ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರ ಸ್ನೇಹಿತರ ನಂಟಿನಿಂದ ನಕ್ಸಲರ ನಿಧಿಯಲ್ಲಿ ಹೆಚ್ಚಳ

By ವಿಕ್ಕಿ ನಂಜಪ್ಪ
|
Google Oneindia Kannada News

ನಕ್ಸಲರ ಪ್ರಾಬಲ್ಯ ವಿಪರೀತವಾಗಿರುವ ಜಾರ್ಖಂಡ್‌ನ ಪ್ರದೇಶವೊಂದರಲ್ಲಿ ಭದ್ರತಾ ಪಡೆಗಳು 15 ಶಸ್ತ್ರಾಸ್ತ್ರಗಳು, ಸುಮಾರು 260 ಸುತ್ತು ಬುಲೆಟ್‌ಗಳು ಪತ್ತೆಯಾಗಿವೆ. ನಕ್ಸಲರಿಗೆ ಸೇರಿದ ಇಷ್ಟು ಭಾರಿ ಪ್ರಮಾಣದ ಮದ್ದುಗುಂಡುಗಳು ದೊರಕಿರುವುದು ಭದ್ರತಾ ಪಡೆಗಳ ಪಾಲಿಗೆ ಮಹತ್ವದ ಸಂಗತಿಯಾಗಿದೆ.

ಬಂಧಿತ ನಕ್ಸಲ್‌ ವ್ಯಕ್ತಿಯೊಬ್ಬನು ನೀಡಿದ ಮಾಹಿತಿ ಆಧಾರದಲ್ಲಿ ಸಿಆರ್‌ಪಿಎಫ್ ಮತ್ತು ಎನ್‌ಐಎ ಹಾಗೂ ಜಾರ್ಖಂಡ್ ರಾಜ್ಯ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ಬೊಕಾರೊ ಜಿಲ್ಲೆಯ ಲುಗು ಪಹಾರ್ ಎಂಬ ಅರಣ್ಯದಲ್ಲಿ ಈ ಅಪಾರ ಪ್ರಮಾಣದ ಶಸ್ತ್ರ ಸಂಗ್ರಹ ಪತ್ತೆಯಾಗಿದೆ.

ತೆಲಂಗಾಣ, ಛತ್ತೀಸಗಢ ಪೊಲೀಸರ ಜಂಟಿ ಕಾರ್ಯಾಚರಣೆ: 10 ನಕ್ಸಲರು ಬಲಿ ತೆಲಂಗಾಣ, ಛತ್ತೀಸಗಢ ಪೊಲೀಸರ ಜಂಟಿ ಕಾರ್ಯಾಚರಣೆ: 10 ನಕ್ಸಲರು ಬಲಿ

303ರ 10 ರೈಫಲ್‌ಗಳು, 13 ಇತರೆ ವಿಧಗಳ ಬಂದೂಕುಗಳು, 269 ಸಜೀವ ಗುಂಡುಗಳು, 12 ಕೆಜಿಯಷ್ಟು ಸುಧಾರಿತ ಸ್ಫೋಟಕ ಉಪಕರಣಗಳು ಮತ್ತು 3 ಲಕ್ಷ ರೂ ನಗದು ಹಣವು ಮಾವೊವಾದಿಗಳ ನೆಲೆಯಲ್ಲಿ ದೊರಕಿತ್ತು.

ಎಲ್ಲಿಂದ ಬರುತ್ತದೆ ಹಣ?

ಎಲ್ಲಿಂದ ಬರುತ್ತದೆ ಹಣ?

