ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಹೇಗೆ ಮಧ್ಯಮ ವರ್ಗದ ಜನತೆಗೆ ಲಾಭದಾಯಕವಾಗಿದೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 17 : ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದನಂತರ ಅತ್ಯಾವಶ್ಯಕ ಸರಕುಗಳ ಪರೋಕ್ಷ ತೆರಿಗೆ ಸಾಕಷ್ಟು ಕಡಿಮೆಯಾಗಿದೆ. ಇದು ಭಾರತದ ಮಧ್ಯಮ ವರ್ಗೀಯ ಗ್ರಾಹಕರಿಗೆ ವರದಾನವಾಗಿ ಪರಿಣಮಿಸಿದೆ.

2,000 ಕೋಟಿ ರುಪಾಯಿ ಜಿಎಸ್ ಟಿ ವಂಚನೆ ಹಗರಣ ಬೆಂಗ್ಳೂರಲ್ಲಿ ಬಯಲು 2,000 ಕೋಟಿ ರುಪಾಯಿ ಜಿಎಸ್ ಟಿ ವಂಚನೆ ಹಗರಣ ಬೆಂಗ್ಳೂರಲ್ಲಿ ಬಯಲು

ಗ್ರಾಹಕರು ದಿನನಿತ್ಯ ಬಳಸುವ ಸೋಪ್, ಟೂತ್ ಪೇಸ್ಟ್, ಕೇಶತೈಲ, ಕ್ಷೌರಕ್ಕುಪಯೋಗಿಸುವ ಬ್ಲೇಡ್, ಶಾಂಪೂ, ಡಿಯೋಡೊರಂಟ್ ವಸ್ತುಗಳ ಮೇಲಿನ ತೆರಿಗೆಯನ್ನು, ತೆರಿಗೆ ಮತ್ತು ವ್ಯಾಟ್ ಎರಡನ್ನೂ ಸೇರಿಸಿ ಶೇ.26ರಿಂದ ಶೇ.18ಕ್ಕೆ ಇಳಿಸಲಾಗಿದೆ. ಇದಲ್ಲದೆ, ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.50ರಷ್ಟು, ಅಂದರೆ ಶೇ.10ರಿಂದ 5ಕ್ಕೆ ಇಳಿಸಲಾಗಿದೆ.

ರಾಜ್ಯದಲ್ಲಿ ಹೆಚ್ಚಾದ ತೆರಿಗೆ ಸಂಗ್ರಹ, ಕಳೆದ ವರ್ಷಕ್ಕಿಂತ 18.7% ಹೆಚ್ಚಳ ರಾಜ್ಯದಲ್ಲಿ ಹೆಚ್ಚಾದ ತೆರಿಗೆ ಸಂಗ್ರಹ, ಕಳೆದ ವರ್ಷಕ್ಕಿಂತ 18.7% ಹೆಚ್ಚಳ

ಅತ್ಯಂತ ವೇಗವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು ಮಾತ್ರವಲ್ಲ, ಸಾಂಬಾರ ಪದಾರ್ಥಗಳ ಮೇಲಿನ ನೇರ ತೆರಿಗೆಯನ್ನು ಶೇ.6ರಿಂದ 5ಕ್ಕೆ, ಇಡ್ಲಿ ದೋಸೆ ಹಿಟ್ಟಿನ ಮೇಲಿನ ತೆರಿಗೆಯನ್ನು ಶೇ.12ರಿಂದ 5ಕ್ಕೆ, ರೊಟ್ಟಿಯ ಮೇಲಿನ ತೆರಿಗೆಯನ್ನು ಶೇ.12ರಿಂದ 5ಕ್ಕೆ ಮತ್ತು ಮಿನರಲ್ ನೀರಿನ ಮೇಲಿನ ತೆರಿಗೆಯನ್ನು ಶೇ.27ರಿಂದ 18ಕ್ಕೆ ಇಳಿಸಲಾಗಿದೆ.

How GST is benefitting the consumers

ಈ ವಿವರಗಳನ್ನು ಮಿನಿಸ್ಟ್ರಿ ಆಫ್ ಸ್ಟಾಟಿಸ್ಟಿಕ್ಸ್ ಅಂಡ್ ಪ್ರೋಗ್ರಾಮ್ ಇಂಪ್ಲಿಮೆಂಟೇಷನ್ ಬಿಡುಗಡೆ ಮಾಡಿದ್ದು, ಗ್ರಾಹಕರು ಅಲ್ಪಮಟ್ಟಿಗೆ ನಿರಾಳರಾಗಿದ್ದಾರೆ. ಕುಟುಂಬದ ಜೊತೆ ಹೊರಗೆ ಹೋದಾಗ ಹೋಟೆಲನ್ನು ಹೊಕ್ಕಲು ಹಿಂದೆ ಮುಂದೆ ನೋಡುತ್ತಿದ್ದ ಮಧ್ಯಮ ವರ್ಗೀಯರು ಇಂದು ಜೇಬು ಮುಟ್ಟಿ ನೋಡಿಕೊಳ್ಳದೆ ವೀಕೆಂಡುಗಳಲ್ಲಿ ಹೋಟೆಲುಗಳಿಗೆ, ಈಟ್ ಔಟ್ ಗಳಿಗೆ ಎಡತಾಕುತ್ತಿದ್ದಾರೆ.

