ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಹೇಗೆ ಬರಲಿ: ವಿಜಯ್ ಮಲ್ಯ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 9: ನಾನು ಭಾರತಕ್ಕೆ ಬರಬೇಕು ಅಂತಿದೀನಿ. ಅದರೆ ಏನು ಮಾಡ್ತೀರಿ, ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನನ್ನ ಹತ್ತಿರ ಪಾಸ್ ಪೋರ್ಟ್ ಇಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ, ತಮ್ಮ ಲಾಯರ್ ಮೂಲಕ ದೆಹಲಿ ಹೈಕೋರ್ಟ್ ತಿಳಿಸಿದ್ದಾರೆ.

ಫೆರಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಲ್ಯ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಮನ್ಸ್ ನಿಂದ ತಪ್ಪಿಸಿಕೊಳ್ಳಲು ಇರುವ ಕಾರಣವನ್ನು ತಮ್ಮ ವಕೀಲರ ಮೂಲಕ ತಿಳಿಸಿದ್ದಾರೆ. ನನ್ನ ಕಕ್ಷಿದಾರರು ಇಲ್ಲಿಗೆ ಬಂದರೆ ಯಾವುದೇ ತೊಂದರೆ ಆಗದಂತೆ ಇರುವುದಕ್ಕೆ ಮತ್ತಷ್ಟು ಸಮಯ ನೀಡಬೇಕು ಎಂದು ಮಲ್ಯ ಪರ ವಕೀಲ ರಮೇಶ್ ಗುಪ್ತಾ ಕೋರ್ಟ್ ಗೆ ತಿಳಿಸಿದ್ದಾರೆ.[ವಿಜಯ್ ಮಲ್ಯಗೆ ಸೇರಿದ 6,600 ಕೋಟಿ ರು. ಆಸ್ತಿ ಜಪ್ತಿ]

I don't have passport, how can i come to India?

ಸ್ವತಃ ಮಲ್ಯ ಕೋರ್ಟ್ ಗೆ ಹಾಜರಾಗಬೇಕು ಎಂದು ಜುಲೈ 9ರಂದು ನ್ಯಾಯಾಲಯ ಸೂಚಿಸಿತ್ತು. ವಕೀಲ ರಮೇಶ್ ಗುಪ್ತಾ, ಏಪ್ರಿಲ್ 23ರಂದು ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಲ್ಯ ಕಳಿಸಿದ ಈ ಮೇಲ್ ಪ್ರತಿಯನ್ನ ತೋರಿಸಿದರು. ಮಲ್ಯಗೆ ಅವಕಾಶ ನೀಡದಂತೆ ಪಾಸ್ ಪೋರ್ಟ್ ಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮಲ್ಯ ವಿರುದ್ಧ ಹಲವು ಕೇಸುಗಳಿವೆ. ಅವುಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ತಿಳಿಸಿತು. ಅಕ್ಟೋಬರ್ 4ರಂದು ಮತ್ತೆ ಪ್ರಕರಣಗಳು ವಿಚಾರಣೆಗೆ ಬರಲಿವೆ, ಅದಕ್ಕೆ ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯ ಸೂಚಿಸಿತು.[ಬಾಕಿ ಇದ್ದರೂ ಮಲ್ಯಗೆ ಹೆಚ್ಚಿನ ಸಾಲ ಸಿಕ್ಕಿದ್ದು ಹೇಗೆ?]

ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ ಅದರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಮನ್ಸ್ ನೀಡಿತ್ತು. 1996, 1997 ಹಾಗೂ 1998ರಲ್ಲಿ ಫಾರ್ಮುಲಾ ಒನ್ ಚಾಂಪಿಯನ್ ಶಿಪ್ ನಡೆಯುವಾಗ ಕಿಂಗ್ ಫಿಶರ್ ಲೋಗೋ ಪ್ರದರ್ಶಿಸುವುದಕ್ಕೆ 2 ಲಕ್ಷ ಅಮೆರಿಕನ್ ಡಾಲರ್ ಅನ್ನು ಬ್ರಿಟಿಷ್ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಅದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಒಪ್ಪಿಗೆ ಪಡೆದಿರಲಿಲ್ಲ. ಇದು ಫೆರಾ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.

ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲು ಜಾರಿ ನಿರ್ದೇಶನಾಲಯ ಕೇಳಿದೆ. 2000 ಡಿಸೆಂಬರ್ ಆದೇಶದ ಅನ್ವಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಲ್ಯ ಸ್ವತಃ ಕೋರ್ಟ್ ಮುಂದೆ ಹಾಜರಾಗಲು ಇರುವ ವಿನಾಯ್ತಿಯನ್ನೂ ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.[ನವೆಂಬರ್ 4ರೊಳಗೆ ಮಲ್ಯರನ್ನು ಭಾರತಕ್ಕೆ ಕರೆ ತನ್ನಿ : ಕೋರ್ಟ್]

ತಮ್ಮ ಬ್ರ್ಯಾಂಡ್ ಗಳ ಪ್ರಮೋಶನ್ ಗಾಗಿ 1995ರ ಡಿಸೆಂಬರ್ ನಲ್ಲಿ ಬೆನೆಟನ್ ಫಾರ್ಮುಲಾ ಲಿಮಿಟೆಡ್ ಜತೆಗೆ ಒಪ್ಪಂದಕ್ಕೆ ಮಲ್ಯ ಸಹಿ ಮಾಡಿದ ನಂತರ ನಾಲ್ಕು ಸಲ ಸಮನ್ಸ್ ಜಾರಿ ಮಾಡಲಾಗಿದೆ. ಪ್ರಕರಣ ಅಂತಿಮ ಹಂತದಲ್ಲಿದೆ. ಅದ್ದರಿಂದ ಪ್ರಶ್ನಿಸುವುದಕ್ಕೆ ಅವರು ಹಾಜರಿರುವುದು ತುಂಬ ಮುಖ್ಯ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

English summary
While explaining why he had evaded summons, liquor baron Vijay Mallya through his counsel told a court that he cannot travel to India as his passport has been suspended. Mallya told a Delhi court that he wants to return home, but does not have a passport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X