ಸಾಮಾನ್ಯವಾಗಿ ನಕ್ಸಲ್ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳ ಅರಣ್ಯ ಹಾಗೂ ಹಳ್ಳಿಗಳಲ್ಲಿ ನೆಲೆ ಕಂಡುಕೊಂಡಿರುತ್ತವೆ. ಜಾರ್ಖಂಡ್‌ನಲ್ಲಿ ದೊರೆತ ಶಸ್ತ್ರಾಸ್ತ್ರಗಳು ಹಾಗೂ ನಗದು ಹಣದ ಮೂಲವನ್ನು ಬೆನ್ನತ್ತಿರುವ ಭದ್ರತಾ ಪಡೆಗಳು ಅವರಿಗೆ ಎಲ್ಲಿಂದ ಹಣ ಬರುತ್ತದೆ ಮತ್ತು ಹೇಗೆ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

2009ರ ವೇಳೆಗೆ ನಕ್ಸಲರ ಚಟುವಟಿಕೆಗಳಿಗೆ 1,000 ಕೋಟಿ ಹಣ ಪೂರೈಕೆಯಾಗುತ್ತಿದ್ದರೆ, ಇಂದು ಅಂದಾಜು 2000 ದಿಂದ 2500 ಕೋಟಿ ರೂ.ವರೆಗೂ ಹಣ ಈ ಜಾಲದಲ್ಲಿ ಓಡಾಡುತ್ತಿದೆ.

ಮೋದಿ 4 ವರ್ಷಗಳ ಸಾಧನೆ : ನಕ್ಸಲಿಸಂ ಹತ್ತಿಕ್ಕಿದ್ದು ಹೇಗೆ? ಮೋದಿ 4 ವರ್ಷಗಳ ಸಾಧನೆ : ನಕ್ಸಲಿಸಂ ಹತ್ತಿಕ್ಕಿದ್ದು ಹೇಗೆ?

ಶಸ್ತ್ರಾಸ್ತ್ರಕ್ಕೇ 200 ಕೋಟಿ

ಶಸ್ತ್ರಾಸ್ತ್ರಕ್ಕೇ 200 ಕೋಟಿ

ಮೂಲಗಳ ಪ್ರಕಾರ ಶಸ್ತ್ರಾಸ್ತ್ರಗಳನ್ನು ಕೊಳ್ಳುವುದಕ್ಕಾಗಿಯೇ ಪ್ರತಿ ವರ್ಷ ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗುತ್ತಿರುವ ಹಣ 200 ಕೋಟಿ ರೂಪಾಯಿ. ಉಳಿದ ಹಣ ನಗರ ಪ್ರದೇಶಗಳಲ್ಲಿ ಉನ್ನತ ಮಟ್ಟದಲ್ಲಿ ನಡೆಯುವ ಪ್ರಚಾರ ಕಾರ್ಯಗಳಿಗೆ ಬಳಕೆಯಾಗುತ್ತದೆ. ಅಲ್ಲದೆ ಸಾಕಷ್ಟು ಹಣ ನೇಮಕಾತಿ ಮತ್ತು ತರಬೇತಿಯ ಸಲುವಾಗಿ ವ್ಯಯಿಸಲಾಗುತ್ತಿದೆ.

ನಕ್ಸಲರು ತಮ್ಮದೇಯಾದ ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಹೊಂದಿದ್ದಾರೆ. ಜತೆಗೆ ಆರ್ ಮತ್ತು ಡಿ ಘಟಕ, ಪ್ರಚಾರ ಘಟಕ ಹಾಗೂ ನೇಮಕಾತಿ ಘಟಕವನ್ನು ಹೊಂದಿದ್ದಾರೆ. ವಿದೇಶ ಹಾಗೂ ನಗರ ಪ್ರದೇಶಗಳಿಂದ ಭಾರಿ ಪ್ರಮಾಣದ ದೇಣಿಗೆ ಅವರಿಗೆ ಲಭ್ಯವಾಗುತ್ತಿದೆ.

