ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಈ ಏಪ್ರಿಲ್ ಕಂಟಕವೇ ಆಗಬಹುದು; ತಜ್ಞರು ಕೊಟ್ಟ ಎಚ್ಚರಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 15: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಅಪಾಯದ ಅಂಚನ್ನು ತಲುಪುತ್ತಿದೆ. ಸದ್ಯಕ್ಕೆ ದಿನನಿತ್ಯದ ಕೊರೊನಾ ಪ್ರಕರಣಗಳು ಎರಡು ಲಕ್ಷದ ಅಂಚಿಗೆ ತಲುಪಿವೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳುತ್ತಿದೆ. ಹಾಸಿಗೆಗಳು ಹಾಗೂ ಲಸಿಕೆಗಳ ಅಭಾವವೂ ಉಂಟಾಗಿರುವುದಾಗಿ ತಿಳಿದುಬಂದಿದೆ. ದಿನನಿತ್ಯ ಸೋಂಕಿನಿಂದ ಸಾವನ್ನಪ್ಪುತ್ತಿರುವವ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ. ಕೊರೊನಾ ಎರಡನೇ ಅಲೆ ಇನ್ನೂ ಎಷ್ಟು ದಿನ ಇರುತ್ತದೆ, ಇದು ಏನೆಲ್ಲಾ ಪರಿಣಾಮ ಬೀರಬಹುದು ಎಂಬ ಕುರಿತು ಕೆಲವು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕು ತಡೆಯುವ ಪರಿಣಾಮಕಾರಿ ಮಾರ್ಗದ ಕುರಿತೂ ಮಾತನ್ನಾಡಿದ್ದಾರೆ. ಮುಂದೆ ಓದಿ...

Explained: ಭಾರತದಲ್ಲಿ ಭಯ ಹುಟ್ಟಿಸುತ್ತಿರುವುದೇಕೆ ಕೊರೊನಾವೈರಸ್? Explained: ಭಾರತದಲ್ಲಿ ಭಯ ಹುಟ್ಟಿಸುತ್ತಿರುವುದೇಕೆ ಕೊರೊನಾವೈರಸ್?

"ಏಪ್ರಿಲ್ ತಿಂಗಳು ಕಂಟಕವೇ ಆಗಬಹುದು"

ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಒಂದು ವರ್ಷದಿಂದಲೂ ಕಾರ್ಯನಿರ್ವಹಿಸುತ್ತಿದ್ದೆವು. ಆದರೆ ಎರಡನೇ ಅಲೆ ಅವೆಲ್ಲವನ್ನೂ ನಿವಾಳಿಸಿ ಹಾಕುವಂತೆ ಕಾಣುತ್ತಿದೆ ಎಂದಿದ್ದಾರೆ ಮಿಚಿಗನ್ ವಿಶ್ವವಿದ್ಯಾಲಯದ ಎಪಿಡೆಮಿಯಾಲಜಿ ಪ್ರೊಫೆಸರ್ ಭ್ರಮರ್ ಮುಖರ್ಜಿ.
ಮುಂದಿನ ನಾಲ್ಕು ವಾರಗಳು ಭಾರತಕ್ಕೆ ಅತಿ ನಿರ್ಣಾಯಕವಾಗಿರುತ್ತದೆ. ಏಪ್ರಿಲ್ ತಿಂಗಳು ಭಾರತದ ಮಟ್ಟಕ್ಕೆ ಕಂಟಕವೇ ಆಗುವ ಸೂಚನೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಾವುಗಳನ್ನು ಮರೆಮಾಚುತ್ತಿದೆಯೇ ಸರ್ಕಾರ?: ಹೆಣದ ರಾಶಿ ಹೇಳುವ ಕಥೆಯೇ ಬೇರೆಕೋವಿಡ್ ಸಾವುಗಳನ್ನು ಮರೆಮಾಚುತ್ತಿದೆಯೇ ಸರ್ಕಾರ?: ಹೆಣದ ರಾಶಿ ಹೇಳುವ ಕಥೆಯೇ ಬೇರೆ

"ದೈನಂದಿನ ಪ್ರಕರಣ ಐದು ಲಕ್ಷ ಮುಟ್ಟಬಹುದು"

