7ನೇ ವೇತನ ಆಯೋಗ ಶಿಫಾರಸು: HRA 48,000 ರು. ವರೆಗೆ ಹೆಚ್ಚಳ?

Posted By:
Subscribe to Oneindia Kannada

ಏಳನೇ ವೇತನ ಆಯೋಗದ ಶಿಫಾರಸುಗಳು ಈಗ ಕೇಂದ್ರ ಸರ್ಕಾರದ ಸಂಪುಟದ ಮುಂದಿದ್ದು, ಸಂಪುಟದ ಒಪ್ಪಿಗೆಗಾಗಿ ಕಾಯುತ್ತಿವೆ.

ಇನ್ನು, 15 ದಿನಗಳಲ್ಲಿ ಇವಕ್ಕೆ ಸಂಪುಟದ ಒಪ್ಪಿಗೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಇದಾದರೆ, ಕೇಂದ್ರ ಸರ್ಕಾರಿ ನೌಕರರಗೆ ಬಂಪರ್ ಕೊಡುಗೆಗಳು ಸಿಗಲಿವೆ.

7ನೇ ವೇತನ ಆಯೋಗದ ಶಿಫಾರಸುಗಳಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಶೇ. 106ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದು ಯಾವುದೇ ದರ್ಜೆಯ ನಗರಗಳಲ್ಲಿ ಜೀವಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.

ಹಾಗಾದರೆ, ಈ ಬಾರಿಯ ವೇತನ ಆಯೋಗದ ಶಿಫಾರಸುಗಳ ಜಾರಿಯ ಬಗ್ಗೆ ಒಂದಿಷ್ಟು ಮಾಹಿತಿಗಳು ಇಲ್ಲಿ ನಿಮಗಾಗಿ....

ಉನ್ನತ ಸಮಿತಿಯ ಅವಲೋಕನ

ಉನ್ನತ ಸಮಿತಿಯ ಅವಲೋಕನ

ಏಳನೇ ವೇತನ ಆಯೋಗದ ಶಿಫಾರಸುಗಳ ಸಾಧಕ ಬಾಧಕಗಳನ್ನು ಅಳೆಯಲು, ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ ಅಶೋಕ್ ಲಾವಾಸಾ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಉನ್ನತ ದರ್ಜೆಯ ಸಮಿತಿ ತನ್ನ ಅನಿಸಿಕೆ, ಅಹವಾಲುಗಳನ್ನು ವೆಚ್ಛ ಇಲಾಖೆಗೆ ಸಲ್ಲಿಸಿದೆ. ಅಲ್ಲಿ ಕಾರ್ಯ ನಿರ್ವಹಿಸುವ, ನಾನಾ ಸಚಿವಲಾಯಗಳ ವಿಶೇಷ ಅಧಿಕಾರವುಳ್ಳ ಉನ್ನತ ಸಮಿತಿಯೊಂದು ಲಾವಾಸಾ ಸಮಿತಿಯ ವರದಿಯನ್ನು ಪರಿಶೀಲನೆಗೊಳಪಡಿಸಲಿದೆ. ಈ ವಿಶೇಷ ಅಧಿಕಾರವುಳ್ಳ ಸಮಿತಿಯೇ 7ನೇ ವೇತನ ಆಯೋಗದ ಶಿಫಾರಸುಗಳ ಸಾಧಕ- ಬಾಧಕಗಳನ್ನು ಅವಲೋಕಿಸುವ ಹೊಣೆಯನ್ನೂ ಹೊತ್ತಿದೆ. ಹಾಗಾಗಿ, ಇದೀಗ, ಲಾವಾಸಾ ಸಮಿತಿಯ ಶಿಫಾರಸುಗಳನ್ನು ಅದೇ ಸಮಿತಿ ಅವಲೋಕಿಸಲಿದೆ.

