ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಹೊಸ ಛಾಪು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಏಷ್ಯಾದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಭಾರತೀಯ ಉದ್ಯಮಿ ಗೌತಮ್ ಅದಾನಿ ಷೇರು ಮೌಲ್ಯಗಳಲ್ಲಿ ಗಣನೀಯ ಏರಿಕೆಯಾಗಿದೆ.

ಗೌತಮ್ ಅದಾನಿ ನಿವ್ವಳ ಮೌಲ್ಯವು ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಅವರ ನಿವ್ವಳ ಮೌಲ್ಯವನ್ನು ಮೀರಿಸಿದ್ದು ಆಗಿದೆ. ಇದೀಗ ಗೌತಮ್ ಅದಾನಿಯವರು ಉದ್ಯಮಿ ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್‌ರಿಗೆ ಸೆಡ್ಡು ಹೊಡೆಯುವುದಕ್ಕೆ ರೆಡಿಯಾಗಿದ್ದಾರೆ.

ಗೌತಮ್ ಅದಾನಿ ದಿನವೊಂದರ ಗಳಿಕೆ ಬರೋಬ್ಬರಿ 42 ಸಾವಿರ ಕೋಟಿ ರೂಗೌತಮ್ ಅದಾನಿ ದಿನವೊಂದರ ಗಳಿಕೆ ಬರೋಬ್ಬರಿ 42 ಸಾವಿರ ಕೋಟಿ ರೂ

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಪ್ರಪಂಚದಾದ್ಯಂತದ ಅನೇಕರ ಆದಾಯ ಮಟ್ಟದಲ್ಲಿ ಇಳಿಕೆ ಆಗುತ್ತಿದ್ದ ಕಾಲದಲ್ಲಿ ಗೌತಮ್ ಅದಾನಿ ನಿವ್ವಳ ಮೌಲ್ಯವು ಸುಮಾರು ಡಬಲ್ ಆಗಿದೆ. 64.8 ಶತಕೋಟಿ ಡಾಲರ್ ನಿಂದ 141.4 ಶತಕೋಟಿ ಡಾಲರ್ ಆಗಿದ್ದು, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಮೂರನೇ ವ್ಯಕ್ತಿಯಾಗಿದ್ದಾರೆ.

How Indian Businessman Gautam Adani coming close in on Jeff Bezos with 1,000% stock rise

ಅದಾನಿ ಕಂಪನಿ ಷೇರುಗಳ ಮೌಲ್ಯ ದ್ವಿಗುಣ:

ಜಾಗತಿಕ ಷೇರುಗಳಲ್ಲಿ ಶೇ.18.4 ನಷ್ಟಕ್ಕೆ ಹೋಲಿಸಿದರೆ, ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆಗಳಲ್ಲಿನ ಏರಿಕೆಯಿಂದಾಗಿ 2022ರಲ್ಲಿ ಶೇ.36ರಷ್ಟು ಆದಾಯವು ಹೆಚ್ಚಳವಾಗಿರುವ ಬಗ್ಗೆ MSCI ವರ್ಲ್ಡ್/ಎನರ್ಜಿ ಇಂಡೆಕ್ಸ್ ಹೇಳಿದೆ.

ಜಾಗತಿಕ ಮಟ್ಟದ ಷೇರುಗಳ ಬೆಲೆ ಇಳಿಕೆಯಾಗಿದ್ದರೂ, ಉದ್ಯಮದಾದ್ಯಂತ ದೊಡ್ಡ ಲಾಭಗಳ ಅವಧಿಯಲ್ಲಿಯೂ ಸಹ ಅದಾನಿ ಸಂಸ್ಥೆಗಳು ಉಳಿದ ಕಂಪನಿಗಳ ಷೇರುಗಳಿಗಿಂತ ಎದ್ದು ಕಾಣುತ್ತವೆ. ಇದೇ ಅವಧಿಯಲ್ಲಿ ಕೆಲವು ಷೇರುಗಳ ಬೆಲೆಗಳು ಈ ವರ್ಷ ದ್ವಿಗುಣಗೊಂಡಿವೆ. ಇದು ಅವರ ಕಂಪನಿಗಳ ಮೌಲ್ಯಮಾಪನ, ವ್ಯಾಪಾರ ರಂಗದಲ್ಲಿ ಹುದುಗಿರುವ ಹತೋಟಿ ಮತ್ತು ಸರ್ಕಾರದೊಂದಿಗೆ ಅವರ ಸಂಬಂಧಗಳನ್ನು ಆಕರ್ಷಿಸಿತು.

ಅದಾನಿ ಸಂಸ್ಥೆಗಳಿಂದ ದುಪ್ಪಟ್ಟು ಲಾಭ ಗಳಿಕೆ?

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆಗಳ ವ್ಯಾಪಾರದಿಂದ 750 ಪಟ್ಟು ಆದಾಯವನ್ನು ಗಳಿಸಿದೆ. ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಮತ್ತು ಅದಾನಿ ಟ್ರಾನ್ಸ್ ಮಿಷನ್ ಲಿಮಿಟೆಡ್ ನಿವ್ವಳ ಮೌಲ್ಯವು 400 ಪಟ್ಟು ಆಗಿದೆ. ಉದ್ಯಮಿ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿ ಹಾಗೂ ಬೆಜೋಸ್ ನೇತೃತ್ವದ ಅಮೆಜಾನ್ ಸಂಸ್ಥೆಯ ಗಳಿಕೆಯ ಪ್ರಮಾಣವು 100 ಪಟ್ಟು ಆಗಿದ್ದು, ಭಾರತದ ಮತ್ತೊಬ್ಬ ಕೋಟ್ಯಧಿಪತಿ ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರಿ ಲಿಮಿಟೆಡ್ ವಹಿವಾಟು 28 ಪಟ್ಟು ಹೆಚ್ಚಳವಾಗಿದೆ.

ಭಾರತದ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಪೂರೈಸಲು ಗೌತಮ್ ಅದಾನಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಗಮನ ಸೆಳೆದಿದ್ದಾರೆ.

English summary
How Indian Businessman Gautam Adani coming close in on Jeff Bezos with 1,000% stock rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X