ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಬದಲಾವಣೆಯೇ ಬಿಸಿಗಾಳಿ ಹೆಚ್ಚಾಗಲು ಕಾರಣ

|
Google Oneindia Kannada News

ನವದೆಹಲಿ, ಮೇ 24: ಭಾರತ ಮತ್ತು ಪಾಕಿಸ್ತಾನದಲ್ಲಿ 2022ರಲ್ಲಿ ಬೀಸಿದ ಬಿಸಿಗಾಳಿಗೆ ಕಾರಣವಾದ ಅಂಶಗಳ ಕುರಿತು ಅಧ್ಯಯನ ನಡೆದಿದೆ, ಬಿಸಿಗಾಳಿ ದ್ವಿಗುಣವಾಗಲು ಹವಾಮಾನ ಬದಲಾವಣೆಯೇ ಮೊದಲ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ವಿಶ್ವದಾದ್ಯಂತ ಇರುವ ವಿಜ್ಞಾನಿಗಳು ಬಿಸಿಗಾಳಿ ಕುರಿತಾಗಿ ಅಧ್ಯಯನ ಮಾಡಿದ್ದು, 2022ರ ಬಿಸಿಗಾಳಿಯು 90 ಜನರ ಸಾವುಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಮಾನವ ನಿರ್ಮಿತ ಹವಾಮಾನ ಬದಲಾವಣೆಯಿಂದಾಗಿ ಈ ಸಮಸ್ಯೆ ಉಂಟಾಗಿದ್ದು, ಬಿಸಿಗಾಳಿ ತೀವ್ರತೆಯನ್ನು 30 ಪಟ್ಟು ಹೆಚ್ಚು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗುಡುಗು + ಮಿಂಚು + ಬಿರುಗಾಳಿ + ಭಾರೀ ಮಳೆ = ದೆಹಲಿಯಲ್ಲಿ ಏನಾಗ್ತಿದೆ? ಗುಡುಗು + ಮಿಂಚು + ಬಿರುಗಾಳಿ + ಭಾರೀ ಮಳೆ = ದೆಹಲಿಯಲ್ಲಿ ಏನಾಗ್ತಿದೆ?

ಭಾರತ, ಪಾಕಿಸ್ತಾನ, ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್ ಮತ್ತು ಇತರ ದೇಶಗಳ ಪ್ರಮುಖ ಸಂಸ್ಥೆಗಳ ವಿಜ್ಞಾನಿಗಳನ್ನು ಒಳಗೊಂಡ ಜಾಗತಿಕ ಹವಾಮಾನ ಗುಣಲಕ್ಷಣ ಅಧ್ಯಯನ ನಡೆಸುವ ತಂಡ 29 ಸಂಶೋಧಕರು ಶಾಖದ ಅಲೆಗಳ ಗುಣಲಕ್ಷಣ ಅಧ್ಯಯನ ನಡೆಸಿದ್ದಾರೆ. ಇದೊಂದು ಅಪರೂಪದ ಘಟನೆ ಎಂದು ಕರೆದಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲಕರ್ನಾಟಕದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯಲ್ಲ

ಮಾನವ ನಿರ್ಮಿತ ಹವಾಮಾನ ಬದಲಾವಣೆಯು ಮುಂದುವರಿಯುವುದರೊಂದಿಗೆ, 1800ರ ದಶಕದ ಅಂತ್ಯದ ಕೈಗಾರಿಕಾ ಪೂರ್ವದ ಮಟ್ಟಕ್ಕೆ ಹೋಲಿಸಿದರೆ 2026ರ ನಡುವೆ ಒಮ್ಮೆಯಾದರೂ ಜಾಗತಿಕ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಅವಕಾಶವಿದೆ. ಇದರಿಂದ ಹವಾಮಾನ ವೈಪರಿತ್ಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು 11 ವಿವಿಧ ಮುನ್ಸೂಚನೆ ಕೇಂದ್ರಗಳ ತಂಡವು ವಿಶ್ವ ಹವಾಮಾನ ಸಂಸ್ಥೆಗೆ ಮಾಹಿತಿ ನೀಡಿದೆ.

ಬಿಸಿಗಾಳಿ ತೀವ್ರತೆ 30 ಪಟ್ಟು ಅಧಿಕ

ಬಿಸಿಗಾಳಿ ತೀವ್ರತೆ 30 ಪಟ್ಟು ಅಧಿಕ

1979 ರ ನಂತರದ ಹವಾಮಾನ ಬದಲಾವಣೆಗಳ ವರದಿಯನ್ನು ಪರಿಶೀಲನೆ ಮಾಡಿದ್ದು, ಎರಡೂ ದೇಶಗಳ ಹವಾಮಾನ ಬದಲಾವಣೆಗೆ ಕುರಿತಾದ ಗಂಭೀರ ವಿಚಾರಗಳನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. 1951ರ ನಂತರ ಭಾರತದ ಹವಾಮಾನದಲ್ಲಿ ಆದ ಬದಲಾವಣೆ ಬಗ್ಗೆ ಅಧ್ಯಯನ ಮಾಡಲಾಗಿದೆ.

