ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HRA: 1 ಲಕ್ಷ ರೂ ಬಾಡಿಗೆಗೆ ಓನರ್ ಪ್ಯಾನ್ ಕಡ್ಡಾಯ

By Srinath
|
Google Oneindia Kannada News

Income Tax HRA exemption if annual rent exceeds Rs lakh house owner pan must,
ನವದೆಹಲಿ, ನ.20: ವಾರ್ಷಿಕ 1 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಮನೆ ಬಾಡಿಗೆ ಪಾವತಿಸುವವರು ಆದಾಯ ತೆರಿಗೆ ವಿನಾಯಿತಿ ಪಡೆಯಲು ಮನೆ ಮಾಲೀಕರ ಪ್ಯಾನ್‌ ಕಾರ್ಡ್‌ ನಂಬರ್‌ ನೀಡುವುದು ಕಡ್ಡಾಯವಾಗಿದೆ. ಅಂದರೆ ಮಾಸಿಕ 8,333 ರೂ.ಗಿಂತ ಹೆಚ್ಚು ಬಾಡಿಗೆ ಪಾವತಿಸುತ್ತಿದ್ದರೆ ಇನ್ನು ಮುಂದೆ ಓನರ್ ಪ್ಯಾನ್‌ ಕಾರ್ಡ್‌ ಸಂಖ್ಯೆ ನಮೂದಿಸುವುದು ಕಡ್ಡಾಯ.

ನಕಲಿ ರಸೀದಿ ತೋರಿಸಿ ಮನೆ ಬಾಡಿಗೆ ಹೆಸರಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳುವವರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಈ ನಿಯಮವನ್ನು ಬಿಗಿಗೊಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಇತ್ತೀಚೆಗೆ ಈ ಸುತ್ತೋಲೆ ಹೊರಡಿಸಿದ್ದು, ಮುಂದಿನ ಹಣಕಾಸು ವರ್ಷದಲ್ಲಿ (2014-15) ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.

ಹೊಸ ನಿಯಮದ ಪ್ರಕಾರ ಮನೆ ಬಾಡಿಗೆಗೆ (HRA) ಆದಾಯ ತೆರಿಗೆ ವಿನಾಯಿತಿ ಸಿಗಬೇಕಾದರೆ ವಾರ್ಷಿಕ ಮನೆ ಬಾಡಿಗೆ 1 ಲಕ್ಷ ರೂ. ಗಿಂತ ಅಧಿಕವಿದ್ದರೆ ಕಡ್ಡಾಯವಾಗಿ ಮನೆ ಮಾಲೀಕರ ಪ್ಯಾನ್‌ ಕಾರ್ಡ್‌ ನಂಬರ್‌ (Permanent Account Number- PAN) ನೀಡಬೇಕಾಗುತ್ತದೆ. ಈವರೆಗೆ ಮಾಸಿಕ ಮನೆ ಬಾಡಿಗೆ 15,000 ರೂ.ಗಿಂತ (ವಾರ್ಷಿಕ 1.8 ಲಕ್ಷ ರೂ.) ಹೆಚ್ಚು ಮಾವತಿಸುವಂತಿದ್ದರೆ ಮಾತ್ರ ಮನೆ ಮಾಲೀಕರ ಪ್ಯಾನ್‌ ನಂಬರ್‌ ದಾಖಲಿಸಬೇಕಿತ್ತು.

ಮನೆ ಮಾಲೀಕನ ಬಳಿಯೇ ಪ್ಯಾನ್‌ ಕಾರ್ಡ್‌ ಇಲ್ಲದಿದ್ದರೆ ಬಾಡಿಗೆಗಿರುವ ನೌಕರನು, ಆ ಕುರಿತು ಮನೆ ಮಾಲೀಕನ ಹೆಸರು ಮತ್ತು ವಿಳಾಸದ ಜತೆಗೆ ಮುಚ್ಚಳಿಕೆ ಬರೆದು ಕೊಡಬೇಕು. ಮಾಸಿಕ 8,333 ರೂ. ಗಿಂತ ಕಡಿಮೆ ಬಾಡಿಗೆ ಪಾವತಿಸುತ್ತಿದ್ದರೂ ಮನೆ ಬಾಡಿಗೆಯಡಿ ತೆರಿಗೆ ವಿನಾಯಿತಿ ಬೇಕಾದರೆ ಬಾಡಿಗೆ ರಸೀದಿ ಕೊಡಬೇಕು. ಆದರೆ ಆಡಳಿತಾತ್ಮಕ ಅನುಕೂಲಕ್ಕಾಗಿ ತಿಂಗಳಿಗೆ 3000 ರೂ. ಗಿಂತ ಕಡಿಮೆ ಮನೆ ಬಾಡಿಗೆ ಭತ್ಯೆ ಪಾವತಿಸುವವರಿಗೆ ರಸೀದಿ ಹಾಜರುಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ.

English summary
Income Tax HRA exemption if annual rent exceeds Rs lakh house owner pan must. The income tax department has tightened the norms for claiming exemption under house rent allowance (HRA). "If annual rent paid by the employee exceeds Rs. 1,00,000 per annum, it is mandatory for the employee to report PAN of the landlord to the employer," the Central Board of Direct Taxes said in a circular.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X