ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರ ಒಂದು ಡೋಸ್ ಲಸಿಕೆಗೆ ಖರ್ಚು ಮಾಡುತ್ತಿರುವುದೆಷ್ಟು!?

|
Google Oneindia Kannada News

ನವದೆಹಲಿ, ಏಪ್ರಿಲ್ 23: ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮೇ 1ರಿಂದ ಹೊಸ ಮಾರ್ಗಸೂಚಿ ಅಡಿ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರವು 67193 ಕೋಟಿ ಹಣ ಖರ್ಚು ಮಾಡಿದೆ ಎಂದು ಭಾರತೀಯ ದರ ಸಂಶೋಧನಾ ಸಂಸ್ಥೆ ಅಂದಾಜಿಸಿದೆ.

ದೇಶದ ಜಿಡಿಪಿಯಲ್ಲಿ ಇದು ಕೇವಲ ಶೇ.0.36ರಷ್ಟು ಆಗಿದ್ದು, ಬೇರೆಯದ್ದಕ್ಕೆ ಹೋಲಿಸಿದರೆ ಇದು ತೀರಾ ಸಣ್ಣ ಪ್ರಮಾಣವಾಗುತ್ತದೆ ಎಂದು ಹೇಳಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಮೊದಲ ಶ್ರೇಣಿ ಕಾರ್ಮಿಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾವೈರಸ್ ಲಸಿಕೆ ನೀಡಲು ಕೇಂದ್ರ ಸರ್ಕಾರವು 20,870 ಕೋಟಿ ಅಥವಾ ದೇಶದ ಒಟ್ಟು ಜಿಡಿಪಿಯ ಶೇ.0.12ರಷ್ಟು ಹಣವನ್ನು ಖರ್ಚು ಮಾಡುತ್ತಿದೆ.

18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಗೆ ಹೆಸರು ನೋಂದಣಿ ಮಾಡುವುದು ಹೇಗೆ?18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಗೆ ಹೆಸರು ನೋಂದಣಿ ಮಾಡುವುದು ಹೇಗೆ?

18 ವರ್ಷದಿಂದ 45 ವರ್ಷದ ವಯಸ್ಕರಿಗೆ ಕೊರೊನಾವೈರಸ್ ಲಸಿಕೆ ನೀಡುವುದಕ್ಕಾಗಿ ರಾಜ್ಯ ಸರ್ಕಾರಗಳೇ ಹೆಚ್ಚು ಪಾಲು ಹಣವನ್ನು ನೀಡುತ್ತಿವೆ. ರಾಷ್ಟ್ರೀಯ ಜಿಡಿಪಿಯ ಶೇ.0.24ರಷ್ಟು ಅಥವಾ 46,323 ಕೋಟಿ ಹಣವನ್ನು ರಾಜ್ಯ ಸರ್ಕಾರಗಳೇ ಭರಿಸಲಿವೆ.

ಲಸಿಕೆಗಾಗಿ ಜಿಡಿಪಿಯ ಶೇಕಡಾವಾರು ಪ್ರಮಾಣ ಮೀಸಲು

ಲಸಿಕೆಗಾಗಿ ಜಿಡಿಪಿಯ ಶೇಕಡಾವಾರು ಪ್ರಮಾಣ ಮೀಸಲು

ಕೊರೊನಾವೈರಸ್ ಲಸಿಕೆಗಾಗಿ ಎಲ್ಲ ರಾಜ್ಯಗಳು ಭರಿಸುವ ವೆಚ್ಚವು ಸಮನಾಗಿರುವುದಿಲ್ಲ. ಬಿಹಾರವು ರಾಜ್ಯ ಜಿಡಿಪಿಯ ಶೇ.0.60ರಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಉತ್ತರ ಪ್ರದೇಶ 2ನೇ ಸ್ಥಾನದಲ್ಲಿದ್ದು, ಶೇ.0.47, ಜಾರ್ಖಂಡ್ ಶೇ.0.37, ಮಣಿಪುರ ಶೇ.0.36, ಅಸ್ಸಾಂ ಶೇ.0.35, ಮಧ್ಯಪ್ರದೇಶ ಶೇ.0.30 ಹಾಗೂ ಒಡಿಶಾ ಶೇ.0.30ರಷ್ಟು ಪ್ರಮಾಣದ ಹಣವನ್ನು ಲಸಿಕೆಗಾಗಿ ಭರಿಸುತ್ತಿವೆ.

