ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳಚೆ ನೀರಿನಿಂದ ಕೊರೊನಾ ಪತ್ತೆ; ಸೋಂಕು ಹರಡುವಿಕೆ ತಡೆ ಹೇಗೆ ಸಾಧ್ಯ?

|
Google Oneindia Kannada News

ನವದೆಹಲಿ, ಆಗಸ್ಟ್‌ 05: ಕೊರೊನಾ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ಭಿನ್ನ ಭಿನ್ನ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ಸಮುದಾಯ ಮಟ್ಟದಲ್ಲಿ ಕೊರೊನಾ ಸೋಂಕಿನ ಪತ್ತೆ ಕಾರ್ಯವನ್ನು ಸರಳಗೊಳಿಸಿ ಸೋಂಕು ಹರಡುವಿಕೆ ತಡೆಗೆ ಸಾಕಷ್ಟು ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಇದರ ಭಾಗವಾಗಿ ಕೊಳಚೆ ನೀರಿನ ಮೂಲಕ ಕೊರೊನಾ ಪತ್ತೆ ಕಾರ್ಯವನ್ನು ಹಲವು ದೇಶಗಳಲ್ಲಿ ನಡೆಸಲಾಗುತ್ತಿದ್ದು, ಭಾರತ ಕೂಡ ಈ ಪ್ರಯೋಗವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಭೀತಿ ನಡುವೆ ಕೊರೊನಾ ಸೋಂಕು ಇರುವಿಕೆ ಪತ್ತೆ ಹಚ್ಚಲು ಕೊಳಚೆ ನೀರಿನ ಮಾದರಿ ಪರೀಕ್ಷಿಸುವ ಪರಿಸರ ಕಾರ್ಯಕ್ರಮವನ್ನು ಆರಂಭಿಸಲು ಸನ್ನದ್ಧವಾಗಿದೆ.

 ಬೆಂಗಳೂರು: ಕೋವಿಡ್ ತೀವ್ರತೆ ಪತ್ತೆಗೆ 45 ವಾರ್ಡ್‌ಗಳಲ್ಲಿ ಕೊಳಚೆ ನೀರು ಪರೀಕ್ಷೆ ಬೆಂಗಳೂರು: ಕೋವಿಡ್ ತೀವ್ರತೆ ಪತ್ತೆಗೆ 45 ವಾರ್ಡ್‌ಗಳಲ್ಲಿ ಕೊಳಚೆ ನೀರು ಪರೀಕ್ಷೆ

ಭಾರತೀಯ SARS-CoV-2 ಒಕ್ಕೂಟದ ಜಿನೋಮಿಕ್ಸ್‌ (INSACOG) ಪರೀಕ್ಷೆ ಭಾಗವಾಗಿ ಈ ಚಟುವಟಿಕೆಯನ್ನು ಆರಂಭಿಸಲಾಗಿದೆ. ಈ ಮಾದರಿ ಪರೀಕ್ಷೆಯು ಕೊರೊನಾ ಮೂರನೇ ಅಲೆ ಹಾಗೂ ಮುಂದಿನ ಅಲೆಗಳ ಸಾಧ್ಯತೆಯನ್ನು ತಗ್ಗಿಸುವ ವಿಧಾನದ ಭಾಗವಾಗಿರುವುದಾಗಿ ಅಧೀಕೃತ ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ದೇಶಗಳು ಈ ಕಾರ್ಯಕ್ರಮವನ್ನು ಆರಂಭಿಸಿವೆ. ಇದೀಗ ಭಾರತವೂ ಈ ಹೊಸ ಪ್ರಯೋಗಕ್ಕೆ ಅಡಿಯಿಡುತ್ತಿದೆ. ಮಾನವನ ತ್ಯಾಜ್ಯದಲ್ಲಿರಬಹುದಾದ ಕೊರೊನಾ ಸೋಂಕಿನ ಕಣಗಳನ್ನು ಪತ್ತೆ ಹಚ್ಚುವ ಮೂಲಕ ಕೊರೊನಾ ಸೋಂಕಿನ ಮೇಲೆ ಕಣ್ಗಾವಲನ್ನು ಹೆಚ್ಚಿಸುವ ಪ್ರಯತ್ನ ಇದಾಗಿದ್ದು, ತ್ಯಾಜ್ಯ ನೀರಿನ ಸಾಂಕ್ರಾಮಿಕ ರೋಗಶಾಸ್ತ್ರದ ಮೌಲ್ಯ ಹೆಚ್ಚಾಗಿದೆ. ಮುಂದೆ ಓದಿ...

 ಕೇರಳಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ಕೊಟ್ಟ ಆರೋಗ್ಯ ತಜ್ಞರು ಕೇರಳಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ಕೊಟ್ಟ ಆರೋಗ್ಯ ತಜ್ಞರು

 ತ್ಯಾಜ್ಯ ನೀರು ಕೊರೊನಾ ಪತ್ತೆಗೆ ಹೇಗೆ ಸಹಕಾರಿ?

ತ್ಯಾಜ್ಯ ನೀರು ಕೊರೊನಾ ಪತ್ತೆಗೆ ಹೇಗೆ ಸಹಕಾರಿ?

ಸೋಂಕು ಪತ್ತೆಗೆ ಕೊಳಚೆ ನೀರಿನ ಪರೀಕ್ಷೆ ಹೊಸ ತಂತ್ರವೇನಲ್ಲ. ಪೋಲಿಯೋ, ಟೈಫಾಯ್ಡ್‌ನಂಥ ನೀರಿನಿಂದ ಹರಡುವ ರೋಗಗಳನ್ನು ಪತ್ತೆ ಹಚ್ಚಲು ಈ ಹಿಂದೆ ವ್ಯಾಪಕವಾಗಿ ಕೊಳಚೆ ನೀರಿನ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಕೊರೊನಾ ಲಕ್ಷಣಗಳಿದ್ದ ಜನರ ಮೂತ್ರದಲ್ಲಿ ಈ ಸೋಂಕಿನ ಕಣಗಳು ಕೊಳಚೆ ನೀರಿನಲ್ಲಿ ದೊರೆಯುವುದು. ಹೀಗಾಗಿ ಆಯಾ ಪ್ರದೇಶದಲ್ಲಿ ಸೋಂಕಿನ ಸಾಧ್ಯತೆಯನ್ನು ಈ ಪರೀಕ್ಷೆಯ ಮೂಲಕ ಕಂಡುಕೊಳ್ಳಲು ಸಾಧ್ಯ ಎಂದು ಸಂಶೋಧನೆ ತೋರಿಸಿದೆ.

 ಸಮುದಾಯದಲ್ಲಿ ಸೋಂಕು ಸ್ಫೋಟ ಪತ್ತೆಗೆ ಈ ಮಾದರಿ ಸಹಕಾರಿ

ಸಮುದಾಯದಲ್ಲಿ ಸೋಂಕು ಸ್ಫೋಟ ಪತ್ತೆಗೆ ಈ ಮಾದರಿ ಸಹಕಾರಿ

ಸೋಂಕು ಸ್ಫೋಟವಾಗುವ ಸ್ಥಳಗಳನ್ನು ಗುರುತಿಸಲು ಈ ವಿಧಾನವನ್ನು ಮೌಲ್ಯಯುತ ಸಾಧನವಾಗಿ ನೋಡಲಾಗುತ್ತದೆ. ವಿವಿಧ ಪ್ರದೇಶಗಳಲ್ಲಿ ಕೊಳಚೆ ನೀರನ್ನು ಪರೀಕ್ಷಿಸುವ ಮೂಲಕ ಆರೋಗ್ಯ ಅಧಿಕಾರಿಗಳು ಈ ಹಿಂದೆ ಸಮುದಾಯಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಿದ್ದ ಉದಾಹರಣೆಗಳೂ ದೊರೆತಿವೆ. ಈ ವಿಧಾನವನ್ನೇ ಇದೀಗ ವ್ಯಾಪಕವಾಗಿ ಬಳಸಲು ಹಲವು ದೇಶಗಳು ಮುಂದಾಗಿವೆ.

