ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2022 PDF: ಕೇಂದ್ರ ಬಜೆಟ್ 2022 ಡೌನ್‌ಲೋಡ್ ಹೇಗೆ?

|
Google Oneindia Kannada News

ನವದೆಹಲಿ, ಫೆ.1: ಡಿಜಿಟಲ್ ಇಂಡಿಯಾಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಸತತ ಎರಡನೇ ಬಾರಿಗೆ ಪರಿಸರ ಸ್ನೇಹಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಜೊತೆಗೆ ಬಜೆಟ್ ದಾಖಲೆ ಪಡೆಯಲು ಮೊಬೈಲ್​ ಅಪ್ಲಿಕೇಶನ್​​​ ಅನ್ನು ಸಿದ್ಧಪಡಿಸಲಾಗಿದೆ. 'ಯೂನಿಯನ್​ ಬಜೆಟ್​' ಹೆಸರಿನಲ್ಲಿ ಮೊಬೈಲ್​ ಅಪ್ಲಿಕೇಶನ್​ ಲಭ್ಯವಿರಲಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್​ ಮತ್ತು ಐಟಿ ಸಚಿವಾಲಯ ಇದನ್ನು ಅಭಿವೃದ್ಧಿಪಡಿಸಿದೆ. ಸಂಸತ್​​ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಈ ಅಪ್ಲಿಕೇಶನ್‌ನಲ್ಲಿ ಪ್ರತಿಯು ಲಭ್ಯವಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಿದರು. ಇದಾದ ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು.

ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಸಲದ ಕೇಂದ್ರ ಬಜೆಟ್​ 2022ರ ಮೇಲೆ ಉದ್ಯೋಗಿಗಳು, ಉದ್ಯಮಿಗಳು, ಕೃಷಿಕರು ಹಾಗೂ ಸಾಮಾನ್ಯ ಜನರು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಆರೋಗ್ಯ ವಲಯ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ನೀಡುವ ಸಾಧ್ಯತೆಯಿದೆ.

How to download Union Budget 2022

ಬಜೆಟ್ ಪ್ರತಿ ಡೌನ್‌ಲೋಡ್:
ಮೊಬೈಲ್ ಅಪ್ಲಿಕೇಶನ್ ನಿಮಗೆ ಬಜೆಟ್ ಭಾಷಣ, ಬಜೆಟ್ ಎಂದು ಕರೆಯಲ್ಪಡುವ ವಾರ್ಷಿಕ ಹಣಕಾಸು ಹೇಳಿಕೆ, ಅನುದಾನಕ್ಕಾಗಿ ಬೇಡಿಕೆ, ಹಣಕಾಸು ಮಸೂದೆಯನ್ನು ಒಳಗೊಂಡಿರುವ 14 ಕೇಂದ್ರ ಬಜೆಟ್ ದಾಖಲೆಗಳಿಗೆ ಪ್ರವೇಶವನ್ನು ನೀಡುತ್ತದೆ.

ಮೊಬೈಲ್ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ ಮತ್ತು ಇದನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್, www.indianbudget.gov.in ನಲ್ಲಿ ಡೌನ್‌ಲೋಡ್ ಮಾಡಬಹುದು. ಬಜೆಟ್ ಡಾಕ್ಯುಮೆಂಟ್ ಕೂಡ ಅದೇ ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ.

ಕೇಂದ್ರ ಬಜೆಟ್‌: ಇತಿಹಾಸ, ಕೆಲವು ಕುತೂಹಲಕಾರಿ ವಿಚಾರ ಇಲ್ಲಿದೆಕೇಂದ್ರ ಬಜೆಟ್‌: ಇತಿಹಾಸ, ಕೆಲವು ಕುತೂಹಲಕಾರಿ ವಿಚಾರ ಇಲ್ಲಿದೆ

ಕೇಂದ್ರ ಬಜೆಟ್ 2022 ರಿಂದ ಸಾಕಷ್ಟು ನಿರೀಕ್ಷೆಗಳಿವೆ. ರೂ 15 ಲಕ್ಷದವರೆಗೆ ಲಭ್ಯವಿರುವ 80C ಶಿಕ್ಷಣವನ್ನು ಗಣನೀಯವಾಗಿ ಮೇಲ್ಮುಖವಾಗಿ ಪರಿಷ್ಕರಿಸಲು ಬೇಡಿಕೆಯಿದೆ. ಐಚ್ಛಿಕ ರಿಯಾಯಿತಿ ತೆರಿಗೆ ಪದ್ಧತಿಯನ್ನು ಹೆಚ್ಚು ಸ್ವೀಕಾರಾರ್ಹಗೊಳಿಸಲು ಮತ್ತು ಪೀಲ್ ಹಾಕಲು 15 ಲಕ್ಷ ಆದಾಯದ ಮಿತಿಯನ್ನು ಶೇಕಡಾ 30 ರಷ್ಟು ಹೆಚ್ಚಿಸಲು ಬೇಡಿಕೆಗಳನ್ನು ಮಾಡಲಾಗಿದೆ.

ಬಜೆಟ್ 2022 ಲೋಕಸಭಾ ಟಿವಿ(ಸಂಸದ್ ಟಿವಿ)ಯಲ್ಲಿ ನೇರ ಪ್ರಸಾರ ಆಗುತ್ತದೆ. ಇದಲ್ಲದೆ, ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಫೇಸ್​ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್​ಗಳಲ್ಲೂ ಬಜೆಟ್ ಮಂಡನೆಯ ವೀಕ್ಷಣೆ ಮಾಡಬಹುದು ನೇರ ಪ್ರಸಾರವನ್ನು ಕಾಣಬಹುದು. ವಾರ್ತಾ ಮತ್ತು ಪ್ರಸಾರ ಇಲಾಖೆ ಯೂಟ್ಯೂಬ್ ವಾಹಿನಿ, ಸಂಸದ್ ಟಿವಿ, ದೂರದರ್ಶನ ಮೂಲಕ ಬಜೆಟ್ ಭಾಷಣ ನೇರ ಪ್ರಸಾರ ವೀಕ್ಷಿಸಿ

English summary
When the Union Budget went paperless last year due to the ongoing COVIDS-19 pandemic, an app was launched. You can download the Union Budget from the mobile app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X