ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಅಂಟಿದ ಮಕ್ಕಳ ಸಾವಿಗೆ 'ಕವಾಸಕಿ' ಕಾರಣ!

|
Google Oneindia Kannada News

ನವದೆಹಲಿ, ಜುಲೈ.01: ಕೊರೊನಾವೈರಸ್ ಸೋಂಕಿತರ ಹರಡುವಿಕೆ ಪ್ರಮಾಣವು ಶರವೇಗದಲ್ಲಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿರುವ ಕೊವಿಡ್-19 ಸೋಂಕಿತರಲ್ಲಿ ಕಂಡು ಬಂದಿರುವ ಹೊಸ ರೋಗದ ಲಕ್ಷಣಗಳು ಇಡೀ ದೇಶದ ಜನರಲ್ಲಿ ದಿಗಿಲು ಬಡಿಸುವಂತೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರ ಪೈಕಿಯಲ್ಲೇ ಕಂಡು ಬಂದಿರುವ ಅಪಾಯಕಾರಿ ಕವಾಸಕಿ ಸೋಂಕು ಪುಟ್ಟ ಮಕ್ಕಳ ಪ್ರಾಣವನ್ನು ಹಿಂಡುತ್ತಿದೆ. ಐದು ವರ್ಷಕ್ಕಿಂತ ಪುಟ್ಟ ವಯಸ್ಸಿನ ಮಕ್ಕಳಲ್ಲಿ ಈ ಸೋಂಕಿತ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಹೊಸ ಆತಂಕವನ್ನು ಹುಟ್ಟು ಹಾಕಿದೆ.

ಕರ್ನಾಟಕದಲ್ಲಿ Covid-19 ಸ್ಭೋಟ: 16514 ಮಂದಿಗೆ ಮಹಾಮಾರಿ ಅಂಟು!ಕರ್ನಾಟಕದಲ್ಲಿ Covid-19 ಸ್ಭೋಟ: 16514 ಮಂದಿಗೆ ಮಹಾಮಾರಿ ಅಂಟು!

ಕೊರೊನಾವೈರಸ್ ಸೋಂಕಿತ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕವಾಸಕಿ ಸೋಂಕು ದೇಹದಲ್ಲಿನ ರಕ್ತನಾಳಗಳು ಹುಬ್ಬುವಂತೆ ಮಾಡುತ್ತದೆ. ಐದು ವರ್ಷದೊಳಗಿನ ಮಕ್ಕಳಲ್ಲೇ ಹೆಚ್ಚಾಗಿ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇಂಗ್ಲೆಂಡ್, ಅಮೆರಿಕಾ, ಇಟಲಿ, ಸ್ಪೇನ್ ಮತ್ತು ಚೀನಾದಲ್ಲಿ ಅತಿಹೆಚ್ಚು ಮಕ್ಕಳ ಸಾವಿಗೆ ಈ ಕವಾಸಕಿ ಕೂಡಾ ಪ್ರಮುಖ ಕಾರಣ ಎನಿಸಿದೆ. ಈ ಕವಾಸಕಿ ಸೋಂಕಿನ ಲಕ್ಷಣಗಳು ಹೇಗಿರುತ್ತವೆ, ಮಕ್ಕಳನ್ನು ಸಾವಿನ ಮನೆ ಸೇರುವಂತೆ ಮಾಡುತ್ತಿರುವ ಕವಾಸಕಿ ಮೊದಲು ಕಾಣಿಸಿಕೊಂಡಿದ್ದು ಎಲ್ಲಿ, ಈ ಸೋಂಕಿನ ಪ್ರಭಾವ ಎಷ್ಟರ ಮಟ್ಟಿಗೆ ಇರುತ್ತದೆ ಎನ್ನುವುದರ ಕುರಿತು ವಿಸ್ತೃತ ವರದಿ 'ಒನ್ ಇಂಡಿಯಾ' ಓದುಗರಿಗಾಗಿ.

ಕವಾಸಕಿ ಸೋಂಕಿನಿಂದ ಮಕ್ಕಳಲ್ಲಿ ಹೃದ್ರೋಗ ಕಾಯಿಲೆ

ಕವಾಸಕಿ ಸೋಂಕಿನಿಂದ ಮಕ್ಕಳಲ್ಲಿ ಹೃದ್ರೋಗ ಕಾಯಿಲೆ

5 ವರ್ಷದಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಈ ಕವಾಸಕಿ ಸೋಂಕು ಪ್ರಮುಖ ಕಾರಣವಾಗಿದೆ. ಕವಾಸಕಿ ಸೋಂಕಿನಿಂದ ಉರಿಯೂತ, ಕವಾಸಕಿ ಸಿಂಡ್ರೋಮ್ ಅಥವಾ ಮ್ಯೂಕೋಕ್ಯುಟೇನಿಯಸ್, ದುಗ್ಧರಸ ಗ್ರಂಥಿ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಈ ಕವಾಸಕಿ ಸೋಂಕಿನಿಂದ ಮಕ್ಕಳ ಹೃದಯದಲ್ಲಿ ಇರುವ ಪರಿಧಮನಿ ಫಿರಂಗಿಗಳು ಹಾನಿಯಾಗುತ್ತವೆ.