ಪ್ರಚಾರಕ್ಕೇ ಮೀಸಲಾಗಿದ್ದಾರೆ ಜನರು

ಪ್ರಚಾರಕ್ಕೇ ಮೀಸಲಾಗಿದ್ದಾರೆ ಜನರು

ನಗರ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ಪ್ರಚಾರ ಘಟಕದ ಭಾಗಗಳನ್ನು ಸಿದ್ಧಪಡಿಸಲೆಂದೇ ಮೀಸಲಾದ ಜಾಲವೊಂದು ಅವರ ನಡುವೆ ಇದೆ.

ಈ ಪ್ರಚಾರ ಘಟಕದ ಭಾಗಗಳಲ್ಲಿ ವಕೀಲರು, ಮಾಜಿ ನ್ಯಾಯಾಧೀಶರು, ಚಳವಳಿಗಾರರು ಮತ್ತು ವಿದ್ಯಾರ್ಥಿಗಳಿದ್ದಾರೆ. ನಕ್ಸಲರು ಪ್ರಚಾರ ಕಾರ್ಯಕ್ಕಾಗಿ ಮಾತ್ರ ಈ ಜನರನ್ನು ಅವಲಂಬಿಸಿಲ್ಲ. ಜತೆಗೆ, ತಮ್ಮ ದೇಣಿಗೆಯನ್ನು ಸಂಗ್ರಹಿಸಲು ಮತ್ತು ಸರಕುಗಳನ್ನು ಸಾಗಿಸಲು ಸಹ ಬಳಿಸಿಕೊಳ್ಳುತ್ತಿದ್ದಾರೆ.

2008ರಲ್ಲಿ ಛತ್ತೀಸಗಡದಲ್ಲಿ ಪೊಲೀಸರು ಟ್ರಾವೆಲ್ ಏಜೆನ್ಸಿಯೊಂದು ನಕ್ಸಲರಿಗೆ ಶಸ್ತ್ರಾಸ್ತ್ರ ಮತ್ತು ಹಣಕಾಸನ್ನು ಪೂರೈಸಲು ನೆರವಾಗುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ್ದನ್ನು ಸ್ಮರಿಸಿಕೊಳ್ಳಬಹುದು.

ಶಸ್ತ್ರಾಸ್ತ್ರ ಸಂಪಾದನೆ ಹೇಗೆ?

ಶಸ್ತ್ರಾಸ್ತ್ರ ಸಂಪಾದನೆ ಹೇಗೆ?

ಸ್ಥಳೀಯರಿಂದ ಬೇಡುವುದರಿಂದ ಹಿಡಿದು ಪೊಲೀಸ್ ಠಾಣೆಗಳಿಂದ ಶಸ್ತ್ರಾಸ್ತ್ರಗಳನ್ನು ಕದಿಯುವವರೆಗೆ ನಕ್ಸಲೀಯರು ಅದಕ್ಕೆಂದೇ ಜಾಲವನ್ನು ಹೊಂದಿದ್ದು, ಶಸ್ತ್ರಾಸ್ತ್ರಗಳನ್ನು ಸಂಪಾದಿಸುವ ಅವರ ಉದ್ದೇಶಗಳನ್ನು ಸುಗಮವಾಗಿಸಿವೆ. ಆರಂಭದಲ್ಲಿ ಅವರು ಸ್ಥಳೀಯರಿಂದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಾರೆ. ಒಂದು ಕಾಲದಲ್ಲಿ ಅವರು ಬಿಲ್ಲು ಬಾಣಗಳನ್ನು ಬಳಸುತ್ತಿದ್ದದ್ದೂ ಇದೆ.

ಮುಂದಿನ ಹಂತ ಪೊಲೀಸ್ ಠಾಣೆಗಳಿಂದ ಶಸ್ತ್ರಾಸ್ತ್ರಗಳನ್ನು ಕದಿಯುವುದು. ದೀರ್ಘಕಾಲದವರೆಗೆ ಪೊಲೀಸ್ ಠಾಣೆಗಳ ಮೇಲೆ ನಕ್ಸಲರು ದಾಳಿ ನಡೆಸುವ ಏಕೈಕ ಉದ್ದೇಶ ಶಸ್ತ್ರಾಸ್ತ್ರಗಳನ್ನು ಕದಿಯುವುದೇ ಆಗಿತ್ತು.