ಮುಂದಿನ ನಾಲ್ಕು ವಾರಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಬಹುದು. ದೇಶದಲ್ಲಿ ಐದು ಲಕ್ಷ ದೈನಂದಿನ ಪ್ರಕರಣಗಳು ದಾಖಲಾಗಬಹುದು. ದಿನಕ್ಕೆ ಕನಿಷ್ಠ ಎಂದರೂ 25 ಸಾವಿರ ಮಂದಿ ಆಸ್ಪತ್ರೆಗೆ ದಾಖಲಾಗಬಹುದು. ಸಾವಿನ ಸಂಖ್ಯೆ ಮೂರು ಸಾವಿರದ ಅಂಚಿಗೆ ತಲುಪಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಮುಖರ್ಜಿ. ಜೊತೆಗೆ ಇದು ಅತಿ ಕಾಳಜಿಯ ವಿಷಯವಾಗಿದ್ದು, ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

 ಮಹಾರಾಷ್ಟ್ರದಲ್ಲಿ ಮೇ ಎರಡನೇ ವಾರದ ನಂತರ ಪ್ರಕರಣ ಇಳಿಕೆ

ಮಹಾರಾಷ್ಟ್ರದಲ್ಲಿ ಮೇ ಎರಡನೇ ವಾರದ ನಂತರ ಪ್ರಕರಣ ಇಳಿಕೆ

ದಕ್ಷಿಣ ಆಫ್ರಿಕಾ, ಬ್ರಿಟನ್, ಅಮೆರಿಕದಂಥ ದೇಶಗಳು ಕೊರೊನಾ ಎರಡನೇ ಅಲೆಗೆ ತತ್ತರಿಸಿದವು. ಜೊತೆಗೆ ಅಷ್ಟೇ ವೇಗದಲ್ಲಿ ಅಲ್ಲಿ ಸೋಂಕಿನ ಪ್ರಮಾಣ ಇಳಿಯಿತು. ಸದ್ಯಕ್ಕೆ ಭಾರತದ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಏಪ್ರಿಲ್ ಕೊನೆ ಅಥವಾ ಮೇ ಮೊದಲ ಎರಡು ವಾರಗಳ ನಂತರ ಸೋಂಕು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

"ಲಸಿಕೆಯೊಂದೇ ಸುರಕ್ಷತೆ ನೀಡಲು ಸಾಧ್ಯವಿಲ್ಲ"

ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಎರಡು ವಾರದ ನಂತರ ಯಾವುದೇ ವೈರಸ್‌ನಿಂದ ದೇಹವನ್ನು ರಕ್ಷಿಸಿಕೊಳ್ಳಬಹುದಾಗಿದೆ. ಆದರೆ ಈಗ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿಯೇ ಮೊದಲ ಡೋಸ್ ಪಡೆದವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ಲಸಿಕೆ ಪಡೆದ ನಂತರ ನಾಳೆಗೇ ಎಲ್ಲವೂ ಸಿದ್ಧವಾಗುತ್ತದೆ ಎಂದು ಹೇಳುವಂತಿಲ್ಲ. ಜೊತೆಗೆ ಲಸಿಕೆಯೊಂದೇ ಸೋಂಕಿನ ವಿರುದ್ಧ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಇಂಟರ್‌ನ್ಯಾಷನಲ್ ಅಡ್ವೈಸರಿ ಬೋರ್ಡ್ ಆಫ್ ಸ್ಫುಟ್ನಿಕ್ ವಿ ಲಸಿಕೆಯ ಸದಸ್ಯ ಡಾ. ವಿ. ರವಿ.

"ನಮ್ಮನ್ನು ನಾವು ಲಾಕ್ ಮಾಡಿಕೊಳ್ಳಬೇಕು"

ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಬಹುಮುಖ್ಯವಾಗಿ ಜನಸಂದಣಿಯಿಂದ ದೂರವಿರುವುದು ಸೋಂಕು ದೂರವಿಡಲು ಪ್ರಮುಖ ಅಂಶಗಳಾಗಿವೆ.
ಜೊತೆಗೆ ಈಗ ಲಾಕ್‌ಡೌನ್ ಅವಶ್ಯಕವೂ ಇಲ್ಲ. ನಮ್ಮನ್ನು ನಾವು ಲಾಕ್‌ ಮಾಡಿಕೊಳ್ಳುವುದು ಸದ್ಯಕ್ಕೆ ಇರುವ ಅವಶ್ಯಕತೆ. ಒಮ್ಮೆ ಸೋಂಕಿನ ಪ್ರಮಾಣ ತುತ್ತತುದಿಗೆ ಹೋಗಿ ಮತ್ತೆ ಇಳಿಕೆಯಾಗುತ್ತದೆ. ಆದರೆ ಅಲ್ಲಿಯವರೆಗೂ ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

English summary
As coronavirus spike in india, some experts explains their views and suggested some solutions,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X