ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ

|
Google Oneindia Kannada News

ನವದೆಹಲಿ, ಮೇ 21: ಕೊರೊನಾ ಸೋಂಕಿನಿಂದ ಗುಣಮುಖರಾದ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೊನಾ ಸೋಂಕಿನ ನಡುವೆ ಮತ್ತೊಂದು ಆತಂಕ ಸೃಷ್ಟಿಯಾಗಿದೆ.

ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಈಗ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಲ್ಯಾಕ್ ಫಂಗಸ್‌ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಮ್ಯೂಕರ್‌ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹಲವು ರಾಜ್ಯಗಳಲ್ಲಿ ವರದಿಯಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಪ್ರಮುಖವಾದ ಮೂರು ಅಂಶಗಳನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ದೇಶಕ ರಣದೀಪ್ ಗುಲೇರಿಯಾ ಪಟ್ಟಿ ಮಾಡಿದ್ದಾರೆ. ಇವುಗಳನ್ನು ಅನುಸರಿಸಿದರೆ ಬ್ಲ್ಯಾಕ್ ಫಂಗಸ್ ಬರುವುದನ್ನು ತಡೆಗಟ್ಟಬಹುದು ಎಂದಿದ್ದಾರೆ. ಅವು ಯಾವುವು? ಮುಂದೆ ಓದಿ...

 ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು? ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು?

 ಬ್ಲ್ಯಾಕ್ ಫಂಗಸ್ ತಡೆಗೆ ಪ್ರಮುಖ ಅಂಶಗಳು...

ಬ್ಲ್ಯಾಕ್ ಫಂಗಸ್ ತಡೆಗೆ ಪ್ರಮುಖ ಅಂಶಗಳು...

ಬ್ಲ್ಯಾಕ್ ಫಂಗಸ್ ತಡೆಗಟ್ಟುವಲ್ಲಿಈ ಮೂರು ಅಂಶಗಳು ಪ್ರಮುಖವಾಗಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಸ್ಟೆರಾಯ್ಡ್ ಬಳಸುತ್ತಿರುವವರಲ್ಲಿ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸುವುದು ಹಾಗೂ ಸ್ಟೆರಾಯ್ಡ್ ಯಾವಾಗ ಹಾಗೂ ಎಷ್ಟು ಡೋಸ್‌ಗಳಲ್ಲಿ ನೀಡಬೇಕು ಎಂಬುದರ ಕುರಿತು ನಿಗಾ ವಹಿಸುವುದು ಅತಿ ಅವಶ್ಯಕ. ಇದನ್ನು ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವಾಗ ಅನುಸರಿಸಿದರೆ ಬ್ಲ್ಯಾಕ್ ಫಂಗಸ್ ಬರದಂತೆ ತಡೆಯಬಹುದು ಎಂದು ಸಲಹೆ ನೀಡಿದ್ದಾರೆ.

"2002ರಲ್ಲಿಯೂ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು"

2002ರಲ್ಲಿಯೂ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಕೊರೊನಾದೊಂದಿಗೆ ಅನಿಯಂತ್ರಿತ ಮಧುಮೇಹ ಇರುವವರಲ್ಲಿ ಈ ಸೋಂಕಿನ ಸಾಧ್ಯತೆ ಹೆಚ್ಚಿಗೆ ಕಂಡುಬರುತ್ತಿದೆ ಎಂದು ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸೋಂಕು ದಾಳಿ ಮಾಡುತ್ತಿದೆ. ಸ್ಟೆರಾಯ್ಡ್‌ಗಳ ಹೆಚ್ಚಿನ ಬಳಕೆಯೂ ಇದಕ್ಕೆ ಕಾರಣವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬ್ಲ್ಯಾಕ್ ಫಂಗಸ್‌ ಸಾಂಕ್ರಾಮಿಕ ರೋಗ ಎಂದು ಘೋಷಿಸಿ: ಕೇಂದ್ರ ಸರ್ಕಾರ ಸೂಚನೆಬ್ಲ್ಯಾಕ್ ಫಂಗಸ್‌ ಸಾಂಕ್ರಾಮಿಕ ರೋಗ ಎಂದು ಘೋಷಿಸಿ: ಕೇಂದ್ರ ಸರ್ಕಾರ ಸೂಚನೆ

 ಸ್ಟೆರಾಯ್ಡ್ ಬಳಕೆ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ

ಸ್ಟೆರಾಯ್ಡ್ ಬಳಕೆ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ

ಕೊರೊನಾ ಎರಡನೇ ಅಲೆಯಲ್ಲಿ ಸ್ಟೆರಾಯ್ಡ್‌ಗಳ ಬಳಕೆ ಹೆಚ್ಚಾಗಿದೆ. ಹೆಚ್ಚು ಸ್ಟೆರಾಯ್ಡ್‌ಗಳ ಬಳಕೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಕಾರಣವಾಗಿದೆ. ಇದು ಬ್ಲ್ಯಾಕ್ ಫಂಗಸ್ ಸಾಧ್ಯತೆಯನ್ನು ಹೆಚ್ಚಿಸಿದೆ. ಹೀಗಾಗಿ ರೋಗಿಗಳಿಗೆ ಔಷಧಗಳ ಬಳಕೆ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಆಗ ಮಾತ್ರ ಬ್ಲ್ಯಾಕ್ ಫಂಗಸ್ ತಡೆಯಲು ಸಾಧ್ಯ ಎಂದಿದ್ದಾರೆ.

 ಬ್ಲ್ಯಾಕ್ ಫಂಗಸ್‌ನಿಂದ 126 ಮಂದಿ ಸಾವು

ಬ್ಲ್ಯಾಕ್ ಫಂಗಸ್‌ನಿಂದ 126 ಮಂದಿ ಸಾವು

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರದವರೆಗಿನ ಅಧಿಕೃತ ಮಾಹಿತಿ ಪ್ರಕಾರ 5,500 ಜನರು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗಿದ್ದಾರೆ. ಒಟ್ಟು 126 ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದು ಮಹಾರಾಷ್ಟ್ರವೊಂದರಲ್ಲೇ 90 ಸಾವಿನ ಪ್ರಕರಣಗಳು ದೃಢಪಟ್ಟಿದೆ. ಬ್ಲ್ಯಾಕ್ ಫಂಗಸ್ ಪ್ರಕರಣಗಳ ಚಿಕಿತ್ಸೆಗೆ ಔಷಧಿಗಳ ಕೊರತೆಯೂ ಎದುರಾಗಿದೆ. ಲಿಪೊಸೋಮಲ್ ಆಂಪೋಟೇರಿಸಿನ್ ಬಿ ಎಂಬ ಆ್ಯಾಂಟಿ ಫಂಗಲ್ ಡ್ರಗ್ ಇದಕ್ಕೆ ಅಗತ್ಯವಿರುವ ಔಷಧಿಯಾಗಿದೆ. ಇದರ ಕೊರತೆ ಕೂಡ ಈಗ ಚಿಕಿತ್ಸೆಯ ದೃಷ್ಟಿಯಿಂದ ಸವಾಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಪ್ರಕರಣಗಳಿಂದ ಸಾವನ್ನಪ್ಪುತ್ತಿರುವ ರಾಜ್ಯಗಳಲ್ಲಿ ಹರಯಾಣ ಎರಡನೇ ಸ್ಥಾನದಲ್ಲಿದ್ದು ಈವರೆಗೆ 14 ಜನರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

English summary
All India Institute of Medical Science director Randeep Guleria on Friday listed three factors important in the prevention of 'black fungus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X