• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತಿ ನಾಗ್ಪುರದಲ್ಲಿ, ಪತ್ನಿ ಅಮೆರಿಕ, ವಾಟ್ಸ್ ಅಪ್ ವಿಡಿಯೋ ಮೂಲಕ ವಿಚ್ಛೇದನ

|

ಅಪರೂಪದ ಪ್ರಕರಣದಲ್ಲಿ ನಾಗ್ಪುರದ ಕೌಟುಂಬಿಕ ನ್ಯಾಯಾಲಯವು ವಾಟ್ಸ್ ಅಪ್ ವಿಡಿಯೋ ಕಾಲ್ ಮೂಲಕ ಪತ್ನಿಯ ಒಪ್ಪಿಗೆ ಪಡೆದು, ದಂಪತಿಗೆ ವಿವಾಹ ವಿಚ್ಛೇದನ ನೀಡಿದ ಪ್ರಕರಣ ನಡೆದಿದೆ. 35 ವರ್ಷ ಮಹಿಳೆ ಅಮೆರಿಕದ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವೀಸಾದಡಿ ವ್ಯಾಸಂಗ ಮಾಡುತ್ತಿದ್ದಾರೆ.

ಆಕೆ ವ್ಯಾಸಂಗ ಮಾಡುತ್ತಿರುವ ಶೈಕ್ಷಣಿಕ ಸಂಸ್ಥೆಯಿಂದ ದೀರ್ಘಾವಧಿ ರಜಾ ದೊರೆಯುವುದಿಲ್ಲ ಎಂಬ ಕಾರಣಕ್ಕೆ ವಾಟ್ಸ್ ಅಪ್ ವಿಡಿಯೋ ಮೂಲಕ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಇನ್ನು ಆ ಮಹಿಳೆಯ ಪತಿ ನಾಗ್ಪುರದ ಖಾಮ್ಲಾದ ನಿವಾಸಿ. ಅವರಿಗೆ ಮೂವತ್ತೇಳು ವರ್ಷ ವಯಸ್ಸು. ಅವರು ಮಿಷಿಗನ್ ನಲ್ಲಿ ಉದ್ಯೋಗ ನಿರ್ವಹಿಸುತ್ತಾರೆ. ಆದರೆ ಪರಸ್ಪರರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿದಾಗ ಆತ ನಾಗ್ಪುರದಲ್ಲೇ ಇದ್ದರು.

ಆರು ವರ್ಷದ ಹಿಂದೆ ಮದುವೇಲಿ ಕಳೆದಿದ್ದ ವ್ಯಕ್ತಿ ವಾಟ್ಸಪ್ ಮೂಲಕ ಪತ್ತೆ

ಎರಡೂ ಕಡೆಯ ಒಪ್ಪಿಗೆ ಕೇಳಿದ ನ್ಯಾ.ಸ್ವಾತಿ ಚೌಹಾಣ್ ಅವರು, ಪತಿಯು ಆ ಮಹಿಳೆಗೆ ಒಂದೇ ಸಲಕ್ಕೆ ಹತ್ತು ಲಕ್ಷ ರುಪಾಯಿಯನ್ನು ನೀಡಬೇಕು ಎಂಬ ಷರತ್ತು ಹಾಕಿದ್ದಾರೆ. ಜನವರಿ ಹದಿನಾಲ್ಕರಂದು ವಿಚ್ಛೇದನ ಪ್ರಕರಣ ಇತ್ಯರ್ಥವಾಗಿದೆ. ಈ ದಂಪತಿ ಐದು ವರ್ಷದ ಹಿಂದೆ ಸಿಕಂದರಾಬಾದ್ ನಲ್ಲಿ ಮದುವೆ ಆಗಿದ್ದರು. ಇಬ್ಬರು ಎಂಜಿನಿಯರ್ ಗಳು. ಅಮೆರಿಕ ಮೂಲದ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದರು.

ಅಮೆರಿಕದ ವೀಸಾ ಅವಧಿ ಮುಗಿದ ಮೇಲೆ ಅಲ್ಲಿಂದ ವಾಪಸಾದ ಮೇಲೆ ನಾಗ್ಪುರದಲ್ಲಿನ ತನ್ನ ಅತ್ತೆ-ಮಾವನ ಜತೆಗೆ ಇದ್ದರು. ಆ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅದಾದ ನಂತರ ವಿದ್ಯಾರ್ಥಿ ವೀಸಾದ ಮೇಲೆ ಮತ್ತೆ ಅಮೆರಿಕಗೆ ಆಕೆ ಹೋಗಿದ್ದರು. ಕ್ರಮೇಣ ಇಬ್ಬರ ಮಧ್ಯದ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಮಹಿಳೆಯ ಪತಿ ನಾಗ್ಪುರ ಕೋರ್ಟ್ ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.

ಇಬ್ಬರ ಮಧ್ಯ ಕೌನ್ಸೆಲರ್ (ಸಲಹಾಗಾರರು) ವ್ಯವಸ್ಥೆ ಮಾಡಲಾಗಿತ್ತು. ಸುದೀರ್ಘವಾದ ಚರ್ಚೆ ನಂತರ ಎರಡೂ ಕಡೆಯವರು ಒಂದು ಮೊತ್ತಕ್ಕೆ ಒಪ್ಪಂದ ಮಾಡಿಕೊಂಡು ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ವಕೀಲರು ಮಹಿಳೆ ಜತೆ ಮಾತನಾಡಿ, ವಾಟ್ಸ್ ಅಪ್ ವಿಡಿಯೋ ಕಾಲ್ ಗಳ ಮೂಲಕವೇ ಪರಿಹಾರದ ವಿಚಾರಗಳನ್ನು ಚರ್ಚಿಸಿದ್ದಾರೆ. ಇದರ ಜತೆಗೆ ಆಕೆಯ ಪತಿ ಜತೆಗೂ ಚರ್ಚೆ ನಡೆಸಿದ್ದಾರೆ.

ವಾಟ್ಸಪ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್‌ ಗೆ ಸುಪ್ರೀಂ ಚಾಟಿಏಟು?

ಗಂಡ-ಹೆಂಡತಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಅಂತಿಮವಾಗಿ ಎರಡೂ ಕಡೆಯ ವಕೀಲರು ಕೋರ್ಟ್ ಗೆ ತಿಳಿಸಿದ್ದು, ವಿಚ್ಛೇದನ ನೀಡಬೇಕೆಂದು ಮನವಿ ಮಾಡಿದ್ದರು. ಪರಸ್ಪರರ ಒಪ್ಪಿಗೆ ಮೂಲಕ ವಿವಾಹ ವಿಚ್ಛೇದನ ನೀಡಲಾಗಿದೆ ಎಂದು ಕೋರ್ಟ್ ನಿಂದ ಅರ್ಜಿ ವಿಲೇವಾರಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a rare instance, a Nagpur family court has granted divorce to a couple after recording the wife’s consent via a WhatsApp video call. The wife, 35, is studying in Michigan, US, on a student visa. Expressing her inability to attend the hearing , the woman had requested that the hearing be conducted via a WhatsApp video call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more