ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಎಲ್ಲೇ ಇರಿ, ನಿಮ್ಮ ಅಂಕಪಟ್ಟಿ ಕ್ಷಣಾರ್ಧದಲ್ಲಿ ಲಭ್ಯ

By Ashwath
|
Google Oneindia Kannada News

ನವದೆಹಲಿ,ಆ.6:ನಕಲಿ ಅಂಕಪಟ್ಟಿ, ನಕಲಿ ಪದವಿ ಹಾವಳಿಯನ್ನು ತಡೆಗಟ್ಟಲು ರಾಷ್ಟ್ರೀಯ ಶೈಕ್ಷಣಿಕ ಕೋಶ ಸ್ಥಾಪಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮುಂದಾಗಿದೆ.

ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲೇ ಈ ಯೋಜನೆ ರೂಪುಗೊಂಡಿತ್ತಾದರೂ, ಅದರಲ್ಲಿನ ಕೆಲವೊಂದು ಅಂಶಗಳ ಬಗ್ಗೆ ಕಾನೂನು ಸಚಿವಾಲಯ ಅಪಸ್ವರ ಎತ್ತಿತ್ತು. ಇದೀಗ ಈ ಕೆಲ ಅಂಶಗಳಿಗೆ ತಿದ್ದುಪಡಿ ಮಾಡಲಾಗಿದ್ದು ಕರಡು ಮಸೂದೆ ಸದ್ಯದಲ್ಲೇ ಲೋಕಸಭೆಯಲ್ಲಿ ಮಂಡನೆಯಾಗಲಿದೆ.[ಸರ್ಕಾರಿ ಸೌಲಭ್ಯಕ್ಕೆ ಗೆಜೆಟೆಡ್, ನೋಟರಿ ಸಹಿ ಬೇಕಿಲ್ಲ]

smrithi irani

ಏನಿದು ಯೋಜನೆ?: ಈ ಯೋಜನೆ ಪ್ರಕಾರ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಯಾವುದೇ ಶಿಕ್ಷಣ ಪಡೆದ ವಿದ್ಯಾರ್ಥಿಯ ಅಂಕಪಟ್ಟಿ ಮತ್ತು ಪರೀಕ್ಷೆ ಉತ್ತೀರ್ಣದ ಮಾಹಿತಿ ಮತ್ತಿತರ ಮಾಹಿತಿಯನ್ನು ಎಲೆಕ್ಟ್ರಾನಿಕ್‌ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಒಮ್ಮೆ ಯೋಜನೆ ಜಾರಿಯಾದ ಬಳಿಕ, ದೇಶದ ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗಳು ಕೂಡಾ, ತಮ್ಮ ವಿದ್ಯಾರ್ಥಿಗಳ ಮಾಹಿತಿಯನ್ನು ಇದರಲ್ಲಿ ದಾಖಲಿಸುವುದು ಕಡ್ಡಾಯವಾಗುತ್ತದೆ.[ವಿಬ್‌ಗಯಾರ್‌ ರೇಪ್‌ ಪ್ರಕರಣ: ವರದಿ ಕೇಳಿದ ಕೇಂದ್ರ]

ಈ ಯೋಜನೆ ಕಾರ್ಯ‌ಗತವಾದಲ್ಲಿ ಅಂತರ್‌ಜಾಲದಲ್ಲಿ ದೇಶದ ಎಲ್ಲಾ ವಿದ್ಯಾರ್ಥಿ‌ಗಳ ಶೈಕ್ಷಣಿಕ ಮಾಹಿತಿಯನ್ನು ಉಚಿತವಾಗಿ ಕ್ಷಣಾರ್ಧದಲ್ಲಿ ನೋಡಬಹುದಾಗಿದೆ. ಕಂಪೆನಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಅರ್ಹ‌ತೆಯನ್ನು ಪರಿಶೀಲಿಸಬಹುದಾಗಿದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಯ ಅಂಕಪಟ್ಟಿ ಕಳೆದು ಹೋದಲ್ಲಿ ಅಥವಾ ಮತ್ತೊಂದು ಪ್ರತಿ ಬೇಕಾದಲ್ಲಿ ಈ ವೆಬ್‌ಸೈಟ್‌ ಮೂಲಕವೇ ಪ್ರಿಂಟ್‌ ತೆಗೆಯಬಹುದಾಗಿದೆ.

English summary
The Human Resource Development Ministry is pushing for the National Academic Depository Bill, which could go a long way in curbing the fake degree scams. It will also benefit employers to access a verified database for all academic degrees in India. Sources in the ministry have indicated that the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X