ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HP Election Result 2022; ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?

|
Google Oneindia Kannada News

ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ 40 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೆರಾಜ್ ಕ್ಷೇತ್ರದಲ್ಲಿ ಗೆದ್ದರೂ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕಷ್ಟ.

2017ರ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಿತ್ತು. ಆದರೆ ಒಮ್ಮೆ ಅಧಿಕಾರ ನಡೆಸಿದ ಪಕ್ಷ ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬುದು ಹಿಮಾಚಲ ಪ್ರದೇಶದಲ್ಲಿ ಮತ್ತೆ ಸಾಬೀತಾಗುತ್ತಿದೆ.

Recommended Video

Himachal Pradesh Result 2022: ಸರ್ಕಾರ ರಚನೆ ವೇಳೆ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಕಂಡುಬರುತ್ತಿದೆ

Gujarat, HP Election Results 2022 Live: ಗುಜರಾತ್‌ನಲ್ಲಿ ಅರಳಿದ ಕಮಲ, ಕೈ ಕೊಟ್ಟ ಕಾಂಗ್ರೆಸ್, ಮೂಲೆ ಸೇರಿದ ಪೊರಕೆGujarat, HP Election Results 2022 Live: ಗುಜರಾತ್‌ನಲ್ಲಿ ಅರಳಿದ ಕಮಲ, ಕೈ ಕೊಟ್ಟ ಕಾಂಗ್ರೆಸ್, ಮೂಲೆ ಸೇರಿದ ಪೊರಕೆ

ಹಿಮಾಚಲದಲ್ಲಿ ಬಿಜೆಪಿ ರಚಿಸಿದ ಚುನಾವಣೆ ತಂತ್ರ ಫಲ ನೀಡಿದಂತೆ ಕಾಣುತ್ತಿಲ್ಲ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಬಿಜೆಪಿ 24, ಕಾಂಗ್ರೆಸ್ 40 ಮತ್ತು ಪಕ್ಷೇತರ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

HP Result 2022; ಮತ್ತೆ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪರಿಚಯHP Result 2022; ಮತ್ತೆ ಗೆದ್ದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪರಿಚಯ

HP Assembly Election Results 2022; Who Will CM Candidate

ಕಾಂಗ್ರೆಸ್ ಮುನ್ನಡೆಸುವುದು ಯಾರು?; ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಈಗ ಪಕ್ಷ ಸರ್ಕಾರ ರಚನೆ ಮಾಡಬೇಕಾದರೆ ಸಿಎಂ ಅಭ್ಯರ್ಥಿ ಆಯ್ಕೆ ಅಷ್ಟು ಸುಲಭವಾಗಿ ಉಳಿದಿಲ್ಲ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಮುಂದೆ ದೊಡ್ಡ ಸವಾಲು ಇದೆ.

Himachal Pradesh Elections Result 2022: ಹಿಮಾಚಲ ಪ್ರದೇಶ : ಇತಿಹಾಸ ಬರೆಯುವುದೇ ಬಿಜೆಪಿ? Himachal Pradesh Elections Result 2022: ಹಿಮಾಚಲ ಪ್ರದೇಶ : ಇತಿಹಾಸ ಬರೆಯುವುದೇ ಬಿಜೆಪಿ?

ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಹಲವರಿದ್ದಾರೆ. 5 ಪ್ರಮುಖ ನಾಯಕರ ಹೆಸರು ಸಿಎಂ ಹುದ್ದೆಗೆ ಕೇಳಿ ಬರುತ್ತಿದೆ. ಹೈಕಮಾಂಡ್ ನಾಯಕರು ಯಾರಿಗೆ ಮಣೆ ಹಾಕುತ್ತಾರೆ? ಎಂದು ಕಾದು ನೋಡಬೇಕಿದೆ.

ಯಾರು ಸಿಎಂ ಆಗಬಹುದು?

1. ಪ್ರತಿಭಾ ಸಿಂಗ್; ಹಿಮಾಚಲ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ. ಮಾಜಿ ಮುಖ್ಯಮಂತ್ರಿ ದಿ. ವೀರಭದ್ರ ಸಿಂಗ್ ಪತ್ನಿ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಲ್ಲ. ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ. ಪಕ್ಷ ಇಷ್ಟು ಸ್ಥಾನಗಳಿಸುವಲ್ಲಿ ಇವರ ಪಾತ್ರವೂ ಹೆಚ್ಚಿದೆ.

HP Assembly Election Results 2022; Who Will CM Candidate

2. ಸುಖ್ವಿಂದರ್ ಸಿಂಗ್‌ ಸುಖು; ರಾಜ್ಯ ಕಾಂಗ್ರೆಸ್‌ನ ನಿಕಟಪೂರ್ವ ಅಧ್ಯಕ್ಷರು. ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು. ಸಂಸದ ರಾಹುಲ್ ಗಾಂಧಿಗೆ ಆಪ್ತರು. ಮೂರು ಬಾರಿ ಶಾಸಕರಾಗಿರುವ ಇವರು ಪ್ರಸ್ತುತ ಹಮಿರ್‌ಪುರದ ನೌದಾನ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ.

3. ಮುಕೇಶ್‌ ಅಗ್ನಿಹೋತ್ರಿ; ಹಿಮಾಚಲ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು. ವೀರಭದ್ರ ಸಿಂಗ್ ಸಂಪುಟದಲ್ಲಿ ಸಚಿವರು ಆಗಿದ್ದರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಉನಾ ಜಿಲ್ಲೆಯ ಹರೋಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

4. ಠಾಕೂರ್ ಕೌಲ್ ಸಿಂಗ್; 8 ಬಾರಿ ಶಾಸಕರಾಗಿರುವ ಠಾಕೂರ್ ಕೌಲ್ ಸಿಂಗ್ 77 ವರ್ಷದ ಹಿರಿಯ ನಾಯಕ. ಮಾಜಿ ಸಚಿವರು, ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷರು. ಪ್ರತಿಭಾ ಸಿಂಗ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನ ಕೈತಪ್ಪುವ ಸಾಧ್ಯತೆಯೂ ಇದೆ.

5. ಆಶಾ ಕುಮಾರಿ; ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿರುವ ಆಶಾ ಸಿಂಗ್ 6 ಬಾರಿ ಶಾಸಕಿಯಾಗಿದ್ದಾರೆ.

English summary
Himachal Pradesh assembly elections Results 2022; Congress is ahead in 38 seats with a vote share of 43.4 per cent at Himachal Pradesh. Who will chief minister candidate in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X