ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ನಲ್ಲಿ ರೇಪಿಸ್ಟ್ ಗಳ ಎನ್ಕೌಂಟರ್: ಕಾಡುವ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ?

|
Google Oneindia Kannada News

Recommended Video

Disha gets justice,Twitter applauds Hyderabad police for encountering four accused.

"ಇಂತಹ ರಾಕ್ಷಸರಿಗೆ ಕ್ಷಮಾದಾನ ಎನ್ನುವ ಪದವಿರುವುದೇ ನಮ್ಮ ವ್ಯವಸ್ಥೆಯ ದುರಂತ" ಎನ್ನುವ ಮಾತನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹೈದರಾಬಾದಿನ ಪಶುವೈದ್ಯಯ ಮೇಲೆ ನಡೆದ ಘೋರ ಕೃತ್ಯವನ್ನು ಉಲ್ಲೇಖಿಸಿ ಹೇಳಿದ್ದರು.

ಇಂತಹ ಅಪರಾಧಿಗಳು ಬಚಾವ್ ಆಗಲು, ಎಷ್ಟೊಂದು ದಾರಿಗಳು ನಮ್ಮ ಕಾನೂನಿನಲ್ಲಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್, ಗೃಹಸಚಿವಾಲಯ, ರಾಷ್ಟ್ರಪತಿಗಳ ತನಕ, ಇಂತಹ ಸಮಾಜದ ದುಷ್ಟ ಕ್ರಿಮಿಗಳು, ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶ ನಮ್ಮ ಕಾನೂನಿನಲ್ಲಿದೆ.

ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಸಜ್ಜನವರ ಯಾರು?

ಕರ್ನಾಟಕ, ಆಂಧ್ರ, ಗುಜರಾತ್ ಮುಂತಾದೆಡೆ ಒಂಟಿ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ, ಕುತ್ತಿಗೆ ಸೀಳಿ ಕೊಲ್ಲುತ್ತಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿಗೂ ಹತ್ತು ಪ್ರಕರಣಗಳಲ್ಲಿ, ಮರಣದಂಡನೆ ವಿಧಿಸಲಾಗಿತ್ತು, ಆದರೆ ಈತನ ಕ್ಷಮಾದಾನದ ಬೇಡಿಕೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಮುಂದಿದೆ. ಹಿಂಡಲಗಾ ಜೈಲಿನಲ್ಲಿ ಈಗಲೂ ಈತ ಆರಾಮಾಗಿದ್ದಾನೆ.

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?

ರಾಜಧಾನಿ ದೆಹಲಿಯಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಡಿಸೆಂಬರ್ 2012ರಲ್ಲಿ ಈ ಕೃತ್ಯ ನಡೆಯಿತು. ಅಂದರೆ, ಇಂದಿಗೆ ಸುಮಾರು ಏಳು ವರ್ಷಗಳ ಹಿಂದೆ ನಡೆದ ಘಟನೆಯಿದು. ಕಾಡುವ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ?

ನಿರ್ಭಯಾ ಕೇಸಿನ ನಾಲ್ವರು ರೇಪಿಸ್ಟು ಗಳು

ನಿರ್ಭಯಾ ಕೇಸಿನ ನಾಲ್ವರು ರೇಪಿಸ್ಟು ಗಳು

ನಿರ್ಭಯಾ ಕೇಸಿನ ನಾಲ್ವರು ರೇಪಿಸ್ಟುಗಳಿಗೆ ರಾಷ್ಟ್ರಪತಿಗಳ ಬಳಿ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಲು ಇನ್ನೂ ಏಳು ದಿನಗಳ ಕಾಲಾವಕಾಶವಿದೆ. ಮನವಿಯನ್ನು ಸಲ್ಲಿಸದೇ ಇದ್ದರೆ, ಸದ್ಯವೇ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ತಿಹಾರ್ ಜೈಲಿನ ಅಧಿಕಾರಿಗಳು, ಗುರುವಾರ (ಡಿ 5) ಹೇಳಿದ್ದಾರೆ. ಇದು ನಮ್ಮ ವ್ಯವಸ್ಥೆ...