ರಾಜ್ಯಗಳಿಗೆ ಕೊರೊನಾವೈರಸ್ ಲಸಿಕೆ ಮಾರಾಟ

ರಾಜ್ಯಗಳಿಗೆ ಕೊರೊನಾವೈರಸ್ ಲಸಿಕೆ ಮಾರಾಟ

ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗೆ ಒಂದೊಂದು ದರವನ್ನು ನಿಗದಿಗೊಳಿಸಿದೆ. ಎಲ್ಲ ತೆರಿಗೆ ಸೇರಿದಂತೆ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 236 ರೂಪಾಯಿ, ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 243.67 ರೂಪಾಯಿ ದರ ನಿಗದಿಗೊಳಿಸಲಾಗಿದೆ. ಈ ಲಸಿಕೆಯನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 400 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 600 ರೂಪಾಯಿಗೆ ಮಾರಾಟ ಮಾಡುವುದಕ್ಕೆ ಬೆಲೆ ನಿಗದಿಗೊಳಿಸಲಾಗಿದೆ. ಈ ವೇಳೆ ವ್ಯರ್ಥವಾದ ಲಸಿಕೆಯನ್ನೂ ಕೂಡಾ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಕೊವಿಶೀಲ್ಡ್ ಲಸಿಕೆ ಪೂರೈಕೆಯು ಬೇಡಿಕೆಗೆ ತಕ್ಕಂತೆ ಇಲ್ಲ

ಕೊವಿಶೀಲ್ಡ್ ಲಸಿಕೆ ಪೂರೈಕೆಯು ಬೇಡಿಕೆಗೆ ತಕ್ಕಂತೆ ಇಲ್ಲ

ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೊವಿಶೀಲ್ಡ್ ಲಸಿಕೆಯನ್ನು ಮತ್ತು ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಈ ಹಿನ್ನೆಲೆ ದೇಶದ ತರೆದ ಮಾರುಕಟ್ಟೆಯಲ್ಲಿ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಇದರ ಜೊತೆಗೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಲಸಿಕೆಗಳಿಗೆ ಕೇಂದ್ರ ಸರ್ಕಾರವು ತನ್ನದೇ ಬೆಲೆಯನ್ನು ನಿಗದಿಗೊಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಮೀಸಲು

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಮೀಸಲು

ಕೊರೊನಾವೈರಸ್ ಸೋಂಕಿನಿಂದ ಹೋರಾಡುವ ಪ್ರತಿಕಾಯಗಳನ್ನು ಸೃಷ್ಟಿಸುವ ಲಸಿಕೆಯ ಸಾಮರ್ಥ್ಯವು 12 ರಿಂದ 18 ತಿಂಗಳವರೆಗೂ ಇರುತ್ತವೆ ಎಂಬುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಪ್ರತಿವರ್ಷ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಅಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿವರ್ಷದ ತಮ್ಮ ಆಯವ್ಯಯದಲ್ಲಿ ಕೊವಿಡ್-19 ಲಸಿಕೆಗಾಗಿ ಹಣವನ್ನು ಮೀಸಲಿರಿಸಬೇಕಾಗುತ್ತದೆ.

97 ದಿನಗಳಲ್ಲಿ 13.54 ಕೋಟಿ ಜನರಿಗೆ ಲಸಿಕೆ

97 ದಿನಗಳಲ್ಲಿ 13.54 ಕೋಟಿ ಜನರಿಗೆ ಲಸಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ.ಗುರುವಾರ ರಾತ್ರಿ 8 ಗಂಟೆವರೆಗೆ 30,16,085 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಪೈಕಿ 18,33,828 ಮಂದಿಗೆ ಮೊದಲ ಡೋಸ್ ಹಾಗೂ 11,82,257 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ದೇಶದಲ್ಲಿ ಈವರೆಗೆ 13,54,78,420 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
India: How Much Money Central Govt Spending On Covid Vaccine For All Adults?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X