾಯಿತು. "ನನಗೆ ಹಲವಾರು ಸ್ನೇಹಿತರಿದ್ದಾರೆ. ಅದರಲ್ಲಿ ರಾಜಕೀಯ ರಂಗದವರು, ನನ್ನ ಸಮಾನ ಆಲೋಚನೆ ಹೊಂದಿರುವವರು ಇದ್ದಾರೆ. ಗರ್ಲ್ ಫ್ರೆಂಡ್ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸೋಣ" ಎಂದರು.

ಪುದುಚೇರಿಗೆ ಬುಧವಾರ ಮಧ್ಯಾಹ್ನ ಆಗಮಿಸಿದ ರಾಹುಲ್ ಗಾಂಧಿ ಮೊದಲು ಮೀನುಗಾರರ ಜೊತೆ ಸಂವಾದ ನಡೆಸಿದರು.

English summary
Killing of my father Rajiv Gandhi brought me tremendous pain. But I forgive, I don't have anger or hatred towards anybody said Rahul Gandi in Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X