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮೇಲೆ, ಕ್ರೌರ್ಯದ ಪರಾಕಾಷ್ಠೆ

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮೇಲೆ, ಕ್ರೌರ್ಯದ ಪರಾಕಾಷ್ಠೆ

ಇನ್ನು ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮೇಲೆ, ಕ್ರೌರ್ಯದ ಪರಾಕಾಷ್ಠೆ ಎನ್ನುವಂತೆ, ಗುರುವಾರ (ಡಿ 5) ಕೊಲೆಯ ಪ್ರಯತ್ನ ನಡೆದಿದೆ. ಐವರು ಆರೋಪಿಗಳು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಲು ನೋಡಿದ್ದಾರೆ. ಶೇ. 90ರಷ್ಟು ಸುಟ್ಟುಹೋಗಿರುವ ಈಕೆಯನ್ನು, ಏರ್ ಲಿಫ್ಟ್ ಮೂಲಕ, ದೆಹಲಿಯ ಸಫ್ದರ್ ಜಂಘ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮುವಿನ ಕಥುವಾದಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಕ್ರೌರ್ಯ

ಜಮ್ಮುವಿನ ಕಥುವಾದಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಕ್ರೌರ್ಯ

ಜಮ್ಮುವಿನ ಕಥುವಾದಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ, ಒಂದು ವಾರದಿಂದ ಅತ್ಯಾಚಾರ ನಡೆಸಿ, ಕೊಲೆಗೈಯಲಾಯಿತು. ಅದೂ, ದೇವಾಲಯದ ಆವರಣದಲ್ಲಿ. ಈ ಘಟನೆ ನಡೆದದ್ದು ಜನವರಿ 2018ರಲ್ಲಿ, ಈ ಪ್ರಕರಣಕ್ಕೂ ಹೆಚ್ಚುಕಮ್ಮಿ ಎರಡು ವರ್ಷವಾಗುತ್ತಾ ಬಂತು. ಎಂಟು ರಾಕ್ಷಕರು ನಡೆಸಿದ ಪೈಶಾಚಿಕ ಕೃತ್ಯ ಇದಾಗಿತ್ತು.

ಅತ್ಯಾಚಾರಗೊಂಡು, ಕೊಲೆಯಾಗಿದ್ದು ತೆಲಂಗಾಣದ ಪಶುವೈದ್ಯೆ

ಅತ್ಯಾಚಾರಗೊಂಡು, ಕೊಲೆಯಾಗಿದ್ದು ತೆಲಂಗಾಣದ ಪಶುವೈದ್ಯೆ

ಇದೇ ರೀತಿ, ಕೆಲವು ದಿನಗಳ ಹಿಂದೆ, ಅತ್ಯಾಚಾರಗೊಂಡು, ಕೊಲೆಯಾಗಿದ್ದು ತೆಲಂಗಾಣದ ಪಶುವೈದ್ಯೆ. ಈ ಪ್ರಕರಣ ವರದಿಯಾಗುತ್ತಿದ್ದಂತೇ, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎನ್ನುವ ಆಗ್ರಹ ಜಾಸ್ತಿಯಾಗ ತೊಡಗಿತು. ಆದರೆ, ಶುಕ್ರವಾರ (ಡಿ 6) ಬೆಳ್ಳಂಬೆಳಗ್ಗೆ ನಡೆದ ಹೈದರಾಬಾದ್ ಪೊಲೀಸರ ಎನ್ಕೌಂಟರ್ ನಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದರು.

ಅತ್ಯಾಚಾರ, ಕೊಲೆ ಮಾಡಿದ ನಾಲ್ವರು ರಕ್ತಪಿಪಾಸುಗಳು

ಅತ್ಯಾಚಾರ, ಕೊಲೆ ಮಾಡಿದ ನಾಲ್ವರು ರಕ್ತಪಿಪಾಸುಗಳು

ಪಶುವೈದ್ಯೆಯನ್ನು ನಿರ್ದಯವಾಗಿ ಅತ್ಯಾಚಾರ, ಕೊಲೆ ಮಾಡಿದ ನಾಲ್ವರು ರಕ್ತಪಿಪಾಸುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸರು ಇನ್ನಿಲ್ಲದ ಭದ್ರತೆ ಕಲ್ಪಿಸಬೇಕಾಯಿತು, ಜನರನ್ನು ಚದುರಿಸಲು ಲಾಠಿ ಚಾರ್ಜ್ ಕೂಡಾ ಮಾಡಬೇಕಾಯಿತು. ಒಂದು ವೇಳೆ, ಪೊಲೀಸರೆನಾದರೂ, ಭದ್ರತೆ ಸಡಿಲಗೊಳಿಸಿದ್ದರೆ ಜನರೇ ಹೊಡೆದು ಸಾಯಿಸಿಬಿಡುತ್ತಿದ್ದರೇನೋ? ಇದು ಜನರಿಗಿರುವ ಆಕ್ರೋಶ.