ನಕ್ಸಲರು ಭದ್ರತಾ ಸಿಬ್ಬಂದಿಗೆ ಲಂಚ ನೀಡಿ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡ ಕೆಲವು ಉದಾಹರಣೆಗಳೂ ಇವೆ.

ನೇಪಾಳದಲ್ಲಿ ಜಂಟಿ ಅಭ್ಯಾಸ

ನೇಪಾಳದಲ್ಲಿ ಜಂಟಿ ಅಭ್ಯಾಸ

ಸುಮಾರು 15 ವರ್ಷಗಳ ಹಿಂದೆ ನಕ್ಸಲರು ಶಸ್ತ್ರ ತಯಾರಿಕೆಯಲ್ಲಿ ತರಬೇತಿ ಪಡೆದ ಪುರುಷರ ಗುಂಪನ್ನು ಹೊಂದಿದ್ದರು. ಅವರು ನೇಪಾಳದಲ್ಲಿನ ಮಾವೊವಾದಿಗಳಿಂದ ತರಬೇತಿ ಪಡೆದಿದ್ದರು. ನೇಪಾಳ ಮತ್ತು ಭಾರತದಲ್ಲಿ ನಕ್ಸಲರು ಜಂಟಿ ಅಭ್ಯಾಸಗಳನ್ನು ನಡೆಸುತ್ತಿದ್ದರು.

ಬಳಿಕ ಅವರು ತಮ್ಮದೇ ಆದ ಘಟಕಗಳನ್ನು ಸ್ಥಾಪಿಸಿದರು. ನೆಲಬಾಂಬುಗಳನ್ನು, ಐಇಡಿಗಳನ್ನು ಮತ್ತು ಮೋರ್ಟಾರ್ ರೌಂಡ್ಸ್‌ಗಳನ್ನು ತಯಾರಿಸಿದರು.

ಎಲ್‌ಟಿಟಿಇ ನೆರವು

ಎಲ್‌ಟಿಟಿಇ ನೆರವು

ಅವರು ಮೊದಲ ಬಾರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಿದೇಶದಿಂದ ತರಿಸಿಕೊಂಡಿದ್ದೆಂದರೆ, ಶ್ರೀಲಂಕಾದಲ್ಲಿ ನೆಲೆಯೂರಿದ್ದ ಎಲ್‌ಟಿಟಿಇ ಮೂಲಕ. ಎಲ್‌ಟಿಟಿಇ ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಮಾತ್ರವಲ್ಲ. ಜತೆಗೆ ತರಬೇತಿಯನ್ನೂ ನೀಡಿತ್ತು.

ಎಲ್‌ಟಿಟಿಇ ನಾಶವಾದ ಬಳಿಕ ನಕ್ಸಲರು ಎನ್‌ಎಸ್‌ಸಿಎನ್ (ಕೆ) ನೆರವಿನ ಆಹ್ವಾನವನ್ನು ಒಪ್ಪಿಕೊಂಡರು. ನಾಗಾಲ್ಯಾಂಡ್ ಮೂಲದ ಸಂಘಟನೆಯು ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಮತ್ತು ತರಬೇತಿ ಹೊಂದಲು ನೆರವಾಯಿತು. ಅವರು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಾಂಗ್ಲಾದೇಶ ಹಾಗೂ ಮಯನ್ಮಾರ್‌ ಮೂಲಕ ಮಾರ್ಗಗಳನ್ನು ನಿರ್ಮಿಸಿಕೊಟ್ಟರು.

English summary
the security agencies recovered 15 weapons and over 260 bullet rounds, from a Left-Wing Extremism-hit area of Jharkhand. In the crackdown against naxalites, the security agencies have gone into detail as to how they are being funded and also how the weapons are being procured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X