ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರದ 'ಕೊರೊನಾ ನಿರ್ವಹಣೆ' ತೃಪ್ತಿ ತಂದಿದೆಯೇ? ಸಮೀಕ್ಷಾ ಫಲಿತಾಂಶ

|
Google Oneindia Kannada News

ಜಗತ್ತಿಗೆ ಮಾರಿಯಾಗಿ ಪರಿಣಮಿಸಿರುವ ಕೊರೊನಾ, ಭಾರತವನ್ನೂ ಬಿಟ್ಟಿಲ್ಲ. ಇದುವರೆಗೆ, ದೇಶದಲ್ಲಿ 718 ಜನ ಈ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನ ಈ ಸೋಂಕಿಗೆ ಬಲಿಯಾಗಿದ್ದಾರೆ.

ನರೇಂದ್ರ ಮೋದಿ ಸರಕಾರ ಕೊರೊನಾ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸಿದೆಯೇ ಎನ್ನುವ ಸಮೀಕ್ಷೆಯನ್ನು ನಡೆಸಲಾಗಿತ್ತು. ಕಳೆದ ಹತ್ತು ದಿನಗಳ ಅವಧಿಯಲ್ಲಿ ನಡೆಸಲಾದ ಎರಡನೇ ಸಮೀಕ್ಷೆ ಇದಾಗಿದೆ.

NRC ವೇಳೆ ಘರ್ಜಿಸಿದ್ದ ಅಮಿತ್ ಶಾ, ಕೊರೊನಾ ವೇಳೆ ತೆರೆಮರೆಗೆ? NRC ವೇಳೆ ಘರ್ಜಿಸಿದ್ದ ಅಮಿತ್ ಶಾ, ಕೊರೊನಾ ವೇಳೆ ತೆರೆಮರೆಗೆ?

ಹಿಂದಿನ ಸಮೀಕ್ಷೆಗೆ ಹೋಲಿಸಿದರೆ, ಗುರುವಾರ (ಏ 23) ಬಿಡುಗಡೆಯಾದ ಸಮೀಕ್ಷಾ ವರದಿಯಲ್ಲಿ, ಮೋದಿ ಸರಕಾರದ ನಿರ್ವಹಣೆ ತೃಪ್ತಿ ತಂದಿದೆ ಎಂದು ಅಭಿಪ್ರಾಯ ಪಟ್ಟವರ ಸಂಖ್ಯೆ ಹೆಚ್ಚಿದೆ.

ಮೊದಲು ಮೋದಿ ಸರಕಾರ, ಮಾರ್ಚ್ 25ರಂದು ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಘೋಷಿಸಿತ್ತು. ಇದಾದ ನಂತರ, ಎರಡನೇ ಹಂತದಲ್ಲಿ ಮೇ ಮೂರರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಸಮೀಕ್ಷಾ ಫಲಿತಾಂಶ ಇಂತಿದೆ:

ಪ್ಲಾಸ್ಮಾ ಥೆರಪಿ ಆಶಾದಾಯಕ ಫಲಿತಾಂಶ ನೀಡಿದೆ: ದೆಹಲಿ ಸಿಎಂ ಕೇಜ್ರಿವಾಲ್ಪ್ಲಾಸ್ಮಾ ಥೆರಪಿ ಆಶಾದಾಯಕ ಫಲಿತಾಂಶ ನೀಡಿದೆ: ದೆಹಲಿ ಸಿಎಂ ಕೇಜ್ರಿವಾಲ್

