ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮದ ಬಗ್ಗೆ ಕೇಳಿದ್ದಕ್ಕೆ ಕೋರ್ಟ್ ನಲ್ಲಿ 'ನಾನು ಭಾರತೀಯ' ಎಂದ ಸಲ್ಲು

1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಎಂಬ ಬಾಲಿವುಡ್ ಚಿತ್ರದ ಶೂಟಿಂಗ್ ಗಾಗಿ ಜೋಧ್ ಪುರಕ್ಕೆ ಬಂದಿದ್ದ ಸಲ್ಮಾನ್ ಖಾನ್, ಅಲ್ಲಿ ಕೃಷ್ಣ ಮೃಗಗಳನ್ನು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ಜೋಧ್ ಪುರ ನ್ಯಾಯಾಲಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಯ

|
Google Oneindia Kannada News

ಜೋಧ್ ಪುರ, ಜನವರಿ 27: 'ನಾನು ಭಾರತೀಯ' - ಇದು ಬಾಲಿವುಡ್ ನಟ ಸಲ್ಮಾನ್ ಖಾನ್, ಶುಕ್ರವಾರ ಜೋಧ್ ಪುರ ಕೋರ್ಟ್ ನಲ್ಲಿ 'ನಿಮ್ಮ ಧರ್ಮ ಯಾವುದು' ಅಂತ ವಕೀಲರು ಕೇಳಿದ್ದ ಪ್ರಶ್ನೆಗೆ ನೀಡಿದ ಸಿನ್ಮೀ ಸ್ಟೈಲ್ ಉತ್ತರ.

1998ರಲ್ಲಿ ಹಮ್ ಸಾಥ್ ಸಾಥ್ ಹೈ ಎಂಬ ಬಾಲಿವುಡ್ ಚಿತ್ರದ ಶೂಟಿಂಗ್ ಗಾಗಿ ಜೋಧ್ ಪುರಕ್ಕೆ ಬಂದಿದ್ದ ಸಲ್ಮಾನ್ ಖಾನ್, ಅಲ್ಲಿ ಕೃಷ್ಣ ಮೃಗಗಳನ್ನು ಬೇಟಿಯಾಡಿದ ಆರೋಪ ಎದುರಿಸುತ್ತಿದ್ದಾರೆ. ಜೋಧ್ ಪುರ ನ್ಯಾಯಾಲಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಯುತ್ತಿದ್ದು ಶುಕ್ರವಾರ ಅವರು ವಿಚಾರಣೆಗೆ ಹಾಜರಾಗಿದ್ದರು.

I Am Indian, Salman Khan Says In Court, Asked To State Religion

ಅದು ನ್ಯಾಯಾಲಯ. ನಿಯಮಗಳಂತೆ, ವಿಚಾರಣೆಗಾಗಿ ಕಟಕಟೆಗೆ ಆಗಮಿಸುವವರ ಪರಿಚಯ ಮಾಡಿಕೊಳ್ಳಬೇಕಾತ್ತದೆ. ಆ ನಿಟ್ಟಿನಲ್ಲಿ ತಮ್ಮನ್ನು ವಿಚಾರಣೆಗೊಳಪಡಿಸುವ ವಕೀಲರು, ನಿಮ್ಮ ಹೆಸರೇನು, ಯಾವ ಊರು, ಏನು ಮಾಡುತ್ತಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗೆಯೇ, ನಿಮ್ಮ ಧರ್ಮ ಯಾವುದು ಎಂಬ ಪ್ರಶ್ನೆಯೂ ಬರುತ್ತದೆ. ಅದು ತಪ್ಪಲ್ಲ.

ಆದರೆ, ನಟ ಸಲ್ಮಾನ್ ಖಾನ್ ಮಾತ್ರ ಪಕ್ಕಾ ಸಿನಿಮಾ ಶೈಲಿಯಲ್ಲಿ ಧರ್ಮ ಯಾವುದು ಅನ್ನೋ ಪ್ರಶ್ನೆಗೆ ನಾನು ಭಾರತೀಯ ಎಂದಿದ್ದಾರೆ. ಇದಕ್ಕೆ ನ್ಯಾಯಾಲಯದಲ್ಲಿ ಅಪಾರ ಸಿಳ್ಳೆ, ಚಪ್ಪಾಳೆ ಬರುತ್ತವೆ ಎಂದು ತಿಳಿದಿದ್ದರೋ ಏನೋ, ಅದು ಅವರಿಗೇ ಗೊತ್ತು. ಆದರೆ, ಅವರ ಉತ್ತರ ಆ ಕೋರ್ಟ್ ಕೊಠಡಿಯಲ್ಲಿ ಪ್ರತಿಧ್ವನಿಸಿದೆಯಷ್ಟೇ. ಹೆಚ್ಚೇನೂ ಪರಿಣಾಮ ಬೀರಲಿಲ್ಲ. ಆನಂತರ ಮುಂದುವರಿದ ವಿಚಾರಣೆಯಲ್ಲಿ ಸಲ್ಮಾನ್ ಅವರಿಗೆ ಬರೋಬ್ಬರಿ 65 ಪ್ರಶ್ನೆಗಳನ್ನು ಪ್ರಾಸಿಕ್ಯೂಷನ್ ವಕೀಲರು ಕೇಳಿದ್ದಾರೆ.

ಅಂದಹಾಗೆ, ಸಲ್ಲು ಭಾಯ್ ಧರ್ಮದ ವಿಚಾರ ಬಂದಾಗ ನಾನು ಭಾರತೀಯ ಅಂತ ಹೇಳೋದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಈ ಪ್ರಕರಣ ರಾಜಸ್ಥಾನ ಹೈಕೋರ್ಟ್ ನಲ್ಲಿದ್ದಾಗಲೂ ವಿಚಾರಣೆ ಎದುರಿಸಲು ಬಂದಿದ್ದ ಸಲ್ಮು ಮಿಯಾ, ಹೀಗೇ ಉತ್ತರಿಸಿದ್ದರು.

English summary
"I am Indian," actor Salman Khan said today in a court in Rajasthan's Jodhpur, where he was questioned on allegations of killing blackbucks during a film shoot in 1998.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X