ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PAN-ಆಧಾರ್ ಜೋಡಣೆ ಹೇಗೆ? ಜೂ.30 ಕೊನೇ ದಿನ ನೆನಪಿರಲಿ!

|
Google Oneindia Kannada News

Recommended Video

PAN - ಆಧಾರ್ ಜೋಡಣೆ ಹೇಗೆ? Demo video in Kannada | Oneindia Kannada

ನವದೆಹಲಿ, ಜೂನ್ 22: ನಿಮ್ಮ PAN( Permanent Account Number) ಅನ್ನು ಆಧಾರ್ ಜೊತೆ ಜೋಡಿಸಿದ್ದೀರಾ? ಮಾಡಿಲ್ಲವೆಂದರೆ ಜೂನ್ 30 ರೊಳಗೆ ಆ ಕೆಲಸವನ್ನು ಮುಗಿಸಿಬಿಡಿ. ಎಲ್ಲಾ ತೆರಿಗೆದಾರರಿಗೂ ಅತ್ಯಗತ್ಯವಾದ ಪ್ಯಾನ್-ಆಧಾರ್ ಜೋಡಣೆ ಪ್ರಕ್ರಿಯೆ ಸರ್ಕಾರ ನೀಡಿದ ಗಡುವು ಜೂನ್ 30 ಕ್ಕೆ ಮುಗಿಯಲಿದೆ!

ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಯೂ ತನ್ನ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲೇಬೇಕು ಎಂಬ ಕಡ್ಡಾಯ ನಿಯಮವನ್ನು ಸರ್ಕಾರ ತಂದಿತ್ತು. ಎಲ್ಲಾ ತೆರಿಗೆದಾರರಿಗೂ ಇದು ಕಡ್ಡಾಯವಾಗಿತ್ತು. ಆದರೆ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಪ್ಯಾನ್-ಆಧಾರ್ ಜೋಡಣೆಯ ದಿನಾಂಕವನ್ನು ಐದು ಬಾರಿ ಸರ್ಕಾರ ವಿಸ್ತರಿಸಿತ್ತು.

ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

ಕಳೆದ ವರ್ಷ ಜುಲೈ 31, ಆಗಸ್ಟ್ 31, ನಂತರ ಡಿಸೆಂಬರ್ 31, ಮಾರ್ಚ್ 31 ನಂತರ ಜೂನ್ 30 ಕ್ಕೆ ದಿನಾಂಕವನ್ನು ವಿಸ್ತರಿಸಿತ್ತು.

ಏನಿದು ವರ್ಚ್ಯುವಲ್ ಆಧಾರ್ ನಂಬರ್? ಪಡೆಯುವುದು ಹೇಗೆ? ಏನಿದು ವರ್ಚ್ಯುವಲ್ ಆಧಾರ್ ನಂಬರ್? ಪಡೆಯುವುದು ಹೇಗೆ?

ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಬೇಕಾದರೆ ಪ್ಯಾನ್ -ಆಧಾರ್ ಜೋಡಣೆ ಕಡ್ಡಾಯ. ಪ್ಯಾನ್ ನೊಂದಿಗೆ ಆಧಾರ್ ಜೋಡಿಸುವುದು ಹೇಗೆ ಎಂಬ ಕುರಿತು ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ.

ಪ್ಯಾನ್ -ಆಧಾರ್ ಜೋಡಣೆ ಹೇಗೆ?

ಪ್ಯಾನ್ -ಆಧಾರ್ ಜೋಡಣೆ ಹೇಗೆ?

ಆದಾಯ ತೆರಿಗೆ ಕಾಯ್ದೆಯ 139 AA(2) ಸೆಕ್ಷನ್ ಪ್ರಕಾರ ಪ್ಯಾನ್ ಕಾರ್ಡ್ ಅನ್ನು ಹೊಂದಿರುವ ಪ್ರತಿ ವ್ಯಕ್ತಿಯೂ ಆಧಾರ್ ನಂಬರ್ ನೊಂದಿಗೆ ಪ್ಯಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು. ಹೀಗೆ ಪ್ಯಾನ್ -ಆಧಾರ್ ಅನ್ನು ಆನ್ ಲೈನ್ ನಲ್ಲಿ ಲಿಂಕ್ ಮಾಡುವುದಕ್ಕೆ ಸುಲಭ ಮಾರ್ಗವಿದೆ. ಮೊದಲು ಆದಾಯ ತೆರಿಗೆ ವೆಬ್ ಸೈಟ್ ಗೆ ಭೇಟಿ ನೀಡಿ. https://www.incometaxindiaefiling.gov.in/

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ರಿಜಿಸ್ಟರ್ ಮಾಡುವುದು ಹೇಗೆ?

