• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮುಂದಿನ ವರ್ಷದಿಂದ ಹೈಡ್ರೋಜನ್ ಚಾಲಿತ ರೈಲು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 16: ಭಾರತವು ಹೈಡ್ರೋಜನ್ ಚಾಲಿತ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 2023ರ ವೇಳೆಗೆ ಸಿದ್ಧಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭುವನೇಶ್ವರದಲ್ಲಿರುವ ಎಸ್‌ಒಎ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಸಚಿವ ವೈಷ್ಣವ್‌, ಭಾರತೀಯ ರೈಲ್ವೇ ತನ್ನ ಗತಿ ಶಕ್ತಿ ಟರ್ಮಿನಲ್‌ಗಳ ನೀತಿಯ ಮೂಲಕ ದೇಶದ ದೂರದ ಮತ್ತು ಸಂಪರ್ಕವಿಲ್ಲದ ಪ್ರದೇಶಗಳನ್ನು ರೈಲ್ವೇ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಈ ನೀತಿಯ ಕೆಲಸ ತ್ವರಿತಗತಿಯಲ್ಲಿದೆ ಎಂದು ಹೇಳಿದರು.

ಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿ

ವಂದೇಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈ ಸ್ಪೀಡ್ ಮತ್ತು ಅತಿ ವೇಗದ ರೈಲುಗಳಲ್ಲಿ ಒಂದನ್ನು ಭಾರತದಲ್ಲಿ ಆಂತರಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ರೈಲು ಯಾವುದೇ ದೊಡ್ಡ ಸ್ಥಗಿತವಿಲ್ಲದೆ ಸರಾಗವಾಗಿ ಚಲಿಸುತ್ತಿದೆ. ಎಕ್ಸ್‌ಪ್ರೆಸ್ ರೈಲುಗಳನ್ನು ಐಸಿಎಫ್‌ನಲ್ಲಿ ತಯಾರಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಸೇವೆಗೆ ಒದಗಿಸಲಾಗುವುದು ಎಂದು ಹೇಳಿದರು.

ಇತ್ತೀಚೆಗೆ ರೈಲ್ವೇ ಸುರಕ್ಷತಾ ಆಯುಕ್ತರಿಂದ ವಂದೇ ಭಾರತ್‌ಗೆ ಹಸಿರು ನಿಶಾನೆ ಸಿಕ್ಕಿದೆ. ರೈಲು ಮತ್ತು ಹಳಿಗಳ ನಿರ್ವಹಣೆ ಕುರಿತು ಮಾತನಾಡಿದ ಸಚಿವರು, "ನಮ್ಮ ಗಮನ ಕೇವಲ ರೈಲುಗಳನ್ನು ತಯಾರಿಸುವುದು ಮಾತ್ರವಲ್ಲ, ಅರೆ-ಹೈ ಅಥವಾ ಹೈಸ್ಪೀಡ್ ರೈಲುಗಳನ್ನು ಓಡಿಸಲು ನಾವು ಟ್ರ್ಯಾಕ್ ನಿರ್ವಹಣಾ ವ್ಯವಸ್ಥೆಯಲ್ಲಿ ಶ್ರಮಿಸುತ್ತಿದ್ದೇವೆ. ವಂದೇ ಪ್ರಯೋಗದ ಸಮಯದಲ್ಲಿ 180 ಕಿಲೋಮೀಟರ್ ವೇಗದಲ್ಲಿ ಸಂಪೂರ್ಣವಾಗಿ ತುಂಬಿದ ನೀರಿನ ಲೋಟವು ಅಲುಗಾಡಲಿಲ್ಲ. ಈ ವಂದೇ ಭಾರತ್‌ ಅದು ಜಗತ್ತನ್ನು ಬೆಚ್ಚಿಬೀಳಿಸಿದೆ'' ಎಂದು ನಾವು ಈಗಾಗಲೇ ತೋರಿಸಿದ್ದೇವೆ ಎಂದರು.

52 ಸೆಕೆಂಡುಗಳಲ್ಲಿ 100 ಕಿಮೀ ವೇಗ

52 ಸೆಕೆಂಡುಗಳಲ್ಲಿ 100 ಕಿಮೀ ವೇಗ

ವಂದೇ ಭಾರತ್‌ನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಈಗ ಉಳಿದ 72 ರೈಲುಗಳ ಸರಣಿ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮೂರನೇ ವಂದೇ ಭಾರತ್ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿಲೋಮೀಟರ್ ಎಂಬುದು ಗಮನಾರ್ಹ. ಬುಲೆಟ್ ಟ್ರೈನ್ ತೆಗೆದುಕೊಂಡ 55 ಸೆಕೆಂಡ್‌ಗಳಿಗೆ ಹೋಲಿಸಿದರೆ ಇದು 52 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪಿತು. ಮೊದಲ ತಲೆಮಾರಿನ ವಂದೇ ಭಾರತ್ ರೈಲುಗಳು 0-100 ಕಿಮೀ ವೇಗವನ್ನು 54.6 ಸೆಕೆಂಡ್‌ಗಳಲ್ಲಿ ತಲುಪುತ್ತವೆ ಮತ್ತು ಗರಿಷ್ಠ 160 ಕಿಮೀ ವೇಗವನ್ನು ಹೊಂದಿವೆ ಎಂದು ಅವರು ಹೇಳಿದರು.

