ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಹಾಸ್ಯ: ರಾಹುಲ್ ಗಾಂಧಿ ಸನ್ಯಾಸಿಯಾದರೆ ಏನಾದೀತು?!"

|
Google Oneindia Kannada News

Recommended Video

ರಾಹುಲ್ ಗಾಂಧಿಯೇನಾದರೂ ಸನ್ಯಾಸಿಯಾಗ್ಬಿಟ್ರೆ? | Oneindia Kannada

"ರಾಹುಲ್ ಗಾಂಧಿಯವರು ದೇವಾಲಯಗಳಿಗೆ ಭೇಟಿ ನೀಡಿದ್ದಕ್ಕೆ ಗುಜರಾತಿನಲ್ಲಿ ಕಾಂಗ್ರೆಸ್, ಬಿಜೆಪಿಗೆ ಈ ಪರಿ ಸ್ಪರ್ಧೆ ನೀಡುತ್ತಿದೆ. ಕೇವಲ ದೇವಾಲಯಗಳಿಗೆ ಭೇಟಿ ನೀಡಿದ್ದಕ್ಕೇ ಇಂಥ ಫಲಿತಾಂಶ ಬಂದರೆ, ಇನ್ನು ರಾಹುಲ್ ಗಾಂಧಿ ಸನ್ಯಾಸ ಸ್ವೀಕರಿಸಿಬಿಟ್ಟರೆ ಏನಾದೀತು..?" ಹಾಗಂತ ಟ್ವಿಟ್ಟರ್ ನಲ್ಲೊಬ್ಬರು ಪ್ರಶ್ನಿಸಿದ್ದಾರೆ!

ಗುಜರಾತ್ LIVE : ಬಿಜೆಪಿ 103, ಕಾಂಗ್ರೆಸ್ 77, ಇತರೆ 2ಗುಜರಾತ್ LIVE : ಬಿಜೆಪಿ 103, ಕಾಂಗ್ರೆಸ್ 77, ಇತರೆ 2

ಹೌದು, ಗುಜರಾತ್ ಚುನಾವಣೆಗೆ ಮತ್ತಷ್ಟು ಕಳೆ ಸಿಕ್ಕಿದ್ದೇ ಆ ಕಾರಣಕ್ಕೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತ್ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅದೆಷ್ಟು ದೇವಾಲಯಗಳಿಗೆ ಎಡತಾಕಿದ್ದರೋ! ಹೀಗೆ ಚುನಾವಣೆಯ ಸಮಯದಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ಮಸೀದಿ - ಚರ್ಚ್ ಭೇಟಿ, ಹಿಂದುಗಳ ಓಲೈಕೆಗೆ ಮಂದಿರ ಭೇಟಿ ಹೊಸತೇನಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಾಗಿಯೂ ಇಲ್ಲ. ಆದರೆ ರಾಹುಲ್ ಗಾಂಧಿಯವರ ದೇವಾಲಯ ಭೇಟಿಯನ್ನು ಮಾತ್ರ ಟ್ವಿಟ್ಟಿಗರು ಅಣಕಿಸುತ್ತಿರೋದು ಸುಳ್ಳಲ್ಲ.

ರಾಹುಲ್ ವರ್ಚಸ್ಸು ವೃದ್ಧಿಯಾದ ಹಿಂದಿನ ಗುಟ್ಟು! ರಾಹುಲ್ ವರ್ಚಸ್ಸು ವೃದ್ಧಿಯಾದ ಹಿಂದಿನ ಗುಟ್ಟು!

ಕಾಂಗ್ರೆಸ್ ಈ ಅನಿರೀಕ್ಷಿತ ಸಾಧನೆಗೆ ರಾಹುಲ್ ರ ದೇವಾಲಯ ಭೇಟಿಯೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ!

ರಾಹುಲ್ ಗಾಂಧಿ ಸನ್ಯಾಸ ಸ್ವೀಕರಿಸಿದರೆ...?!