ರಿಜಿಸ್ಟರ್ ಮಾಡುವುದು ಹೇಗೆ?

ಈ ವೆಬ್ ಸೈಟ್ ನಲ್ಲಿ ಈಗಾಗಲೇ ನೀವು ರಿಜಿಸ್ಟರ್ ಆಗಿದ್ದರೆ, ವೆಬ್ ಸೈಟ್ ನಲ್ಲಿ ನಿಮ್ಮ ಬಲಭಾಗದಲ್ಲಿ ಕಾಣುವ Log in here ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ಈ ವೆಬ್ ಸೈಟಿಗೆ ರಿಜಿಸ್ಟರ್ ಆಗಿಲ್ಲದಿದ್ದರೆ "Register yourself" ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿ.

ಆಧಾರ್ ಜೋಡಣೆ

ಆಧಾರ್ ಜೋಡಣೆ

ಈ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಆಗದೆಯೂ ನೇರವಾಗಿ ಪ್ಯಾನ್ ನೊಂದಿಗೆ ಆಧಾರ್ ನಂಬರ್ ಜೋಡಿಸಬಹುದು. ವೆಬ್ ಸೈಟ್ ನಲ್ಲಿ ನಿಮ್ಮ ಎಡಗಡೆ 'ಲಿಂಕ್ ಆಧಾರ್' ಎಂಬ ಕೆಂಪು ಬಣ್ಣದ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ , ನಿಮ್ಮ ಪ್ಯಾನ್, ಆಧಾರ್ ಮತ್ತು ಆಧಾರ್ ಕಾರ್ಡಿಗನುಗುಣವಾಗಿ ನಿಮ್ಮ ಹೆಸರನ್ನು ಅದು ಕೇಳುತ್ತದೆ. ಅಲ್ಲಿರುವ ಖಾಲಿಜಾಗಗಳ್ನನು ತುಂಬಿ, ಕ್ಯಾಪ್ಚಾ ಕೋಡ್ ಸರಿಯಾಗಿ ತುಂಬಿ. ನಂತರ ಲಿಂಕ್ ಆಧಾರ್ ಎಂದು ಕೊಟ್ಟರೆ ನಿಮ್ಮ ಪ್ಯಾನ್ ನಂಬರ್ ಜೊತೆ ಆಧಾರ್ ಜೋಡಣೆಯಾಗುತ್ತದೆ.

ಸ್ಟೇಟಸ್ ತಿಳಿಯುವುದು ಹೇಗೆ?

ಸ್ಟೇಟಸ್ ತಿಳಿಯುವುದು ಹೇಗೆ?

ನಿಮ್ಮ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಆಗಿದೆಯೋ, ಇಲ್ಲವೋ ಅಥವಾ ಈ ಮೊದಲೇ ನಾನು ಲಿಂಕ್ ಮಾಡಿದ್ದು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದಕ್ಕೂ ಸಾಧ್ಯ. ಲಿಂಕ್ ಆಧಾರ್ ಆಯ್ಕೆಗೆ ಹೋದೊಡನೆ, ಸ್ಕ್ರೀನ್ ನಲ್ಲಿ ನೀವು ಈಗಾಗಲೇ ಆಧಾರ್ -ಪ್ಯಾನ್ ಜೋಡಿಸಿದ್ದರೆ ಅದರ ಸ್ಟೇಟಸ್ ತಿಳಿಯಬೇಕೆಂದರೆ, 'click here' ಎಂಬ ಕೆಂಪು ಬಣ್ಣದ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಆಧಾರ್ ಮತ್ತು ಪ್ಯಾನ್ ನಂಬರ್ ಉಲ್ಲೇಖಿಸಿ, View link aadhaar status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್-ಆಧಾರ್ ಜೊತೆ ಲಿಂಕ್ ಆಗಿದೆಯೇ ಇಲ್ಲವೆ ಎಂಬುದು ತಿಳಿಯುತ್ತದೆ.

English summary
June 30th is lst date to link your PAN number to Aadhaar. Section 139 AA (2) of the Income Tax Act says that every person having PAN has to link it with Aadhaar. Here is deatils about How to link Pan with Aadhaar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X