ಇತ್ತೀಚೆಗಿನ mBIO ಸಂಶೋಧನೆ ಪ್ರಕಾರ, ತ್ಯಾಜ್ಯ ನೀರಿನಲ್ಲಿ ಕೊರೊನಾ ಸೋಂಕಿನ ಕುರುಹುಗಳನ್ನು ಪತ್ತೆ ಹಚ್ಚುವುದು ಡೆಲ್ಟಾ ಪ್ಲಸ್‌ನಂಥ ರೂಪಾಂತರಗಳ ಸೃಷ್ಟಿ ಹಾಗೂ ಉಪಸ್ಥಿತಿ, ತೀವ್ರತೆ ಗುರುತಿಸಲು ಉಪಯುಕ್ತ ಎನ್ನಲಾಗಿದೆ. INSACOGನ ಪ್ರಯೋಗಾಲಯ ಫಲಿತಾಂಶದಲ್ಲಿ, ಕೊಳಚೆ ನೀರಿನ ಮಾದರಿ ಪರೀಕ್ಷೆಯಿಂದ ಸೋಂಕಿನ ವಿಕಸನ ಪತ್ತೆ ಹಚ್ಚುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿರುವುದು ಕಂಡುಬಂದಿದೆ. ನಿರ್ದಿಷ್ಟ ಸಮುದಾಯ ಅಥವಾ ಪ್ರದೇಶದಲ್ಲಿ ನೂರಾರು ಮಂದಿಯನ್ನು ನಿರಂತರ ಪರೀಕ್ಷಿಸುವುದು ಅಸಾಧ್ಯ ಹಾಗೂ ದುಬಾರಿಯಾದ್ದರಿಂದ ಈ ರೀತಿಯ ಪರೀಕ್ಷೆ ಉಪಯುಕ್ತ ಎನ್ನಲಾಗಿದೆ.
 55 ದೇಶಗಳಲ್ಲಿ ಈ ವಿಧಾನ ಅನುಸರಣೆ

55 ದೇಶಗಳಲ್ಲಿ ಈ ವಿಧಾನ ಅನುಸರಣೆ

ಸದ್ಯಕ್ಕೆ 55 ದೇಶಗಳಲ್ಲಿನ 2276 ತಾಣಗಳಲ್ಲಿ ಈ ರೀತಿಯ ಪರೀಕ್ಷೆ ನಡೆಸಲಾಗಿದೆ. ಒಂದೊಂದು ದೇಶದಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಮಾದರಿ ಪರೀಕ್ಷೆ ನಡೆಯುತ್ತಿದೆ. ಉದಾಹರಣೆಗೆ, ಯುನೈಟೆಡ್ ಅರಬ್ ಒಕ್ಕೂಟದಲ್ಲಿ ವಾಣಿಜ್ಯ ವಿಮಾನ ನಿಲ್ದಾಣದ ಕೊಳಚೆ ನೀರನ್ನು ಪರೀಕ್ಷಿಸಲಾಗುತ್ತಿದೆ. ಸಿಂಗಪುರ ಹಾಗೂ ಹಾಂಗ್‌ಕಾಂಗ್‌ನಲ್ಲಿ ಅಪಾರ್ಟ್‌ಮೆಂಟ್ ಕಟ್ಟಡಗಳ ಕೊಳಚೆ ನೀರಿನಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅಮೆರಿಕದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆಸ್ಟ್ರೇಲಿಯಾ, ಬ್ರಿಟನ್, ನೆದರ್ಲ್ಯಾಂಡ್, ಸ್ವಿಡ್ಜರ್ಲೆಂಡ್, ಸ್ಪೇನ್‌ನಲ್ಲಿ ಈ ತಂತ್ರವನ್ನು ಅನುಸರಿಸಲಾಗುತ್ತಿದೆ. ಇಟಲಿಯಲ್ಲಿ ಮೊದಲ ಬಾರಿಗೆ ಈ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ.

 ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಆರಂಭವಾದ ಪ್ರಯೋಗ

ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ಆರಂಭವಾದ ಪ್ರಯೋಗ

ಭಾರತದಲ್ಲಿ, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕೊಳಚೆ ನೀರಿನ ಮಾದರಿ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಮೇ ತಿಂಗಳಿನಲ್ಲಿ ಬೆಂಗಳೂರಿನ 48 ವಾರ್ಡ್‌ಗಳಲ್ಲಿ ಪರೀಕ್ಷೆ ನಡೆದಿದೆ. ಈ ನೀರಿನ ಪರೀಕ್ಷೆಯಿಂದ ಕೋವಿಡ್‌ನ ಪ್ರಭಾವ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಅಲ್ಲದೆ, ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವ ಪ್ರದೇಶವನ್ನು ಕೋವಿಡ್ ಕ್ಲಸ್ಟರ್‌ಗಳನ್ನಾಗಿ ರೂಪಿಸಬಹುದು. ಇಡೀ ನಗರಕ್ಕೆ ಲಾಕ್‌ಡೌನ್‌ ಘೋಷಿಸುವ ಬದಲು ಸಣ್ಣ ಸಣ್ಣ ಕಂಟೈನ್‌ಮೆಂಟ್‌ ವಲಯಗಳನ್ನಾಗಿ ಮಾಡಬಹುದಾಗಿದೆ.

English summary
Central government is set to launch an environmental surveillance programme involving testing sewage samples for the presence of SARS-CoV-2,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X