ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕ ಪರವಾನಗಿ: ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 3: ಅನಕ್ಷರಸ್ಥರು ಹೆಚ್ಚಿರುವ ಕಾರಣ ಕಾರ್ಮಿಕರ ಪರವಾನಗಿ ಪಡೆಯಲು ಇರುವ ಆನ್‌ಲೈನ್‌ ಮಾರ್ಗ ಸುಲಭ ಸಾಧುವಲ್ಲ.

ಅರ್ಜಿ ಸಲ್ಲಿಸುವಾಗ ಹಲವಾರು ದಾಖಲೆಗಳನ್ನು ಸಲ್ಲಿಸಬೇಕಾಗಿರುವುದರಿಂದ ನೋಂದಣಿಗೆ ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾನ್ಯವಾಗಿ ಕೇಳಿ ಬರುವ ದೂರು.

ಆದ್ದರಿಂದ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳೀಕರಣಗೊಳಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಕಾರ್ಮಿಕರಿಗೋಸ್ಕರ ಕಲ್ಯಾಣ ಮಂಡಳಿ ಸ್ಥಾಪಿಸಿ 11 ವರ್ಷ ಕಳೆದರೂ ಕಾರ್ಮಿಕ ನೋಂದಣಿ ಪ್ರಕ್ರಿಯೆ ಕಾರ್ಮಿಕ ಸ್ನೇಹಿಯಾಗಿಲ್ಲ. ಹೀಗಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು ವರ್ಷಗಟ್ಟಲೆ ಕಾರ್ಮಿಕರು ಅಲೆದಾಡುವ ಪರಿಸ್ಥಿತಿ ಇದೆ.

ಇದರ ನಡುವೆಯೂ ಈಗಿರುವ ವ್ಯವಸ್ಥೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಕೆಯ ವಿಧಾನ ಹೇಗಿದೆ? ಕಾರ್ಮಿಕರ ಕಾರ್ಮಿಕ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗದಿರುವವರು, ಆನ್‌ಲೈನ್ ಬಳಕೆ ಸಾಧ್ಯ ಇರುವವರಿಗಾಗಿ ಇಲ್ಲಿಗೆ ಉಪಯುಕ್ತ ಮಾಹಿತಿ.

How to Get Online Labor License in India

ಕಾರ್ಮಿಕರು ಆನ್‌ಲೈನ್ ಮೂಲಕ ಪರವಾನಗಿ ಅರ್ಜಿ ಸಲ್ಲಸಲು ಕೆಳಗಿನ ವಿಧಾನವನ್ನು ಬಳಸಬಹುದಾಗಿದೆ.

-ಮೊದಲು www.ims.mahaonline.gov.in ವೆಬ್‌ಸೈಟ್‌ಗೆ ಲಾಗ್‌ಇನ್ ಆಗಬೇಕು.

-ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರ ಆ ಸಂಸ್ಥೆ ಹೆಸರನ್ನು ನೋಂದಾಯಿಸಬೇಕು.

-ನಿಮ್ಮ ಮೊಬೈಲ್ ನಂಬರ್ ನೋಂದಣಿ ಮಾಡಬೇಕು.

-ಬಳಿಕ ನಿಮ್ಮ ಮೊಬೈಲ್‌ಗೆ ಬರುವ ಓಟಿಪಿಯನ್ನು ನೋಂದಾಣಿಯಿಸಬೇಕು.

-ನೋಂದಣಿಗಾಗಿ ನಿಮ್ಮ ಇ-ಮೇಲ್ ನೀಡಬೇಕು.

-ಪಾಸ್‌ವರ್ಡ್ ಕ್ರಿಯೇಷನ್ ಸೇರಿದಂತೆ ಅರ್ಜಿ ಭರ್ತಿ ಮಾಡಬೇಕು.

-ಇಲಾಖೆಯಿಂದ ಬಂದಿರುವ ಇ-ಮೇಲ್ ತೆರೆಯಬೇಕು.

-ಇ-ಮೇಲ್ ಓಪನ್ ಮಾಡಿ ಅಲ್ಲಿ ನೀಡಿರುವ ನಿರ್ದೇಶನದಂತೆ ಕ್ಲಿಕ್ ಮಾಡಿದಾಗ ನಿಮ್ಮ ನೋಂದಣಿ ಪೂರ್ಣವಾಗುತ್ತದೆ.

