ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಆರೋಗ್ಯವಾಗಿದ್ದೇನೆː ಅಬ್ದುಲ್ ಕಲಾಂ

By ಡಾ.ಅನಂತ ಕೃಷ್ಣನ್ .ಎಂ
|
Google Oneindia Kannada News

ನವದೆಹಲಿ, ಅ. 23 : ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವದಂತಿಗಳಿಗೆ ಜನ ಬೆಲೆ ನೀಡಬಾರದು. ಅವರು ಆರೋಗ್ಯವಾಗಿದ್ದಾರೆ ಎಂದು ಕಲಾಂ ಕಚೇರಿ ಮೂಲಗಳು ತಿಳಿಸಿವೆ.

ಕಲಾಂ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಕಳೆದ ವಾರ ದೆಹಲಿಯಲ್ಲಿ ಸದ್ದು ಮಾಡಿತ್ತು. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಕಲಾಂ ತಮ್ಮ ನಿವಾಸದಲ್ಲಿ ಇಲ್ಲದಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದವು.[ನಾನು ಗುರಿ ಮುಟ್ಟಿದ್ದೇನೆ, ನೀವು? ಯುವಕರಿಗೆ ಕಲಾಂ ಪ್ರಶ್ನೆ]

kalam

ಆದರೆ ಕಲಾಂ ಢಾಕಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಇತ್ತೀಚಿಗೆ ಅಷ್ಟೇ ಜನ್ಮದಿನ ಆಚರಿಸಿಕೊಂಡ ವಿಜ್ಞಾನಿ ಆರೋಗ್ಯದಿಂದಿದ್ದಾರೆ. ಅವರು ತಮ್ಮ ಕೆಲಸ ಮತ್ತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ ಎಂದು ಕಲಾಂ ಕಚೇರಿ ಒನ್ ಇಂಡಿಯಾಗೆ ತಿಳಿಸುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದೆ.

ವದಂತಿ ಹರಡಿದ್ದು ಹೇಗೆ?
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹರಡಿದ ಸಂದೇಶವೊಂದು ಇಷ್ಟೆಲ್ಲ ಅವಗಢ ಸಂಭವಿಸಲು ಕಾರಣವಾಗಿದೆ. ಡಾ.ಕಲಾಂ 'ನಾನು ಆರೋಗ್ಯವಾಗಿದ್ದೇನೆ. ಇಂಥ ಸಂದೇಶಗಳು ಸತ್ಯಕ್ಕೆ ದೂರವಾದವು' ಎಂದು ಟ್ವೀಟ್ ಮಾಡುವ ಮೂಲಕ ಎಲ್ಲ ಅನುಮಾನಗಳು ಕೊನೆಗೊಂಡಿವೆ. ಅಲ್ಲದೇ ಕಲಾಂ ಜನತೆಗೆ ದೀಪಾವಳಿ ಶುಭಾಷಯವನ್ನು ಕೋರಿದ್ದಾರೆ.[ಅಣುಶಕ್ತಿ, ಜ್ಞಾನಶಕ್ತಿ, ಮತದಾನ ಬಗ್ಗೆ ಕಲಾಂ ಪಾಠ]

ಇಂಥ ವರದಿಗಳನ್ನು ಪ್ರಸಾರ ಮಾಡುವ ಮೊದಲು ಇನ್ನೊಮ್ಮೆ ಪರಿಶೀಲಿಸುವುವುದು ಉತ್ತಮ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ ಒಮ್ಮೆ ಅಲ್ಲಿಗೆ ಭೇಟಿ ನೀಡಿ ಅಕೌಂಟ್ ಪರೀಕ್ಷಿಸಿ ಮುಂದುವರಿಯಬೇಕು. ವದಂತಿಗಳನ್ನೇ ಸುದ್ದಿ ಎಂದು ಪ್ರಸಾರ ಮಾಡುವುದು ಸರಿಯಲ್ಲ ಎಂದು ಕೇರಳ ಕೌಮುದಿ ಮಲೆಯಾಳಂ ಪತ್ರಿಕೆಯ ದೆಹಲಿ ಮುಖ್ಯಸ್ಥ ಪ್ರಸೀನ್ ಕಂದಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಮೊದಲ್ಲ
ಕಲಾಂಗೆ ಅನಾರೋಗ್ಯ ಎಂಬ ವದಂತಿಗಳು ಹರಡುತ್ತಿರುವುದು ಇದೇ ಮೊದಲಲ್ಲ. ಹಿಂದೊಮ್ಮೆ ಕಲಾಂ ಆರೋಗ್ಯ ಹದಗೆಟ್ಟಿದೆ ಎಂಬ ಮಾಹಿತಿ ಮುಂಬೈನಿಂದ ಪ್ರಸಾರವಾಗಿತ್ತು. 2011ರಲ್ಲಿ ಕಲಾಂ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಬಾಹ್ಯಾಕಾಶ ವಿಜ್ಞಾನಿ ಹಫೀಜ್ ಸಯೀದ್ ಮಹಮದ್ ಅಲ್ಲಾದೀನ್ ಸಾವನ್ನು ಕಲಾಂ ಸಾವು ಎಂದು ತಪ್ಪಾಗಿ ಭಾವಿಸಲಾಗಿತ್ತು.

ಕಲಾಂ ಆರೋಗ್ಯದ ಬಗ್ಗೆ ಇಂಥ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ನಿಗಾ ಇಡಬೇಕಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಜ್ವರದಿಂದ ಆಸ್ಪತ್ರೆ ಸೇರಿದ್ದೆ ಕೊನೆ. ನಂತರ ಕಲಾಂ ಆರೋಗ್ಯ ಸ್ಥಿರವಾಗಿದೆ ಎಂದು ಕಚೇರಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಅಪಾರ ಅಭಿಮಾನಿಗಳನ್ನು ಹೊಂದಿರುವ ಕಲಾಂ ಅಂಥವರ ಕುರಿತು ಇಂಥ ಸುದ್ದಿಗಳು ಹರಿದಾಡಿದರೆ ಅಪಾಯ ಎದುರಾಗಬಹುದು. ಇಂಥ ಅಸಂಬದ್ಧ ಸಂದೇಶಗಳು ಸಮಾಜದ ಶಾಂತಿ ಕದಡಲು ಕಾರಣವಾಗಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
The rumour mills are at it again. They seem to be hovering over India's Missile Man Dr APJ Abdul Kalam, spreading rumours on the octogenarian scientist's health. However, his office has categorically clarified that the former President is hale and hearty. "He is absolutely fine. He is at work," a close aide told OneIndia on Thursday, Oct 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X