ರೈಲ್ವೆ ಇಲಾಖೆ ಆದಾಯದಲ್ಲಿ 26,271 ಕೋಟಿ ರೂ. ಹೆಚ್ಚಳರೈಲ್ವೆ ಇಲಾಖೆ ಆದಾಯದಲ್ಲಿ 26,271 ಕೋಟಿ ರೂ. ಹೆಚ್ಚಳ

ನವದೆಹಲಿ- ವೈಷ್ಣೋದೇವಿ ಕತ್ರಾ ನಡುವೆ ರೈಲು

ನವದೆಹಲಿ- ವೈಷ್ಣೋದೇವಿ ಕತ್ರಾ ನಡುವೆ ರೈಲು

ಪ್ರಸ್ತುತ, ಎರಡು ರೈಲುಗಳು ನವದೆಹಲಿ- ವಾರಣಾಸಿ ಮತ್ತು ನವದೆಹಲಿ- ವೈಷ್ಣೋದೇವಿ ಕತ್ರಾ ನಡುವೆ ಕಾರ್ಯನಿರ್ವಹಿಸುತ್ತಿವೆ. ಈ ಮೂರನೇ ರೈಲು ಬೆಂಗಳೂರಿನಿಂದ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದೆ. ಬಹು ನಿರೀಕ್ಷಿತ ಹೊಸದಾಗಿ ತಯಾರಿಸಲಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್‌ಗೆ ರೈಲ್ವೇ ಸುರಕ್ಷತಾ ಆಯುಕ್ತ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ.

180 ಕಿಮೀ ವೇಗದಲ್ಲಿ ಓಡುವ ರೈಲು

180 ಕಿಮೀ ವೇಗದಲ್ಲಿ ಓಡುವ ರೈಲು

"ವಂದೇ ಭಾರತ್ ರೈಲಿನ ಮೂರನೇ ರೇಕ್‌ನ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ. ಇದು ಭಾರತೀಯ ರೈಲ್ವೆಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಗಮನ ಕೇವಲ ರೈಲುಗಳನ್ನು ತಯಾರಿಸುವುದು ಅಲ್ಲ. ನಾವು ಹೈಸ್ಪೀಡ್ ರೈಲುಗಳನ್ನು ಓಡಿಸಲು ಟ್ರ್ಯಾಕ್ ನಿರ್ವಹಣಾ ವ್ಯವಸ್ಥೆಯಲ್ಲಿ ಶ್ರಮಿಸುತ್ತಿದ್ದೇವೆ. ವಂದೇ ಭಾರತ್ ಪ್ರಾಯೋಗಿಕ ಚಾಲನೆಯಲ್ಲಿ ನಾವು ಈಗಾಗಲೇ 180 ಕಿಮೀ ವೇಗದಲ್ಲಿ ಓಡಿಸಿ ತೋರಿಸಿದ್ದೇವೆ ಎಂದು ತೋರಿಸಿದೆ. ವಂದೇ ಭಾರತ್‌ನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಈಗ ಉಳಿದ 72 ರೈಲುಗಳ ಸರಣಿ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ವೈಷ್ಣವ್ ಮಾಹಿತಿ ನೀಡಿದರು.

ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ವ್ಯವಸ್ಥೆ

ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ವ್ಯವಸ್ಥೆ

ಹೊಸ ವಂದೇ ಭಾರತ್ ರೈಲುಗಳಲ್ಲಿ ಒರಗುವ ಆಸನಗಳು, ಸ್ವಯಂಚಾಲಿತ ಅಗ್ನಿ ಸಂವೇದಕಗಳು, ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ, ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್ ಮತ್ತು ಜಿಪಿಎಸ್ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು ಪ್ರಯಾಣವನ್ನು ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ. ಐಸಿಎಫ್ ಆಗಸ್ಟ್ 2023ರ ವೇಳೆಗೆ 75 ವಂದೇ ಭಾರತ್ ರೈಲುಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

English summary
India is developing hydrogen powered trains and they will be ready by 2023, Union Railway Minister Ashwini Vaishnav has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X