-ಬಳಿಕ ಮತ್ತೆ www.ims.mahaonline.gov.inಗೆ ಲಾಗಿನ್ ಆಗಿ, ಐಡಿ ಹಾಗೂ ನೋಂದಣಿ ವೇಳೆ ನೀಡಿದ್ದ ಪಾಸ್‌ವರ್ಡ್ ಟೈಪ್ ಮಾಡಬೇಕು.

-ಬಳಿಕ 'ಕಾಂಟ್ರ್ಯಾಕ್ಟ್ ಲೇಬರ್ ಲೈಸೆನ್ಸ್'‌ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

-ಅದರಲ್ಲಿ 'ನ್ಯೂ ಲೈಸೆನ್ಸ್‌'ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿ ಭರ್ತಿ ಮಾಡಬೇಕು ಬಳಿಕ ಸಬ್‌ಮಿಟ್ ಮಾಡಬೇಕು.

- ಅಪ್ಲಿಕೇಷನ್ ಐಡಿ ನೀಡಲಾಗುತ್ತದೆ.

- ಅರ್ಜಿಯನ್ನು ತೆರೆದು ಅಪ್ಲಿಕೇಷನ್ ಐಡಿಯನ್ನು ಅದರಲ್ಲಿ ಅಪ್‌ಲೋಡ್ ಮಾಡಬೇಕು.

-ಅಪ್ಲಿಕೇಷನ್ ಐಡಿ ಹಾಗೂ 'ಪ್ರೆಸೆಂಟ್ ಸ್ಟೇಟಸ್' ಬಲ ಭಾಗದಲ್ಲಿರುತ್ತದೆ.

- ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಬಳಿಕ ದಾಖಲೆಯ ಬಲ ಬದಿಗೆ ಸೂಚನೆಗಳು ಲಭ್ಯವಾಗುತ್ತವೆ.

-'ಡಾಕ್ಯುಮೆಂಟ್' ಆಯ್ಕೆ ಕ್ಲಿಕ್ ಮಾಡಿ ಬಳಿಕ ಅಪ್‌ಲೋಡ್ ಬ್ರೌಸರ್ ಕಾಣಿಸುತ್ತದೆ.

- ಅದೇ ರೀತಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್‌ ಮಾಡಬೇಕು.

-ಕೆಳಗಡೆ ನೀಡಲಾಗಿರುವ ಅಪ್‌ಲೋಡ್ ಬಟನ್ ಪ್ರೆಸ್ ಮಾಡಬೇಕು.

- ಸ್ಟೇಟಸ್ ಚೆಕ್ ಮಾಡಬೇಕು, ಅದರಲ್ಲಿ 'ಅಂಡರ್ ಸ್ಕ್ರುಟಿನಿ' ಎಂದು ಬಂದಿದ್ದರೆ ಇನ್ನೂ ಪರಿಶೀಲನೆ ಹಂತದಲ್ಲಿದೆ ಎಂದು ಅರ್ಥ.

-ನಿತ್ಯ ಸ್ಟೇಟಸ್ ಚೆಕ್ ಮಾಡುತ್ತಿರಬೇಕು, 'ಅಪ್ರೂವ್ಡ್' ಅಥವಾ 'ರಿಜೆಕ್ಟೆಡ್' ಎಂದು ನಮೂದಿಸಲಾಗಿರುತ್ತದೆ.

-ಒಂದೊಮ್ಮೆ ನಿಮ್ಮ ಅರ್ಜಿ ತಿರಸ್ಕೃತವಾದರೆ (ರಿಜೆಕ್ಟೆಡ್ ) ಮತ್ತೆ -ಇ-ಮೇಲ್ ಓಪನ್ ಮಾಡಿ ಅಲ್ಲಿ ನೀಡಲಾದ ಹಂತಗಳಲ್ಲೇ ಅಪ್‌ಲೋಡ್ ಮಾಡಬೇಕು.

-'ಕಂಪ್ಲೀಟೆಡ್'(ಪೂರ್ಣಗೊಂಡಿದೆ) ಎಂದು ಇದ್ದರೆ ನೀವು ಪರವಾನಗಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದೆಲ್ಲವೂ 1970 ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ನಿರ್ಧರಿತವಾಗುತ್ತದೆ.

English summary
How to Get Online Labor License in India, Here Detailed procedure For Contract labor New License.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X