ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ ಎಲ್ಲಿದ್ದರೂ ಏಪ್ರಿಲ್ 13ರೊಳಗೆ ಬರಲೇಬೇಕು

|
Google Oneindia Kannada News

ಹೈದರಾಬಾದ್, ಮಾರ್ಚ್, 13: ಕೇವಲ ಟ್ವೀಟ್ ಮಾಡುತ್ತ ಮಾಧ್ಯಮಗಳಿಗೆ ಉತ್ತರ ಹೇಳುತ್ತಿದ್ದ ವಿಜಯ್ ಮಲ್ಯಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ ಈಗಾಗಲೆ ಸಮನ್ಸ್ ನೀಡಿದ್ದು ಇದೀಗ ಹೈದರಾಬಾದ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಐಡಿಬಿಐ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.[ನನ್ನನ್ನು ಹುಡುಕಲು ನಿಮ್ಮ ಬಳಿ ಆಗಲ್ಲ: ಮಲ್ಯ ಸವಾಲು]

vijay mallya

ಹೈದ್ರಾಬಾದ್ ಕೋರ್ಟ್ ವಿಜಯ್ ಮಲ್ಯ ಮತ್ತು ಕಿಂಗ್ ಫಿಶರ್ ನ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥನ್ ವಿರುದ್ಧ ಜಾಮೀನು ರಹಿತ್ ವಾರೆಂಟ್ ಅನ್ನು ಜಾರಿ ಮಾಡಿದೆ.[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಅಲ್ಲದೇ ಏಪ್ರಿಲ್ 13ರೊಳಗಾಗಿ ವಿಜಯ್ ಮಲ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಹೈದ್ರಾಬಾದ್ ಅಂತಾಷ್ಟ್ರೀಯ ವಿಮಾನ ನಿಲ್ದಾಣ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿತ್ತು. ನಮ್ಮ ಸಂಸ್ಥೆಗೆ ಮಲ್ಯ ಹಣವನ್ನು ಪಾವತಿಸಬೇಕಿತ್ತು. ಹಾಗಾಗಿ, ಅವರು ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿದೆ ಎಂದು ಹೈದ್ರಾಬಾದ್ ಏರ್ ಪೋರ್ಟ್ ದೂರು ನೀಡಿತ್ತು.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಹೈದರಾಬಾದ್‌ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿಯನ್‌ ಮ್ಯಾಜಿಸ್ಟ್ರೇಟ್‌ ಜಿ.ಎಸ್‌.ರಮೇಶ್‌ ಕುಮಾರ್‌ ಅವರು ವಾರಂಟ್‌ ಹೊರಡಿಸಿದ್ದಾರೆ. ಹಾಗಾಗಿ ಈಗ ಮಲ್ಯಗೆ ಬಂಧನ ಭೀತಿ ಎದುರಾಗಿದ್ದು ಎಲದ್ಲಿದ್ದರೂ ಏಪ್ರಿಲ್ 13 ರೊಳಗೆ ನ್ಯಾಯಾಲಯದ ಎದುರು ಹಾಜರಾಗಗಬೇಕಾಗುತ್ತದೆ.

English summary
Vijay Mallya and Chief Financial Officer of Kingfisher Airlines A Raghunath. The court has ordered police to produce them before it on April 13 while issuing the warrants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X