ನಿರ್ಧಾರದ ನಂತರ ಸಂಪುಟಕ್ಕೆ ವರದಿ

ನಿರ್ಧಾರದ ನಂತರ ಸಂಪುಟಕ್ಕೆ ವರದಿ

ವೆಚ್ಛ ಇಲಾಖೆಯಲ್ಲಿನ ವಿಶೇಷ ಅಧಿಕಾರವುಳ್ಳ ಸಮಿತಿಯು, ಲಾವಾಸಾ ವರದಿ ಹಾಗೂ 7ನೇ ವೇತನ ಆಯೋಗದ ಶಿಫಾರಸುಗಳನ್ನು ಚರ್ಚಿಸಿ, ಅದರ ಆಧಾರದ ಮೇಲೆ ತನ್ನ ಅನಿಸಿಕೆಗಳನ್ನು ಪಟ್ಟಿ ಮಾಡಿ, ಅದನ್ನು ಕೇಂದ್ರ ಸಂಪುಟಕ್ಕೆ ಸಲ್ಲಿಸಲಿದೆ. ಸಂಪುಟದಲ್ಲಿ ಈ ಎಲ್ಲಾ ವಿಚಾರಗಳು ಮತ್ತೆ ಚರ್ಚೆಗೆ ಬಂದು ಸಂಪುಟವು ಈ ಶಿಫಾರಸುಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಇದೆಲ್ಲಾ ಆಗಲು ಸುಮಾರು 15 ದಿನ ಬೇಕಾಗಬಹುದು.

ಅವಶ್ಯಕತೆಯಿದ್ದಲ್ಲಿ ತಿದ್ದುಪಡಿಗೆ ಸೂಚನೆ

ಅವಶ್ಯಕತೆಯಿದ್ದಲ್ಲಿ ತಿದ್ದುಪಡಿಗೆ ಸೂಚನೆ

ಕೇಂದ್ರ ಸಂಪುಟದ ಮುಂದೆ 7ನೇ ವೇತನ ಆಯೋಗದ ಶಿಫಾರಸುಗಳ ಸಾಧಕ- ಬಾಧಕಗಳನ್ನು ಇಟ್ಟಾಗಲೂ, ಸಂಪುಟ ಸಭೆಯು ಇದಕ್ಕೆ ಹಾಗೇ ಸುಮ್ಮನೇ ಒಪ್ಪಿಗೆ ಕೊಡುವುದಿಲ್ಲ. ಸಂಪುಟದಲ್ಲಿಯೂ ಉನ್ನತ ಅಧಿಕಾರವುಳ್ಳ ಸಮಿತಿಯ ಶಿಫಾರಸುಗಳ ಬಗ್ಗೆ ಚರ್ಚೆಯಾಗುತ್ತದೆ. ಹಾಗೊಂದು ವೇಳೆ, ಅವಶ್ಯವೆನಿಸಿದಲ್ಲಿ ಅದೇ ಶಿಫಾರಸುಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುವಂತೆ ಸಂಪುಟವು ಉನ್ನತ ಅಧಿಕಾರ ಸಮಿತಿಗೆ ಸೂಚಿಸಲೂಬಹುದು. ಈಗಾಗಲೇ, ಲಾವಾಸ ಸಮಿತಿಯು ಉನ್ನತ ಅಧಿಕಾರದ ಸಮಿತಿಗೆ ತಾನು ಸಲ್ಲಿಸಿದ್ದ ವರದಿಯ ಮತ್ತೊಂದು ಪ್ರತಿಯನ್ನು ಕೇಂದ್ರ ಹಣಕಾಸು ಇಲಾಖೆಗೆ ಸಲ್ಲಿಸಿದೆ. ಅದರಲ್ಲಿ, ರೈಲ್ವೇ ಸಿಬ್ಬಂದಿ, ಅಂಚೆ ಸಿಬ್ಬಂದಿ, ವಿಜ್ಞಾನಿಗಳು, ಸೈನಿಕರು ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ, ವೈದ್ಯರು, ಶುಶ್ರೂಷಕರು ಹಾಗೂ ಇತರ ವಿಶೇಷ ವಲಯಗಳ ಸಿಬ್ಬಂದಿಗಳನ್ನು ವೇತನ ಆಯೋಗದ ಶಿಫಾರಸುಗಳಲ್ಲಿ ಪ್ರತ್ಯೇಕವಾಗಿ ಹಾಗೂ ವಿಶೇಷವಾಗಿ ಪರಿಗಣಿಸಬೇಕೆಂದು ಸೂಚಿಸಿದೆ. ಇದೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.

