• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಇನ್ನೆಷ್ಟು ಸ್ವಾತಂತ್ರ್ಯ ಬೇಕು?' ನಾಸಿರುದ್ದೀನ್ ಗೆ ಅನುಪಮ್ ಪ್ರಶ್ನೆ

|

ನವದೆಹಲಿ, ಡಿಸೆಂಬರ್ 23: ನರೇಂದ್ರ ಮೋದಿ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿದೆ, ಸ್ವಾತಂತ್ರ್ಯ ಇಲ್ಲದ್ದಂತಾಗಿದೆ ಎಂದು ಟೀಕಿಸಿದ ನಟ ನಾಸೀರುದ್ದೀನ್ ಶಾ ಅವರಿಗೆ ನಟ ಅನುಪಮ್ ಖೇರ್ ಪ್ರತ್ಯುತ್ತರ ನೀಡಿದ್ದಾರೆ.

ದೇಶದ ಸೇನಾಪಡೆಯನ್ನು ನಿಂದಿಸುವಷ್ಟು ಸ್ವಾತಂತ್ರ್ಯವನ್ನು ಕೆಲವರು ಪಡೆದುಕೊಂಡಿದ್ದಾರೆ. ನಿಮಗೆ ಇನ್ನೆಷ್ಟು ಸ್ವಾತಂತ್ರ್ಯ ಬೇಕು ಎಂದು ನಾಸೀರುದ್ದೀನ್ ರನ್ನು ಪ್ರಶ್ನಿಸಿದ್ದಾರೆ.

ಬಲಪಂಥೀಯ ಸಂಘಟನೆಗಳ ವಿರೋಧ: ನಾಸಿರುದ್ದೀನ್ ಶಾ ಕಾರ್ಯಕ್ರಮ ರದ್ದು

ಏರ್ ಚೀಫ್ ವಿರುದ್ಧ ದನಿಯೆತ್ತಬಹುದು, ಯೋಧರಿಗೆ ಕಲ್ಲು ಹೊಡೆಯಬಹುದು, ಇನ್ನೆಷ್ಟು ಸ್ವಾತಂತ್ರ್ಯ ಸಿಗಬೇಕಿದೆ?ಎಂದು ಅನುಪಮ್ ಪ್ರಶ್ನಿಸಿದ್ದಾರೆ. ರಫೆಲ್ ಡೀಲ್ ಬಗ್ಗೆ ಏರ್ ಫೋರ್ಸ್ ಚೀಫ್ ನೀಡಿದ ಹೇಳಿಕೆಯನ್ನು ಖಂಡಿಸಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು, ವಾಯುಸೇನೆ ಮುಖ್ಯಸ್ಥರನ್ನು ಸುಳ್ಳುಗಾರ ಎಂದಿದ್ದನ್ನು ಇಲ್ಲಿ ಸ್ಮರಿಸಿದ್ದಾರೆ.

'ಹಸುವಿನ ಸಾವಿಗೆ ಮರುಗುವ ಮಹತ್ವ ನೀಡುವವರು ಒಬ್ಬ ಪೊಲೀಸ್ ಅಧಿಕಾರಿ ಸಾವಿಗೆ ಬೆಲೆ ನೀಡುತ್ತಿಲ್ಲ' ಎಂದು ನಾಸೀರುದ್ದೀನ್ ಶಾ ಇತ್ತೀಚೆಗೆ ಹೇಳಿದ್ದರು. ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ರೊಚ್ಚಿಗೆದ್ದ ಜನರು ಪೊಲೀಸ್ ಅಧಿಕಾರಿಯನ್ನು ಕೊಂದಿದ್ದನ್ನು ಉಲ್ಲೇಖಿಸಿದ್ದರು.

ಕೇಂದ್ರ ಸರ್ಕಾರ ಕೊಟ್ಟ ಹುದ್ದೆಯನ್ನು ತ್ಯಜಿಸಿದ ಅನುಪಮ್ ಖೇರ್

2016ರಲ್ಲೂ ನಾಸೀರುದ್ದೀನ್ ಹಾಗೂ ಅನುಪಮ್ ನಡುವೆ ವಾಕ್ಸಮರ ನಡೆದಿತ್ತು. ಕಾಶ್ಮೀರಿ ಪಂಡಿತರ ವಿಷಯವಾಗಿ ಮಾತಿನ ಚಕಮಕಿ ನಡೆಸಿದ್ದರು. ನಂತರ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ಚೇರ್ಮನ್ ನೇಮಕ ವಿಷಯದಲ್ಲೂ ಇಬ್ಬರಿಗೂ ಮನಸ್ತಾಪವಾಗಿತ್ತು.

ಬುಲಂದ್ ಶಹರ್ ಘಟನೆ ಬಗ್ಗೆ ನಾಸೀರುದ್ದೀನ್ ಶಾ ನೀಡಿದ ಹೇಳಿಕೆಯನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ನಾಸೀರುದ್ದೀನ್ ಅವರು ಸರ್ಫರೋಶ್ ಚಿತ್ರದ ಪಾಕಿಸ್ತಾನಿ ಏಜೆಂಟ್ ಪಾತ್ರದಿಂದ ಇನ್ನು ಹೊರ ಬಂದಿಲ್ಲ ಎಂದು ಬಿಜೆಪಿ ಮುಖಂಡ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.

ಬುಲಂದ್ ಶಹರ್ ಪ್ರಕರಣ: ಉನ್ನತ ಪೊಲೀಸ್ ಅಧಿಕಾರಿ ವರ್ಗಾವಣೆ

ನವನಿರ್ಮಾಣ್ ಸೇನಾದ ಮುಖ್ಯಸ್ಥ ಅಮಿತ್ ಜಾನಿ ಅವರು ನಾಸೀರುದ್ದೀನ್ ಅವರಿಗೆ ಕರಾಚಿಗೆ ತೆರಳುವಂತೆ ಒನ್ ವೇ ಟಿಕೆಟ್ ಬುಕ್ ಮಾಡಿದ್ದಾರೆ. ನಾಸೀರುದ್ದೀನ್ ಶಾ ಅವರು ದೇಶದಲ್ಲಿ ಅಸಹಿಷ್ಣುತೆ ಬಗ್ಗೆ ಚಿಂತಿಸಬೇಕಿಲ್ಲ, ಅವರ ಕುಟುಂಬ ಸೇರಿ ಎಲ್ಲರೂ ಸುರಕ್ಷಿತರು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

English summary
The controversy over actor Naseeruddin Shah's criticism of the law-and-order situation under the Narendra Modi government continued to rage on Saturday, with Anupam Kher -- fellow-actor and vocal BJP supporter -- wondering how much more freedom he expected to have in a country where one could even "abuse" the army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more