"ಗುಜರಾತ್ ಫಲಿತಾಂಶ, ಹಿಂದು ದೇವರುಗಳಿಗೆ ಎಷ್ಟು ಶಕ್ತಿಯಿದೆ ಎಂಬುದನ್ನು ರಾಹುಲ್ ಗಾಂಧಿಯವರಿಗೆ ತೋರಿಸಿಕೊಟ್ಟಿದೆ! ಅವರು ಕೆಲವು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದರಿಂದಲೇ ಇಷ್ಟೆಲ್ಲ ಅದ್ಭುತಗಳಾಗಿವೆ ಎಂದಾದರೆ ಅಕಸ್ಮಾತ್ ಅವರು ಸನ್ಯಾಸ ಸ್ವೀಕರಿಸಿದರೆ ಏನಾಗಬಹುದು?" ಎಂದು ಅನಿಕೇತ್ ಪಾತ್ವಾ ಎಂಬುವವರು ಹಾಸ್ಯಾತ್ಮಕವಾಗಿ ಪ್ರಶ್ನಿಸಿದ್ದಾರೆ.

ಅವರು ಹಿಂದುವಾಗಿಯೇ ಉಳಿಯುತ್ತಾರಾ ಎಂಬುದು ಪ್ರಶ್ನೆ!

ಹೌದು, ಹಿಂದುವಾಗಿರುವುದರಿಂದ ಅವರಿಗೆ ಸಹಾಯವಾಯಿತು. ಅವರು ಬಹಳ ಉತ್ತಮವಾಗಿ ಪ್ರಚಾರ ಕೈಗೊಂಡಿದ್ದರು. ಆದರೆ ಸದ್ಯಕ್ಕಿರುವ ಪ್ರಶ್ನೆ ಎಂದರೆ, ಅವರು ಹಿಂದುವಾಗಿಯೇ ಉಳಿಯುತ್ತಾರಾ ಎಂಬುದು!" ಎಂದು ಮಾನಿಕಾ ಅಯ್ಯರ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ದೇವಾಲಯಕ್ಕೆ ಹೋಗೋದು ತಪ್ಪಾ?

ದೇವಾಲಯಕ್ಕೆ ಹೋಗೋದು ತಪ್ಪಾ?

ತಮ್ಮ ದೇವಾಲಯ ಭೇಟಿಯನ್ನು ಟೀಕಿಸಿದ್ದವರಿಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾನೂ ಒಬ್ಬ ಹಿಂದು. ದೇವಾಲಯಕ್ಕೆ ಭೇಟಿ ನೀಡೋದು ತಪ್ಪೇ ಎಂದು ಪ್ರತಿಪ್ರಶ್ನೆ ಕೇಳಿದ್ದರು. ನಾನು ದೇವಾಲಯಕ್ಕೆ ಹೋದಾಗ ಗುಜರಾತಿನ ಜನರ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದೂ ಹೇಳುವ ಮೂಲಕ ಗುಜರಾತಿಯರನ್ನು ಭಾವನಾತ್ಮಕವಾಗಿ ಸೆಳೆದಿದ್ದರು ರಾಹುಲ್ ಗಾಂಧಿ.

ದೇವಾಲಯ ಭೇಟಿಯಿಂದಲೂ ಪ್ರಯೋಜನವಾಗಲಿಲ್ಲ!

ರಾಹುಲ್ ಜೀ ಅವರು ಸುಮಾರು 22 ದೇವಾಲಯಗಳಿಗೆ ತೆರಳಿದ್ದರು. ಅವರಿಗೆ ದೇವ-ದೇವತೆಯರು ಆಶೀರ್ವಾದ ಮಾಡಿದ್ದರೆ. ಆದರೆ ಗುಜರಾತ್ ಫಲಿತಾಂಶದಲ್ಲಿ ಮಾತ್ರ ದೇವಾಲಯ ಭೇಟಿಯಿಂದ ರಾಹುಲ್ ಗಾಂಧಿಯವರಿಗೆ ಯಾವುದೇ ಸಹಾಯವಾಗಿಲ್ಲ ಎಂದು ಶಂಖೋ ಎಸ್ ಮುಖರ್ಜಿ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
After Congress gives neck to neck fight to BJP in Gujarat assembly election 2017, people on twitter humorously said, this is the imapact of Rahul Gandhi's temple visit! "If visiting few Hindu temples can do this wonder, what will happen if Rahul Gandhi takes a sanyas?!" they humorously asked!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X