ಹೀಗಿರುತ್ತೆ ನೋಡಿ ಎಚ್ಆರ್ ಎ ಶ್ರೇಣಿ

ಹೀಗಿರುತ್ತೆ ನೋಡಿ ಎಚ್ಆರ್ ಎ ಶ್ರೇಣಿ

ಈ ಎಲ್ಲಾ ವಿಚಾರಗಳೂ ಸಂಪುಟ ಸಭೆಯಲ್ಲಿ ಚರ್ಚೆಯಾಗಿ, 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೊಂಡರೆ ನಿಜಕ್ಕೂ ಕೇಂದ್ರ ಸರ್ಕಾರಿ ನೌಕಕರಿಗೆ ಬಂಪರ್ ಉಡುಗೊರೆ ಸಿಕ್ಕಂತೆ. ವಿಶೇಷವಾಗಿ, ಎಕ್ಸ್, ವೈ ಹಾಗೂ ಝೆಡ್ ಶ್ರೇಣಿಯ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ) ನೀಡಲಾಗುತ್ತಿದೆ. ಅದರಂತೆ, ಎಕ್ಸ್ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ನೌಕರರಿಗೆ ಕನಿಷ್ಠ 2 ಸಾವಿರ ರು.ಗಳಿಂದ 7 ಸಾವಿರ ರು.ಗಳ ವರೆಗೆ ಮನೆ ಬಾಡಿಗೆ ಭತ್ಯೆ ಸಿಗಲಿದೆ. ಇದು 6ನೇ ವೇತನ ಆಯೋಗದ ವರದಿಯ ಶಿಫಾರಸು.
ಈಗ, 7ನೇ ವೇತನ ಆಯೋಗದ ಶಿಫಾರಸು ಜಾರಿಗೊಂಡರೆ, ಕೇಂದ್ರ ಸರ್ಕಾರಿ ನೌಕರಿಯ ಆರಂಭಿಕ ಹಂತದ ವೇತನವಾಗಿರುವ 18 ಸಾವಿರ ರು. ಸಂಬಳ ಪಡೆಯುವವನೂ 4,320 ರು.ಗಳಷ್ಟು ಮನೆ ಬಾಡಿಗೆ ಭತ್ಯೆ ಪಡೆಯುತ್ತಾನೆ.
ಇನ್ನು, ಸಂಪುಟ ಕಾರ್ಯದರ್ಶಿ ಮಟ್ಟದ ಹುದ್ದೆಗಳಲ್ಲಿರುವವರಿಗೆ ಹೊಸ ವೇತನ ಆಯೋಗದ ಶಿಫಾರಸುಗಳು 'ಎಚ್ ಆರ್ ಎ'ನಲ್ಲಿ ದೊಡ್ಡ ಮಟ್ಟದ ಏರಿಕೆ ನೀಡಲಿದೆ. ಸಂಪುಟ ಕಾರ್ಯದರ್ಶಿಗಳಿಗೆ ಮೂಲ ವೇತನವೇ 90 ಸಾವಿರ ರು. ಇರುವುದರಿಂದ ಅವರಿಗೆ ಈಗ ಸಿಗುತ್ತಿರುವ 27 ಸಾವಿರ ರು. ಎಚ್ ಆರ್ ಎ, 7ನೇ ವೇತನ ಆಯೋಗದ ಶಿಫಾರಸು ಜಾರಿಗೊಂಡ ನಂತರ 60 ಸಾವಿರ ರು.ಗಳಿಂದ 2.5 ಲಕ್ಷ ರು.ಗಳವರೆಗೆ ಏರುತ್ತದೆ. ಇದು ಶೇ. 122ರಷ್ಟು ಏರಿಕೆಯಾಗಲಿದೆ. 7ನೇ ವೇತನ ಆಯೋಗದ ಶಿಫಾರಸಿನಲ್ಲಿ ಇನ್ನು ಕೇಂದ್ರ ಸರ್ಕಾರದ ಕನಿಷ್ಠ ವೇತನ 18 ಸಾವಿರ ರು. ಇರಲಿದ್ದು, ಈ ವೇತನ ಪಡೆಯುವ ವ್ಯಕ್ತಿಗೆ 5,400 ರು. ಎಚ್ ಆರ್ ಎ ನೀಡಲು ನಿರ್ಧರಿಸಲಾಗಿದೆ.

