ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗಿಂತ ನಾವೇ ಕಡಿಮೆ, ಆದರೂ ಸಾಧನೆ ಹಿರಿಮೆ

|
Google Oneindia Kannada News

ಬೆಂಗಳೂರು, ಸೆ. 24 : ಭಾರತೀಯರ ಮುಖದಲ್ಲಿ ಬುಧವಾರ ಎನೋ ಸಾಧಿಸಿದ ತೃಪ್ತಿ, ಪ್ರಧಾನಿ ಆದಿಯಾಗಿ ವಿಜ್ಞಾನಿಗಳ ಮುಖದಲ್ಲಿ ಮಂದಹಾಸ. ಇದಕ್ಕೆ ಕಾರಣ ಮಂಗಳಯಾನದ ಯಶಸ್ಸು.

ಬಹುನಿರೀಕ್ಷಿತ 'ಮಾಮ್‌' ಮಂಗಳನ ಅಂಗಳಕ್ಕೆ ಇಳಿದಿದ್ದು ದಾಖಲೆಯ ಪುಟ ಸೇರಿದೆ. ಅಂತೆಯೇ ಅತಿ ಕಡಿಮೆ ವೆಚ್ಚದ ಬಾಹ್ಯಾಕಾಶ ನೌಕೆ ಎಂಬ ಹೆಮ್ಮಯೂ ಭಾರತೀಯರ ಪಾಲಾಗಿದೆ. ಮಂಗಳನ ವಿವಿಧ ಕೋನಗಳನ್ನು ಚಿತ್ರಸಿ ಅನೇಕ ಸಂಶೋಧನೆಗಳಿಗೆ ನೆರವಾಗಲು ಕಾರಣವಾಗುವ ನೌಕೆಗೆ ತಗುಲಿದ ವೆಚ್ಚ 450 ಕೋಟಿ ರೂ. ಅಥವಾ 67 ಮಿಲಿಯನ್‌ ಡಾಲರ್‌. ಆದರೆ ಇತರೆ ದೇಶಗಳ ಬಾಹ್ಯಾಕಾಶ ನೌಕೆಗಳಿಗೆ ಹೋಲಿಸಿದರೆ ವೆಚ್ಚ ಅತಿ ಕಡಿಮೆ.(ಮಂಗಳನ ಬಳಿ ತೆರಳಲು ತಲೆಗೆ ನಾಲ್ಕೇ ರೂಪಾಯಿ!)

mars

ಹಾಗಾದರೆ ಕಡಿಮೆ ಹಣದಲ್ಲಿ ಗುಣಮಟ್ಟದ ಮಂಗಳಯಾನ ಹೇಗೆ ಸಾಧ್ಯವಾಯಿತು ಎಂಬುದರ ಮೇಲೊಂದು ನೋಟ ಇಲ್ಲಿದೆ....

ಕಡಿಮೆ ಭಾರದ ಎಂಜಿನ್‌
ಉಪಗ್ರಹ ಕೊಂಡೊಯ್ಯಲು ಹೆಚ್ಚು ಭಾರದ ಎಂಜಿನ್‌ ಬಳಸಿದರೆ ಭೂಮಿಯ ಕಕ್ಷೆ ದಾಟಿಸಲು ಹೆಚ್ಚು ಇಂಧನ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡಿಮೆ ಭಾರದ ಎಂಜಿನ್‌ ಬಳಸಿ ಖರ್ಚು ಕಡಿಮೆ ಮಾಡಲಾಯಿತು.

ಕಡಿಮೆ ಸಂಬಳ
ಇತರೆ ದೇಶಗಳಿಗೆ ಹೋಲಿಸಿದರೆ ಭಾರತೀಯರಿಗೆ ಸಿಗುತ್ತಿರುವ ಸಂಬಳ ಕಡಿಮೆ ಈ ಮಾತು ವಿಜ್ಞಾನಿಗಳಿಗೂ ಅನ್ವಯಿಸುತ್ತದೆ. ಅಲ್ಲದೇ ರಷ್ಯಾ ಸಹ ಕಡಿಮೆ ವೆಚ್ಚದಲ್ಲಿ ಯಂತ್ರಗಳನ್ನು ಒದಗಿಸಿತು. ಅಮೆರಿಕ ಮತ್ತು ಜಪಾನ್‌ ಇದೆ ರೀತಿಯ ಯಾನಕ್ಕೆ ನೂರು ಮಿಲಿಯನ್‌ ವ್ಯಯಿಸಿದ್ದವು. ಇಸ್ರೋದ ಸಾಮಾನ್ಯ ವಿಜ್ಞಾನಿಗಳು ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ವೇತನ ಪಡೆದಿದ್ದರು.

ತಂತ್ರಜ್ಞಾನ ವೆಚ್ಚವೂ ಅಗ್ಗ
ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತಂತ್ರಜ್ಞಾನ ವೆಚ್ಚವೂ ಅಗ್ಗ. ಅಲ್ಲದೇ ಕಚ್ಚಾ ವಸ್ತಯಗಳು ಸುಲಭದಲ್ಲಿ ದೊರೆತಿದ್ದು ವಿಜ್ಞಾನಿಗಳ ಸಾಧನೆಗೆ ಅನುಕೂಲವಾಯಿತು. ಇದೆಲ್ಲದರ ಜತೆಗೆ ಕೇಂದ್ರ ನಿರಂತರ ಸಹಕಾರ ದಾಖಲೆ ಬರೆಯಲು ನೆರವಾಯಿತು.

ವಿಜ್ಞಾನಿಗಳ ಅಧ್ಯಯನ
ಅಮೆರಿಕ, ಜಪಾನ್‌, ರಷ್ಯಾ ಮುಂತಾದ ದೇಶಗಳ ಹಿಂದಿನ ದಾಖಲೆಯನ್ನು, ಬಾಹ್ಯಾಕಾಶ ನೌಕೆ ಉಡಾವಣೆ, ತೆಗೆದುಕೊಳ್ಳುವ ದಿನ ಎಲ್ಲವನ್ನು ಕರಾರುವಕ್ಕಾಗಿ ಲೆಕ್ಕ ಹಾಕಿದ ವಿಜ್ಞಾನಿಗಳು ವೆಚ್ಚ ಕಡಿಮೆ ಮಾಡುವ ಬಗ್ಗೆ ನಿರ್ದಿಷ್ಟ ಯೋಜನೆ ರೂಪಿಸಿದ್ದರು. ಅಲ್ಲದೇ ನಮ್ಮ ವಿಜ್ಞಾನಿಗಳು ಈ ಹಿಂದೆ ಕಳಿಸಿದ್ದ ಉಪಗ್ರಹಗಳ ಖರ್ಚನ್ನು ಲೆಕ್ಕ ಹಾಕಿದ್ದರು.

ಎಲ್ಲರ ಸಮಗ್ರ ಶ್ರಮ ಕಡಿಮೆ ವೆಚ್ಚದ ಬಾಹ್ಯಾಕಾಶ ನೌಕೆ ಉಡಾವಣೆಗೆ ಕಾರಣವಾಯಿತು ಎಂದು ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್‌ ಹೇಳಿದರು.

English summary
India's space mission to Mars-Mangalyaan is not only the first ever indigenous mission to the planet, but also the cheapest. he size of a Nano car, the golden satellite was completed in record time at a record cost of Rs 450 crores or $67 million dollar. What are the behind things of lower cost?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X