ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆ. 17: ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಪತ್ರ ಹಾಗೂ ಆಧಾರ್ ಗುರುತಿನ ಚೀಟಿ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿ ಓದಿರುತ್ತೀರಿ. ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ? ಇಲ್ಲಿ ಓದಿ

ಪ್ಯಾನ್ ಆಯ್ತು, ಸದ್ಯದಲ್ಲೇ ಡ್ರೈವಿಂಗ್ ಲೈಸನ್ಸ್ ಗೂ ಆಧಾರ್ ಲಿಂಕ್?ಪ್ಯಾನ್ ಆಯ್ತು, ಸದ್ಯದಲ್ಲೇ ಡ್ರೈವಿಂಗ್ ಲೈಸನ್ಸ್ ಗೂ ಆಧಾರ್ ಲಿಂಕ್?

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಬಗ್ಗೆ ಅಧಿಕೃತವಾಗಿ ಆದೇಶ ಪ್ರಕಟವಾಗಿಲ್ಲ.

How to link Aadhaar with driving licence

ಇತ್ತೀಚೆಗೆ ಆಧಾರ್ ಲಿಂಕ್ ಮಾಡುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವುದು ಸಲ್ಲದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈ ಬಗ್ಗೆ ಸೂಕ್ತವಾಗಿ ಚರ್ಚಿಸಿ, ಸಮಂಜಸ ನಿರ್ಧಾರ ಕೈಗೊಳ್ಳುವುದಾಗಿ ರವಿಶಂಕರ್ ಪ್ರಸಾದ್ ತಿಳಿಸಿದರು.

ಟಿಕೆಟ್ ಬುಕ್ಕಿಂಗ್ ವೇಳೆ ಎಂ-ಆಧಾರ್ ಗೆ ಮಾನ್ಯತೆ: ರೈಲ್ವೆ ಇಲಾಖೆಟಿಕೆಟ್ ಬುಕ್ಕಿಂಗ್ ವೇಳೆ ಎಂ-ಆಧಾರ್ ಗೆ ಮಾನ್ಯತೆ: ರೈಲ್ವೆ ಇಲಾಖೆ

ಚಾಲನ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಪತ್ರ ಹಾಗೂ ಆಧಾರ್ ಲಿಂಕ್ ಮಾಡಲು ಅನುಕೂಲವಾಗುವಂತೆ ಎಲ್ಲಾ ರಾಜ್ಯಗಳ ಆಯಾ ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸದ್ಯಕ್ಕೆ ಈ ಸೇವೆ ಇನ್ನೂ ಲಭ್ಯವಾಗಿಲ್ಲ. ಲಭ್ಯವಾದ ಬಳಿಕ ಈ ಕೆಳಗಿನ ವಿಧಾನವನ್ನು ಬಳಸಿ..

* ಮೊದಲಿಗೆ ಸಾರಿಗೆ ಇಲಾಖೆ ವೆಬ್ ಸೈಟ್ ಗೆ ಭೇಟಿ ಕೊಡಿ (ಉದಾ: http://transport.karnataka.gov.in)
* ಆಧಾರ್ ಸಂಖ್ಯೆ ನಮೂದಿಸುವ ಆಯ್ಕೆ ಮಾಡಿಕೊಳ್ಳಿ
* Search Element ಎಂಬಲ್ಲಿ ಲೈಸನ್ಸ್ ಅಥವಾ ನೋಂದಣಿ ಸಂಖ್ಯೆ ಆಯ್ಕೆ ಮಾಡಿಕೊಳ್ಳಿ
* ನಿಮ್ಮ ನೋಂದಣಿ ಸಂಖ್ಯೆ ಅಥವಾ ಲೈಸನ್ಸ್ ನಂಬರ್ ಸೇರಿಸಿ.
* Get details ಚಿನ್ಹೆ ಆಯ್ದುಕೊಂಡು ನಿಮ್ಮ ವಾಹನದ ಸಂಖ್ಯೆ ಸರಿ ಇದೆಯೇ ಪರಿಶೀಲಿಸಿ.
* ನಂತರ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕಲಂನ್ನು ಪರಿಶೀಲಿಸಿ.
* 12 ಅಂಕಿಯ ಆಧಾರ್ ಸಂಖ್ಯೆಯನ್ನು ದಾಖಲಿಸಿ, ಫೋನ್ ನಂಬರ್ ನಮೂದಿಸಿ.
* ಇದಾದ ಬಳಿಕ ನಿಮ್ಮ ಆಧಾರ್ ಹಾಗೂ ಲೈಸನ್ಸ್ ಜೋಡಣೆಯಾಗಿದ್ದು ಯಶಸ್ವಿಯಾಗಿದ್ದಕ್ಕೆ ಮೊಬೈಲಿಗೆ ಸಂದೇಶ ಬರಲಿದೆ.

English summary
Union Law Minister Ravi Shankar Prasad said that the government would soon link driving licence with Aadhaar. How to link Aadhaar with Driving Licence?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X