ಮೋದಿ ಸರಕಾರದ ನಿರ್ವಹಣೆ

ಮೋದಿ ಸರಕಾರದ ನಿರ್ವಹಣೆ

ನೇತಾ ಆಪ್ , ಏಪ್ರಿಲ್ ಎರಡನೇ ವಾರದಲ್ಲಿ ಸಮೀಕ್ಷೆ ನಡೆಸಿ, ಏಪ್ರಿಲ್ ಹದಿನಾಲ್ಕಕ್ಕೆ ವರದಿಯನ್ನು ಪ್ರಕಟಿಸಿತ್ತು. ಸುಮಾರು ಐವತ್ತು ಸಾವಿರ ಜನ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶೇ. 71ರಷ್ಟು ಜನ, ಮೋದಿ ಸರಕಾರದ ನಿರ್ವಹಣೆ ತೃಪ್ತಿ ತಂದಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಹೆಚ್ಚಿನ ಸಾವುನೋವು ತಪ್ಪಿತು

ಹೆಚ್ಚಿನ ಸಾವುನೋವು ತಪ್ಪಿತು

ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು, ಪರಿಸ್ಥಿತಿ ಹತೋಟಿ ತಪ್ಪುವ ಮುನ್ನವೇ ಲಾಕ್ ಡೌನ್ ಘೋಷಿಸಿದ್ದರಿಂದ, ಹೆಚ್ಚಿನ ಸಾವುನೋವು ತಪ್ಪಿತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. 23ರಾಜ್ಯಗಳಲ್ಲಿ ಏಪ್ರಿಲ್ 11-12ರ ಅವಧಿಯಲ್ಲಿ ನಡೆಸಲಾದ ಸರ್ವೇ ಇದಾಗಿತ್ತು.

ಸಿವೋಟರ್ ಜಂಟಿಯಾಗಿ ಸಮೀಕ್ಷೆ

ಸಿವೋಟರ್ ಜಂಟಿಯಾಗಿ ಸಮೀಕ್ಷೆ

ಐಎಎನ್ಎಸ್ ಮತ್ತು ಸಿವೋಟರ್ ಜಂಟಿಯಾಗಿ ಸಮೀಕ್ಷೆಯೊಂದನ್ನು ನಡೆಸಿದೆ. ಮಾರ್ಚ್ 16ರಿಂದ ಏಪ್ರಿಲ್ 21ರ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಇದಾಗಿದೆ. ಲಾಕ್ ಡೌನ್ ಘೋಷಣೆ ಮಾಡಿದ ಆರಂಭದಲ್ಲಿ ಎಷ್ಟು ಜನರು ಮೋದಿ ಸರಕಾರದ ನಿರ್ವಹಣೆಯ ಬಗ್ಗೆ ತೃಪ್ತಿ ಹೊಂದಿದ್ದರೋ, ಅದು ಏಪ್ರಿಲ್ 21ರ ವೇಳೆ ಶೇ. 15ರಷ್ಟು ಜಾಸ್ತಿಯಾಗಿದೆ.

ಶೇ. 93.5 ಜನ ಮೋದಿ ಸರಕಾರದ ಕೊರೊನಾ ನಿರ್ವಹಣೆಯ ಬಗ್ಗೆ ಖುಷಿ

ಶೇ. 93.5 ಜನ ಮೋದಿ ಸರಕಾರದ ಕೊರೊನಾ ನಿರ್ವಹಣೆಯ ಬಗ್ಗೆ ಖುಷಿ

ತಾಜಾ ಸಮೀಕ್ಷೆಯ ಪ್ರಕಾರ ಶೇ. 93.5 ಜನ ಮೋದಿ ಸರಕಾರದ ಕೊರೊನಾ ನಿರ್ವಹಣೆಯ ಖುಷಿ ಪಟ್ಟಿದ್ದಾರೆ. ಸರಕಾರದ ನಿರ್ವಹಣೆಯ ಬಗ್ಗೆ ಸಂಪೂರ್ಣ ತೃಪ್ತಿ ಇದೆ ಎಂದು ಸಮೀಕ್ಷಾ ವರದಿಯಲ್ಲಿ ಬಂದ ಫಲಿತಾಂಶ.

English summary
Over 93% people in India say Modi govt handling COVID-19 crisis well: Survey,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X