ಒರತೆಯಿಂದ ಕೊರತೆ ನಿವಾರಣೆ?

ಒರತೆಯಿಂದ ಕೊರತೆ ನಿವಾರಣೆ?

ಎಚ್ ಆರ್ ಎ ದರವನ್ನು ಏರಿಸದಿದ್ದಲ್ಲಿ ಕೇಂದ್ರ ಸರ್ಕಾರ, ಇತರ ಸವಲತ್ತುಗಳನ್ನು ಆ ಕೊರತೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು. ಅಂದರೆ, ಈಗ ಸಧ್ಯಕ್ಕೆ ಎಕ್ಸ್ ಶ್ರೇಣಿಯ ನಗರಗಳಲ್ಲಿ ಸುಮಾರು 7 ಸಾವಿರ ರು.ಗಳಷ್ಟು ಸಂಬಳ ಪಡೆಯುವವರು 2,100 ರು.ಗಳಷ್ಟು 'ಎಚ್ಆರ್ ಎ' ಪಡೆಯುತ್ತಿದ್ದಾರೆ. ಇದನ್ನು ಹೆಚ್ಚಿಸದೇ ಇದ್ದರೂ, ಬೇರೆ ರೀತಿಯ ಸವಲತ್ತುಗಳು ಹೊಸ ವೇತನ ಆಯೋಗದಲ್ಲಿ ಸಿಗಲಿರುವುದರಿಂದ ಎಚ್ ಆರ್ ಎ ಕೊರತೆಯನ್ನು ನೀಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಂಪುಟದ ನಿರ್ಧಾರದ ಮೇಲೆ ಅವಲಂಬಿತ

ಸಂಪುಟದ ನಿರ್ಧಾರದ ಮೇಲೆ ಅವಲಂಬಿತ

ಎ.ಕೆ. ಮಾಥುರ್ ನೇತೃತ್ವದ 7ನೇ ವೇತನ ಆಯೋಗದ ಶಿಫಾರಸುಗಳಂತೆ, ಎಕ್ಸ್, ವೈ ಹಾಗೂ ಝೆಡ್ ಶ್ರೇಣಿಯ ನಗರಗಳಿಗೆ ಕ್ರಮವಾಗಿ , ಶೇ. 24, ಶೇ. 16 ಹಾಗೂ ಶೇ. 8ರಷ್ಟು (ಅವರ ಮೂಲ ವೇತನದ ಆಧಾರದಲ್ಲಿ) ನೀಡಬೇಕೆಂದು ಹೇಳಿತ್ತು. ಆನಂತರ, ಇದೇ ಶ್ರೇಣಿಯನ್ನು ಶೇ. 27, ಶೇ 18 ಹಾಗೂ ಶೇ. 9ರಷ್ಟು ಬದಲಿಸಬೇಕೆಂದು ಹೇಳಿದೆ. ಅದೇನೇ ಇರಲಿ, ಸಂಪುಟದ ನಿರ್ಧಾರದ ಮೇಲೆ ಅದೇ ಜಾರಿಯಾಗುವುದು ಬಿಡುವುದು ನಿಂತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There is some very good news for central government employees as they are set to get a maximum monthly hike in their house rent allowance orHRA by up to Rs 48,000 from June onwards as per the 7th Pay Commissionrecommendations.
Please Wait while comments are loading...