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು? ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

ಗ್ರಾಹಕ ಮತ್ತು ಸೇವಾ ತೆರಿಗೆಯನ್ನು ಸರಳೀಕರಣ ಮಾಡಿದಂದಿನಿಂದ ಶೇ.33ರಷ್ಟು ಉತ್ಪನ್ನ ಮತ್ತು ಸೇವೆಗಳ ತೆರಿಗೆಯನ್ನು ಇಳಿಸಲಾಗಿದೆ. ಇದು ಇನ್ನೂ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಸರಕಾರಕ್ಕೆ ಹೆಚ್ಚಿನ ಉತ್ಪಾದನೆಯನ್ನು ಕೂಡ ತಂದು ಕೊಡಲಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಜುಲೈ 27ರಂದು ತಮ್ಮ ಸೋಷಿಯಲ್ ಮೀಡಿಯಾ ಬ್ಲಾಗ್ ನಲ್ಲಿ, ಎಲ್ಲ ವರ್ಗದ ವಸ್ತುಗಳ ಎಲ್ಲ ಸ್ಲಾಬ್ ಗಳನ್ನು ಪರಿಗಣಿಸಿದರೆ, ಕಳೆದೊಂದು ವರ್ಷದಲ್ಲಿ 384 ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ ಮತ್ತು ಯಾವುದೇ ಉತ್ಪನ್ನದ ಬೆಲೆ ಏರಿಕೆಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಈಬಗೆ ಪ್ರವಾಹೋಪಾದಿಯಲ್ಲಿ ತೆರಿಗೆ ಇಳಿಸಿದ್ದನ್ನು ಭಾರತ ನೋಡಿಲ್ಲ. ದರ ಕಡಿಮೆಯಾಗುತ್ತಿದ್ದಂತೆ, ಹಣವೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ ಎಂದು ಬರೆದಿದ್ದಾರೆ.

How GST is benefitting the consumers

ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿ ತನ್ನಿ: ಚಿದಂಬರಂ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿ ತನ್ನಿ: ಚಿದಂಬರಂ

ಇದೀಗ ಹಬ್ಬಗಳ ಸರದಿಯಿರುವುದರಿಂದ, ರೆಫ್ರಿಜರೇಟರ್, ವಾಷಿಂಗ್ ಮಷೀನ್, ಫ್ರೀಜರ್ಸ್, ವ್ಯಾಕ್ಯೂಮ್ ಕ್ಲೀನರ್ಸ್, ಸಣ್ಣ ಟಿವಿಗಳಿಗೆ ಭಾರೀ ಬೇಡಿಕೆ ಇರುವುದರಿಂದ ಮತ್ತು ಮಾರಾಟಗಾರರು ಕೂಡ ಕಡಿಮೆ ದರಗಳಿಗೆ ಬಿಕರಿ ಮಾಡುತ್ತಿರುವುದರಿಂದ ಇಂಥ ಉತ್ಪನ್ನಗಳ ಮಾರಾಟದಲ್ಲಿಯೂ ಭಾರೀ ಏರಿಕೆಯಾಗುವ ಸಂಭವನೀಯತೆ ಇದೆ. ಜೊತೆಗೊಂದಿಷ್ಟು ಕೊಡುಗೆಗಳನ್ನು ನೀಡಿದರೆ ಗ್ರಾಹಕರಾದರೂ ಏಕೆ ಬೇಡವೆಂದಾರು?

ಉತ್ಪನ್ನಗಳ ಸರಬರಾಜು ಮತ್ತು ಸೇವೆಗಳ ಮೇಲೆ ಹೇರಲಾಗುತ್ತಿರುವ ಪರೋಕ್ಷ ತೆರಿಗೆಯೇ ಸರಕು ಮತ್ತು ಸೇವಾ ತೆರಿಗೆ. ಉತ್ಪನ್ನದ ಪ್ರತಿ ಹಂತದಲ್ಲಿಯೂ ತೆರಿಗೆಯನ್ನು ವಿಧಿಸಲಾಗುತ್ತಿದ್ದು, ಅಂತಿಮ ಗ್ರಾಹಕರನ್ನು ಹೊರತುಪಡಿಸಿ, ಮೊದಲಿನ ಎಲ್ಲ ಉತ್ಪಾದನಾ ಹಂತದಲ್ಲಿಯೂ ತೆರಿಗೆಯನ್ನು ಹಿಂತಿರುಗಿ ನೀಡಲಾಗುತ್ತದೆ. ಸರಕು ಮತ್ತು ಸೇವಾ ತೆರಿಗೆಯನ್ನು ಶೇ.5, ಶೇ.12, ಶೇ.18 ಮತ್ತು ಶೇ.28 ಎಂದು ನಾಲ್ಕು ಸ್ಲಾಬ್ ಗಳಲ್ಲಿ ವಿಧಿಸಲಾಗುತ್ತಿದೆ. ಆದರೆ, ಪೆಟ್ರೋಲಿಯಂ ಉತ್ಪನ್ನಗಳು, ಅಲ್ಕೋಹಾಲ್ ಯುಕ್ತ ಪೇಯಗಳು, ವಿದ್ಯುತ್ ಅನ್ನು ಜಿಎಸ್ಟಿ ಅಡಿಯಲ್ಲಿ ತರಲಾಗಿಲ್ಲ. ಆದರೆ, ಆಯಾ ರಾಜ್ಯಗಳು ಮೊದಲಿನ ತೆರಿಗೆ ವ್ಯವಸ್ಥೆಯಂತೆ ಈ ಉತ್ಪನ್ನಗಳ ಮೇಲೆ ತೆರಿಗೆಯನ್ನು ವಿಧಿಸುತ್ತಿವೆ.

English summary
The Indirect taxes on essential commodities has been reduced substantially due to the implementation of Goods and Services Tax (GST). Indeed, a boon for end-consumer, especially, middle-class people in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X