ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟು ಕಾಲದವರೆಗೆ ಕೊರೊನಾ ಲಸಿಕೆ ಸೋಂಕಿನಿಂದ ರಕ್ಷಣೆ ನೀಡಬಲ್ಲದು?

|
Google Oneindia Kannada News

ನವದೆಹಲಿ, ಜೂನ್ 8: ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಜನವರಿ 16ರಿಂದ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಹಂತ ಹಂತವಾಗಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಕೊರೊನಾ ಲಸಿಕೆ ನೀತಿಯಲ್ಲಿ ಸೋಮವಾರ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಪರಿಷ್ಕೃತ ಲಸಿಕೆ ಮಾರ್ಗಸೂಚಿ 3.0ರಲ್ಲಿ ಕೇಂದ್ರ ಸರ್ಕಾರವು ಲಸಿಕೆ ಡೋಸ್‌ಗಳನ್ನು ಖರೀದಿಸಿ ಉಚಿತವಾಗಿ ರಾಜ್ಯಗಳಿಗೆ ನೀಡಲಿರುವುದಾಗಿ ತಿಳಿಸಿದೆ. ಭಾರತದಲ್ಲಿ ಸದ್ಯಕ್ಕೆ ಮೂರು ಲಸಿಕೆಗಳನ್ನು ನೀಡಲಾಗುತ್ತಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಫುಟ್ನಿಕ್ ವಿ ಲಸಿಕೆಗಳನ್ನು ನೀಡಲಾಗುತ್ತಿದ್ದು, ಎಲ್ಲಾ ಲಸಿಕೆಗಳ ಎರಡು ಡೋಸ್‌ಗಳನ್ನು ಪಡೆಯಬೇಕೆಂದು ಸೂಚಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವೆ 12-16 ವಾರಗಳ ಅಂತರ ಹಾಗೂ ಕೋವ್ಯಾಕ್ಸಿನ್ ಲಸಿಕೆಗೆ 4-6 ವಾರಗಳ ಅಂತರ ನೀಡಲಾಗಿದೆ. ಸ್ಫುಟ್ನಿಕ್ ವಿ ಲಸಿಕೆಯಲ್ಲಿ ಈ ಅಂತರ 21-90 ದಿನಗಳು ಇರಬಹುದು ಎಂದು ತಿಳಿಸಿದೆ.

ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...

ಎರಡನೇ ಡೋಸ್ ಪಡೆದ ನಂತರವೇ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಲಸಿಕೆ ಎಷ್ಟು ಕಾಲ ಪರಿಣಾಮಕಾರಿಯಾಗಿರುವುದು ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ. ಮುಂದೆ ಓದಿ...

 ರೋಗನಿರೋಧಕ ಶಕ್ತಿ ಹೆಚ್ಚಳವಾಗುವ ಸಮಯ

ರೋಗನಿರೋಧಕ ಶಕ್ತಿ ಹೆಚ್ಚಳವಾಗುವ ಸಮಯ

ವಿಶ್ವ ಆರೋಗ್ಯ ಸಂಸ್ಥೆಯ ಡಾ. ಕ್ಯಾತೆರೀನ್ ಒಬ್ರಿಯಾನ್ ಅವರ ಪ್ರಕಾರ, ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ಎರಡು ವಾರಗಳ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು ಆರಂಭವಾಗುತ್ತದೆ. ಎರಡನೇ ಡೋಸ್ ಪಡೆದ ನಂತರ ಇದರ ಪ್ರಮಾಣ ಮತ್ತಷ್ಟು ಏರಿಕೆಯಾಗುತ್ತದೆ. ಅದರ ನಂತರ ದೇಹದಲ್ಲಿ ಪ್ರತಿಕಾಯ ವ್ಯವಸ್ಥೆಯು ಬಲಗೊಳ್ಳುತ್ತದೆ. ಈ ಪ್ರತಿಕಾಯವು ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿರುತ್ತದೆ.

 ಲಸಿಕೆ ಪ್ರಭಾವ ಎಷ್ಟು ದಿನಗಳವರೆಗೆ ಉಳಿಯುತ್ತದೆ?

ಲಸಿಕೆ ಪ್ರಭಾವ ಎಷ್ಟು ದಿನಗಳವರೆಗೆ ಉಳಿಯುತ್ತದೆ?