ಜಪಾನ್ ನಲ್ಲಿ ಮೊದಲು ಕಾಣಿಸಿಕೊಂಡ ಕವಾಸಕಿ ಸೋಂಕು

ಜಪಾನ್ ನಲ್ಲಿ ಮೊದಲು ಕಾಣಿಸಿಕೊಂಡ ಕವಾಸಕಿ ಸೋಂಕು

ಕಳೆದ 44 ವರ್ಷಗಳ ಹಿಂದೆ ಅಂದರೆ 1976ರಲ್ಲಿ ಮೊದಲ ಬಾರಿಗೆ ಜಪಾನ್ ನಲ್ಲಿ ಕವಾಸಕಿ ಸೋಂಕಿನ ಬಗ್ಗೆ ಅಧ್ಯಯನದಲ್ಲಿ ತಿಳಿದು ಬಂದಿತು. ಆದರೆ ಮೊದಲ ಪ್ರಕರಣವು ಜಪಾನ್ ನಿಂದ ಹೊರ ಭಾಗದಲ್ಲಿ ಕಂಡು ಬಂದಿತು. ಕವಾಸಕಿ ಸೋಂಕು ಇರುವುದನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದ್ದಲ್ಲಿ ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿ ದುಷ್ಪರಿಣಾಮ ಬೀರುವುದಿಲ್ಲ ಎಂದು ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

ಮುಂಬೈನಲ್ಲಿ 14 ವರ್ಷದ ಬಾಲಕನಿಗೆ ಕವಾಸಕಿ ಸೋಂಕು

ಮುಂಬೈನಲ್ಲಿ 14 ವರ್ಷದ ಬಾಲಕನಿಗೆ ಕವಾಸಕಿ ಸೋಂಕು

ಕವಾಸಕಿ ಸೋಂಕಿತರು ಹಲವು ರೀತಿಯ ವೈರಸ್‌ಗಳು, ಬ್ಯಾಕ್ಟೀರಿಯಾ, ರಾಸಾಯನಿಕ ಮತ್ತು ಉದ್ರೇಕಕಾರಿ ಅಂಶಗಳನ್ನು ಹೊಂದಿರುವ ಬಗ್ಗೆ ವೈದ್ಯರೇ ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ 14 ವರ್ಷದ ಕೊರೊನಾವೈರಸ್ ಸೋಂಕಿತ ಬಾಲಕನಲ್ಲಿ ಈ ಕವಾಸಕಿ ಸೋಂಕಿತ ಲಕ್ಷಣಗಳೂ ಕಂಡು ಬಂದಿದೆ. ಇದು ಕೊರೊನಾವೈರಸ್ ಸೋಂಕಿತ ಬಾಲಕನೊಬ್ಬನಲ್ಲಿ ಕವಾಸಕಿ ಸೋಂಕು ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ. ಇದಾದ ಬಳಿ ಮುಂಬೈನ ಹಲವು ಆಸ್ಪತ್ರೆಗಳಲ್ಲಿ ದಾಖಲಾದ ಮಕ್ಕಳಲ್ಲಿ ಇದೇ ಕವಾಸಕಿ ಸೋಂಕಿತ ಲಕ್ಷಣಗಳು ಕಂಡು ಬಂದಿರುವ ಬಗ್ಗೆ ವರದಿಗಳು ಬಂದಿದೆ.

ಕೊವಿಡ್-19 ಸೋಂಕಿತ 58 ಮಕ್ಕಳಲ್ಲಿ ಕವಾಸಕಿ ಲಕ್ಷಣ

ಕೊವಿಡ್-19 ಸೋಂಕಿತ 58 ಮಕ್ಕಳಲ್ಲಿ ಕವಾಸಕಿ ಲಕ್ಷಣ

ಕೊರೊನಾವೈರಸ್ ಸೋಂಕಿತರಲ್ಲೇ 5 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಕವಾಸಕಿ ಸೋಂಕಿತ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. 58 ಕೊರೊನಾವೈರಸ್ ಸೋಂಕಿತ ಮಕ್ಕಳಲ್ಲಿ ಕವಾಸಕಿ ಲಕ್ಷಣಗಳು ಕಂಡು ಬಂದಿರುವ ಬಗ್ಗೆ ಸ್ಪಷ್ಟಪಡಿಸಲಾಗಿದೆ.

ಕವಾಸಕಿ ಸೋಂಕಿತ ಲಕ್ಷಣಗಳು ಯಾವುವು?

ಕವಾಸಕಿ ಸೋಂಕಿತ ಲಕ್ಷಣಗಳು ಯಾವುವು?

- ತುಟಿ ಒಣಗುವುದು ಹಾಗು ಬಿರಿಯುವುದು,

- ದೇಹದ ಉಷ್ಣಾಂಶವು 5 ದಿನಗಳವರೆಗೂ 102 ಡಿಗ್ರಿಗಿಂತ ಹೆಚ್ಚಾಗಿರುವುದು

- ಕಣ್ಣುಗಳು ಕೆಂಪಾಗುವುದು

- ಕೈ ಮತ್ತು ಕಾಲು ಬೆರಳಿನ ಸಿಪ್ಪೆ ಸುಳಿಯುವುದು

- ಕಿರಿಕಿರಿ ಎನಿಸುವುದು

- ದೇಹದ ಮೇಲೆ ಎಲ್ಲಿಯಾದರೂ ರಾಶ್, ಆದರೆ ಡಯಾಪರ್ ಪ್ರದೇಶದಲ್ಲಿ ಉಬ್ಬಿರುವ ಗ್ರಂಥಿಗಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ.

English summary
How Kawasaki Disease Reason For Coronavirus Infected Childrens Death. Whats Is The Kawasaki Disease And How Its Effect For Childrens Health. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X