ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಸಿನಿಮೋತ್ಸವದಲ್ಲಿ ಮೂಗು ತೂರಿಸಿದ ಕೇಂದ್ರದ ವಿರುದ್ಧ ಆಕ್ರೋಶ

By Sachhidananda Acharya
|
Google Oneindia Kannada News

ನವದೆಹಲಿ, ನವೆಂಬರ್ 14: ಗೋವಾ ಸಿನಿಮೋತ್ಸವಕ್ಕೆ ತೀರ್ಪುಗಾರರು ಆಯ್ಕೆ ಮಾಡಿದ 2 ಸಿನಿಮಾಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಕೈಬಿಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಇಲಾಖೆಯ ಈ ತೀರ್ಮಾನವನ್ನು ಪ್ರತಿಭಟಿಸಿ ತೀರ್ಪುಗಾರರ ಮುಖ್ಯಸ್ಥ ಸುಜೋಯ್ ಘೋಷ್ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.

ಸೆಕ್ಸಿ ದುರ್ಗಾ (ಮುಂದೆ ಇದನ್ನು ಎಸ್ ದುರ್ಗಾ ಎಂದು ಮರು ನಾಮಕರಣ ಮಾಡಲಾಯಿತು) ಮತ್ತು ನ್ಯೂಡ್ ಸಿನಿಮಾಗಳನ್ನು ಭಾರತೀಯ ಅಂತರಾಷ್ಟ್ರೀಯ ಸಿನಿಮೋತ್ಸವ ಆಯ್ಕೆ ಪಟ್ಟಿಯಿಂದ ಕೈ ಬಿಡಲಾಗಿದೆ.

I&B Ministry's Interference In Goa Film Fest, Sujoy Ghosh Quits As Jury Chairperson

13 ಸದಸ್ಯರ ಐಎಫ್ಎಫ್ಐ ತೀರ್ಪುಗಾರರ ತಂಡ ಈ ಸಿನಿಮಾಗಳನ್ನು ಆಯ್ಕೆ ಮಾಡಿದ ಹೊರತಾಗಿಯೂ ಇಲಾಖೆ ಮೂಗು ತೂರಿಸಿ ಈ ಸಿನಿಮಾಗಳನ್ನು ಪಟ್ಟಿಯಿಂದ ಕಿತ್ತು ಹಾಕಿದೆ.

ಮಾಹಿತಿ ಮತ್ತು ಪ್ರಸಾರ ಇಲಾಖೆಯ ತೀರ್ಮಾನಕ್ಕೆ ಪಟ್ಟಿಯಿಂದ ತೆಗೆದು ಹಾಕಲ್ಪಟ್ಟ ಎರಡೂ ಸಿನಿಮಾಗಳ ನಿರ್ದೇಶಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಸೆಕ್ಸಿ ದುರ್ಗಾ ಬಿಡುಗಡೆಗೆ ಅಡೆತಡೆಗಳನ್ನು ಎದುರಿಸುತ್ತಿರುವ ಮಧ್ಯೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ರೊಟ್ಟೆರ್ ಡ್ಯಾಮ್ ಅಂತರಾಷ್ಟ್ರೀಯ ಸಿನಿಮೋತ್ಸವದ ಟೈಗರ್ ಅವಾರ್ಡ್ ಪ್ರಶಸ್ತಿಯನ್ನೂ ಈ ಸಿನಿಮಾ ಗೆದ್ದಿದೆ.

ಶ್ಯಾಮ್ ಬೆನಗಲ್ ಕಿಡಿ

ಕೇಂದ್ರ ಸರಕಾರದ ತೀರ್ಮಾನಕ್ಕೆ ಹಿರಿಯ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಜ್ಯೂರಿಗಳ ತೀರ್ಮಾನ ತಳ್ಳಿ ಹಾಕುವುದಾದರೆ ಅವರ ಹುದ್ದೆಗೆ ಅರ್ಥವೇ ಇಲ್ಲ. ಸುಜಯ್ ಘೋಷ್ ಮಾಡಿದ ತೀರ್ಮಾನ ಸರಿಯಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ ಪಣಜಿಯಲ್ಲಿ ನವೆಂಬರ್ 20ರಿಂದ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದೆ.

English summary
The Information and Broadcasting Ministry dropped Sexy Durga and Nude films from the selection of the International Film Festival of India, slated to take place in Panjim from November 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X