ಲಸಿಕೆ ಪಡೆದ ನಂತರ ರೋಗನಿರೋಧಕ ಅಥವಾ ಪ್ರತಿಕಾಯವು ಎಷ್ಟು ಸಮಯದವರೆಗೆ ದೇಹದಲ್ಲಿ ಇರುತ್ತದೆ ಎಂಬ ಕುರಿತು ಈವರೆಗೆ ಸ್ಪಷ್ಟತೆ ಲಭಿಸಿಲ್ಲ. ಈ ಬಗ್ಗೆ ತಿಳಿಯಲು ಇನ್ನಷ್ಟು ಸಮಯ ಬೇಕಾಗಬಹುದು ಎಂದಿದ್ದಾರೆ ಕ್ಯಾತೆರೀನ್. ಲಸಿಕೆ ಪಡೆದ ಜನರಲ್ಲಿ ರೋಗನಿರೋಧಕ ಶಕ್ತಿಯು ಎಷ್ಟು ಅವಧಿ ಉಳಿಯುತ್ತದೆ? ಅವರಲ್ಲಿ ಬಹುಕಾಲ ರೋಗನಿರೋಧಕ ಶಕ್ತಿ ಇರುತ್ತದೆಯೇ? ಹಾಗಿದ್ದರೆ ಎಷ್ಟು ಅವಧಿ ಲಸಿಕೆಯಿಂದ ಕೊರೊನಾ ವಿರುದ್ಧ ನಮ್ಮನ್ನು ನಾವು ರಕ್ಷಣೆ ಪಡೆದುಕೊಳ್ಳಬಹುದು? ಇತ್ಯಾದಿ ಪ್ರಶ್ನೆಗಳಿದ್ದು, ಈ ಕುರಿತು ಅಧ್ಯಯನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ

 ಯಾವ ಲಸಿಕೆಗಳು ಎಷ್ಟು ರಕ್ಷಣೆ ನೀಡುತ್ತವೆ?

ಯಾವ ಲಸಿಕೆಗಳು ಎಷ್ಟು ರಕ್ಷಣೆ ನೀಡುತ್ತವೆ?

ಲಸಿಕೆಗಳು ಎಷ್ಟು ಕಾಲ ದೇಹಕ್ಕೆ ರಕ್ಷಣೆ ನೀಡುತ್ತವೆ ಎಂಬುದನ್ನು ಕಂಡುಕೊಳ್ಳಲು ಸಮಯಾವಕಾಶ ಅಗತ್ಯವಿದೆ ಎಂದಿರುವ ಅವರು ಕೆಲವು ಲಸಿಕೆಗಳ ಕುರಿತು ಮಾಹಿತಿ ನೀಡಿದ್ದಾರೆ. ಫೈಜರ್ ಲಸಿಕೆಯ ಪ್ರಭಾವವು ಆರು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿ ಇರುತ್ತದೆ. ಮಾಡೆರ್ನಾ ಲಸಿಕೆಯ ಎರಡನೇ ಡೋಸ್ ಪಡೆದ ನಂತರ ಆರು ತಿಂಗಳು ರಕ್ಷಣೆ ಪಡೆಯಬಹುದು. ಕೋವಿಶೀಲ್ಡ್‌ ಲಸಿಕೆ ಪಡೆದ ನಂತರ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಅಧ್ಯಯನಗಳು ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯ ಪ್ರಭಾವವು 9-12 ತಿಂಗಳ ಅವಧಿ ಇರುತ್ತದೆ ಎಂದು ಏಮ್ಸ್‌ ಭೋಪಾಲ್ ಅಧ್ಯಕ್ಷ ವೈ.ಕೆ. ಗುಪ್ತಾ ಹೇಳಿದ್ದಾರೆ.

 ಬೂಸ್ಟರ್ ಡೋಸ್ ಅಗತ್ಯವಿದೆಯೇ?

ಬೂಸ್ಟರ್ ಡೋಸ್ ಅಗತ್ಯವಿದೆಯೇ?

ಕೊರೊನಾ ಸೋಂಕಿಗೆ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದ್ದಾಯಿತು. ಆದರೆ ಈ ಲಸಿಕೆಗಳು ಪರಿಚಿತಗೊಂಡ ನಂತರ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಗಳಿಗೆ ಸದ್ಯ ಇರುವ ಈ ಲಸಿಕೆಗಳು ಪರಿಣಾಮಕಾರಿಯೇ? ಈ ಪ್ರಶ್ನೆ ಈಗ ಮುಂದಿದೆ. ಈ ರೂಪಾಂತರಗಳಿಗೆ ಲಸಿಕೆಗಳು ಪರಿಣಾಮಕಾರಿಯಲ್ಲ ಎಂದಾದರೆ ಮೂರನೇ ಬೂಸ್ಟರ್ ಡೋಸ್ ಕೊಡುವ ಅಗತ್ಯ ಬರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ, ಈಗಾಗಲೇ ಬೂಸ್ಟರ್ ಡೋಸ್ ಪ್ರಯೋಗ ಆರಂಭಿಸಿರುವುದಾಗಿ ತಿಳಿಸಿದೆ. ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಒಂದು ವರ್ಷದವರೆಗೂ ಇದರ ಪ್ರಭಾವ ಇರುತ್ತದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಈ ಬೂಸ್ಟರ್ ಡೋಸ್ ಅಗತ್ಯವೇ ಇರುವುದಿಲ್ಲ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

English summary
How long the vaccines provide protection against coronavirus in humans? Here is glimpse...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X