ಎಲ್ಲಿ ನಿರ್ದಯವಾಗಿ ಸುಟ್ಟಿದ್ದರೋ, ಅಲ್ಲೇ ಎನ್ಕೌಂಟರ್

ಎಲ್ಲಿ ನಿರ್ದಯವಾಗಿ ಸುಟ್ಟಿದ್ದರೋ, ಅಲ್ಲೇ ಎನ್ಕೌಂಟರ್

ಇದನ್ನೆಲ್ಲ ನೋಡಿಯೂ ಸುಮ್ಮನಿರುವ ಸಮಾಜ ನಮ್ಮದು, ಅತ್ಯಾಚಾರಿಗಳಲ್ಲೂ ಯಾವ ಕೋಮಿನವರು ಎನ್ನುವ ಭೇದಭಾವ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಕೊಲೆ, ಕಾನೂನಿನ ಕುಣಿಕೆಗೆ ಹೋದರೆ, ನ್ಯಾಯ ಸಿಗಲು ಇನ್ನೊಂದು ದಶಕ ಬೇಕಾಗಬಹುದೇನೋ? ಪಶುವೈದ್ಯೆಯನ್ನು ಎಲ್ಲಿ ನಿರ್ದಯವಾಗಿ ಸುಟ್ಟಿದ್ದರೋ, ಅಲ್ಲೇ ಹೈದರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿ, ನಾಲ್ವರನ್ನು ಯಮಲೋಕಕ್ಕೆ ಅಟ್ಟಿದ್ದಾರೆ.

ಹೈದರಾಬಾದ್ ಪೊಲೀಸರಿಗೆ ಹೂಗುಚ್ಚ ನೀಡುತ್ತಿದ್ದಾರೆ

ಹೈದರಾಬಾದ್ ಪೊಲೀಸರಿಗೆ ಹೂಗುಚ್ಚ ನೀಡುತ್ತಿದ್ದಾರೆ

ಹೈದರಾಬಾದ್ ಪೊಲೀಸರ ದಿಟ್ಟನಡೆಗೆ ದೇಶವೇ ಉಘೇ..ಉಘೇ.. ಅನ್ನುತ್ತಿದೆ. ಪಶುವೈದ್ಯೆಯನ್ನು ಎನ್ಕೌಂಟರ್ ಮಾಡಿದ ಜಾಗದಿಂದ ಹಾದುಹೋಗುವ ವಿದ್ಯಾರ್ಥಿಗಳು ಪೊಲೀಸರಿಗೆ ಚಪ್ಪಾಳೆ ಹೊಡೆಯುತ್ತಿದ್ದಾರೆ. ಸಾರ್ವಜನಿಕರು ತಂಡತಂಡವಾಗಿ ಬಂದು, ಹೈದರಾಬಾದ್ ಪೊಲೀಸರಿಗೆ ಹೂಗುಚ್ಚ ನೀಡುತ್ತಿದ್ದಾರೆ. No Mercy To Rapists.. ಎನ್ನುವುದು ಸತ್ಯವಾದ ಮಾತು. ಆದರೆ ಈ ರೀತಿಯ ಎನ್ಕೌಂಟರ್, ನಿರ್ಭಯಾ, ಉನ್ನಾವೋ, ಕಥುವಾ, ಉಮೇಶ್ ರೆಡ್ಡಿ ಮುಂತಾದ ಕೇಸಿನಲ್ಲಿ ಯಾಕೆ ಸಾಧ್ಯವಾಗಿಲ್ಲ ಎನ್ನುವುದು ಪ್ರಶ್ನೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮಬೀರುವುದಿಲ್ಲವೇ?

English summary
Hyderabad Police Encountered Four Rapist: Why This Is Not Happened In Other Accused In Other Places Of The Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X