ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಮಾಸ್ಕ್ ಧರಿಸುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

|
Google Oneindia Kannada News

ದುಬೈನಿಂದ ಭಾರತಕ್ಕೆ ವಾಪಸ್ ಆಗಿದ್ದ 64 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ಇಂದು (ಮಾ 17) ಮೃತಪಟ್ಟಿದ್ದಾನೆ. ಈ ಮೂಲಕ, ಭಾರತದಲ್ಲಿ ಕೊರೊನಾ ವೈರಸ್ ಮೂರು ಜನರನ್ನು ಬಲಿತೆಗೆದುಕೊಂಡಿದೆ.

Recommended Video

Italy reports 3,590 more coronavirus cases, its biggest one-day increase

ಮಹಾರಾಷ್ಟ್ರದ ಇನ್ನೊಂದು ವಿದ್ಯಮಾನದಲ್ಲಿ, ಮಾರ್ಚ್ 14ರಂದು ಅಮೆರಿಕಾದಿಂದ ಮುಂಬೈಗೆ ಬಂದಿದ್ದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಆ ಟೆಕ್ಕಿ ಜೊತೆ ವಾಸವಾಗಿದ್ದ ಪತ್ನಿ ಮತ್ತು ಮಗುವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಪತ್ನಿ ಮತ್ತು ಮೂರು ವರ್ಷದ ಮಗು ಇಬ್ಬರಿಗೂ ಕೊರೊನಾ ಇರುವುದು ಖಚಿತವಾಗಿದೆ.

ಕೊರೊನಾ ವೈರಸ್ ನಿಂದಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಗೆ ಭಾರೀ ಡಿಮಾಂಡ್ ಇರುವುದು ಗೊತ್ತಿರುವ ವಿಚಾರ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ, ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿದೆ.

ತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕುತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು

ಮಾಸ್ಕ್ ಯಾವಾಗ ಧರಿಸಬೇಕು, ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆಯಿದೆಯೇ, ಮಾಸ್ಕ್ ಧರಿಸುವಾಗ, ಪಾಲಿಸಬೇಕಾದ ನಿಯಮಗಳನ್ನು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅದು ಹೀಗಿದೆ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ

ಇಲಾಖೆಯ ಪ್ರಕಟಣೆಯ ಪ್ರಕಾರ ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇದ್ದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಮತ್ತು ಇಂತಹ ವ್ಯಕ್ತಿಗಳನ್ನು ನೋಡಿಕೊಳ್ಳುವ ರಕ್ಷಣಾ ತಂಡದವರು ಮಾತ್ರ ಮಾಸ್ಕ್ ಮೊರೆಹೋದರೆ ಸಾಕು.

ಮಾಸ್ಕ್ ನ ನೆರಿಗೆಗಳನ್ನು ಬಿಚ್ಚಿಡಬೇಕು. ಆ ನೆರಿಗೆಗಳು ಕೆಳಮುಖವಾಗಿರಬೇಕು

ಮಾಸ್ಕ್ ನ ನೆರಿಗೆಗಳನ್ನು ಬಿಚ್ಚಿಡಬೇಕು. ಆ ನೆರಿಗೆಗಳು ಕೆಳಮುಖವಾಗಿರಬೇಕು

ಮಾಸ್ಕ್ ನ ನೆರಿಗೆಗಳನ್ನು ಬಿಚ್ಚಿಡಬೇಕು. ಆ ನೆರಿಗೆಗಳು ಕೆಳಮುಖವಾಗಿರಬೇಕು. ಆರು ಗಂಟೆಗಳ ನಂತರ ಮಾಸ್ಕ್ ಅನ್ನು ಬದಲಾಯಿಸಬೇಕು ಅಥವಾ ಮಾಸ್ಕ್ ತೇವವಾಗಿದ್ದಲ್ಲಿ ತಕ್ಷಣ ಬದಲಾಯಿಸಬೇಕು. ಮೂಗು, ಬಾಯಿ ಮತ್ತು ಗಲ್ಲವನ್ನು ಮುಚ್ಚುವ ಹಾಗೆ ಮಾಸ್ಕ್ ಕಟ್ಟಬೇಕು.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಮಾಸ್ಕ್ ಧರಿಸಿದಾಗ ಕೈಯಿಂದ ಅದನ್ನು ಪದೇಪದೇ ಮುಟ್ಟಬಾರದು

ಮಾಸ್ಕ್ ಧರಿಸಿದಾಗ ಕೈಯಿಂದ ಅದನ್ನು ಪದೇಪದೇ ಮುಟ್ಟಬಾರದು

ಮಾಸ್ಕ್ ನ ಎರಡೂ ಬದಿ ಯಾವುದೇ ಜಾಗವನ್ನು ಬಿಡಬಾರದು. ಒಂದು ಬಾರಿ ಉಪಯೋಗಿಸಿದ ಮಾಸ್ಕ್ ಅನ್ನು ಮತ್ತೊಮ್ಮೆ ಉಪಯೋಗಿಸಬಾರದು. ಮಾಸ್ಕ್ ಬಳಸಿದ ನಂತರ ಅದನ್ನು ಮುಚ್ಚಿದ ಕಸದ ಡಬ್ಬದಲ್ಲಿ ಹಾಕಬೇಕು. ಮಾಸ್ಕ್ ಧರಿಸಿದಾಗ ಕೈಯಿಂದ ಅದನ್ನು ಪದೇಪದೇ ಮುಟ್ಟಬಾರದು.

ಸಾಬೂನು ಅಥವಾ ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳಬೇಕು

ಸಾಬೂನು ಅಥವಾ ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳಬೇಕು

ಮಾಸ್ಕ್ ಅನ್ನು ಕುತ್ತಿಗೆಯ ಕೆಳಗೆ ತೂಗಿಬಿಡಬಾರದು. ಮಾಸ್ಕ್ ತೆಗೆದ ನಂತರ ಕೈಯನ್ನು ಸಾಬೂನು ಅಥವಾ ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳಬೇಕು. ಮಾಸ್ಕ್ ನ ಹೊರಭಾಗ ಕಲುಷಿತವಾಗಿರುವುದರಿದ, ಹೊರಭಾಗವನ್ನು ಮುಟ್ಟಬಾರದು.

English summary
How To Wear The Mask: Govt Of India Health And Family Welfare Ministry Guidelines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X