ಪ್ರಸ್ತುತ ಇರುವ 1.2 ಡಿಗ್ರಿ ಸೆಲ್ಸಿಯಸ್ ಜಾಗತಿಕ ತಾಪಮಾನ 100 ವರ್ಷಗಳಲ್ಲಿ ಒಮ್ಮೆ ಮಾತ್ರ ಅನುಭವಕ್ಕೆ ಬರುವ ಸಂಗತಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ತಾಪಮಾನ ನಿರಂತರವಾಗಿ ಏರಿಕೆಯಾಗುತ್ತಿದೆ. ಕೈಗಾರಿಕಾ ಕ್ರಾಂತಿಯ ಪೂರ್ವದ ಅವಧಿಗೆ ಹೋಲಿಸಿದರೆ ಬಿಸಿಗಾಳಿಯ ತೀವ್ರತೆಯು 30 ಪಟ್ಟು ಅಧಿಕವಾಗಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಮತ್ತಷ್ಟು ಹೆಚ್ಚಾಗುತ್ತೆ ತಾಪಮಾನ

ಮತ್ತಷ್ಟು ಹೆಚ್ಚಾಗುತ್ತೆ ತಾಪಮಾನ

ಸದ್ಯದ ಹವಾಮಾನದಲ್ಲಿ ಜಾಗತಿಕ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ನಿರಂತರವಾಗಿ ತಾಪಮಾನ ಹೆಚ್ಚಳವಾಗುತ್ತಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಕೈಗಾರಿಕಾ ಕ್ರಾಂತಿ ಪೂರ್ವದ ಸಮಯಕ್ಕೆ ಹೋಲಿಸಿದರೆ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ, 2022ರಲ್ಲಿ ಸಂಭವಿಸಿದ ಬಿಸಿಗಾಳಿಯಂತ ಸನ್ನಿವೇಶಗಳು ಇನ್ನು ಮುಂದಿನ ವರ್ಷಗಳಲ್ಲಿ ಸಾಮಾನ್ಯವಾಗುತ್ತದೆ ಎಂದು ಅಧ್ಯಯನವು ಹೇಳಿದೆ.

2018 ರಲ್ಲಿ, ವಿಶ್ವಸಂಸ್ಥೆಯ ಪ್ರಮುಖ ವಿಜ್ಞಾನ ವರದಿಯು 1.5 ಡಿಗ್ರಿಗಳಷ್ಟು ತಾಪಮಾನವನ್ನು ಮೀರಿದರೆ ಜನರು ಮತ್ತು ಪ್ರಪಂಚದ ಅಪಾಯಕಾರಿ ಪರಿಣಾಮಗಳನ್ನು ಬೀಳಲಿದೆ ಎಂದು ತಿಳಿಸಿತ್ತು. ಹಸಿರುಮನೆ ಅನಿಲ ಹೊರಸೂಸುವಿಕೆ ಮುಂದುವರಿಯುವವರೆಗೆ, ಈ ರೀತಿಯ ಘಟನೆಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ವಿಪತ್ತುಗಳನ್ನು ಸೃಷ್ಟಿಸುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತಕ್ಕೆ ಬಿಸಿಲಿನ ಹೊಡೆತ

ಉತ್ತರ ಭಾರತಕ್ಕೆ ಬಿಸಿಲಿನ ಹೊಡೆತ

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ 2022ರ ಬೇಸಿಗೆ ತೀವ್ರವಾಗಿತ್ತು. ಹಲವು ರಾಜ್ಯಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ನವದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ತಾಪಮಾನ ತೀವ್ರ ಹೆಚ್ಚಳವಾಗಿತ್ತು.

ಹರಿಯಾಣದಲ್ಲಿ 46 ಡಿಗ್ರಿ ಸೆಲ್ಸಿಯಸ್, ಕರ್ನಲ್​ನಲ್ಲಿ 43.8, ಅಂಬಾಲಾ ಮತ್ತು ಚಂಡಿಗಢದಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಜನತೆ ತೀವ್ರ ಸೆಕೆ ಅನುಭವಿಸಿದ್ದರು. ಅಮೃತಸರದಲ್ಲಿ 45, ಲೂಧಿಯಾನಾದಲ್ಲಿ 44, ಪಟಿಯಾಲಾದಲ್ಲಿ 44.4. ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ವರ್ಷದ ಅತ್ಯಧಿಕ ಉಷ್ಣಾಂಶ ಎನ್ನಲಾಗಿದೆ.

ಕೃಷಿ ಇಳುವರಿಯಲ್ಲಿ ತೀವ್ರ ಕುಸಿತ

ಕೃಷಿ ಇಳುವರಿಯಲ್ಲಿ ತೀವ್ರ ಕುಸಿತ

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬೀಸಿದ ಬಿಸಿಗಾಳಿ ಮತ್ತು ಅಧಿಕ ತಾಪಮಾನದ ಕಾರಣ ಉತ್ತರ ಭಾರತದ ಪ್ರಮುಖ ಆಹಾರ ಗೋಧಿ ಬೆಳೆಯ ಇಳುವರಿ ಇಳಿಕೆಯಾಗುವಂತೆ ಮಾಡಿದೆ. ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿರುವುದರಿಂದ ಮುಂದೆ ಆಹಾರ ಧಾನ್ಯದ ಕೊರತೆಯನ್ನು ತಡೆಯಲು ಭಾರತ ಗೋಧಿ ರಫ್ತನ್ನು ನಿಷೇಧಿಸಬೇಕಾಯಿತು.

ಬಿಸಿಗಾಳಿ ಮತ್ತು ಅತ್ಯಧಿಕ ತಾಪಮಾನದಿಂದ ಬೀದಿ ವ್ಯಾಪಾರಿಗಳು, ನಿರ್ಮಾಣ ಮತ್ತು ಕೃಷಿ ಕಾರ್ಮಿಕರು, ಸಂಚಾರ ಪೊಲೀಸರು ಮತ್ತು ಬಿಸಿ ವಾತಾವರಣಕ್ಕೆ ಒಡ್ಡಿಕೊಂಡವರು ಹೆಚ್ಚು ತೊಂದರೆ ಅನುಭವಿಸಿದರು.

English summary
Heatwaves in India; More than 90 deaths have been directly attributed to the heatwave, but earlier hot spells over the last decade suggest that number will climb far higher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X