ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ ನಿಯಂತ್ರಣಕ್ಕೆ ಪೆಟ್ರೋಲ್-ಡೀಸೆಲ್ ದರ ಇಳಿಸಿದರೆ ಸಾಕಾ?

|
Google Oneindia Kannada News

ನವದೆಹಲಿ, ಮೇ 27: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದರಿಂದ ಭಾರತದಲ್ಲಿ ಹಣದುಬ್ಬರ ನಿಯಂತ್ರಿಣ ಸಾಧ್ಯವಾಗಲಿದೆ ಎಂಬ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ.

ಭಾರತದಲ್ಲಿ ನಾಲ್ಕೂವರೆ ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಕಳೆದ ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆಯಾಗಿದೆ.

ತೆರಿಗೆ ಕಡಿತ, ಸಹಾಯಧನ ಹಣದುಬ್ಬರದ ವಿರುದ್ದ ಸರ್ಕಾರದ ಸಮರತೆರಿಗೆ ಕಡಿತ, ಸಹಾಯಧನ ಹಣದುಬ್ಬರದ ವಿರುದ್ದ ಸರ್ಕಾರದ ಸಮರ

ಇಂಧನ ದರದ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸುವುದರ ಜೊತೆಗೆ ಪ್ಲಾಸ್ಟಿಕ್ ಉತ್ಪನ್ನ, ಕಬ್ಬಿಣ ಮತ್ತು ಸ್ಟೀಲ್ ವಸ್ತುಗಳ ಮೇಲಿನ ತೆರಿಗೆಯನ್ನೂ ಸಹ ಕಡಿತಗೊಳಿಸಲಾಗಿದೆ. ಇನ್ನೊಂದು ಕಡೆ ಕಚ್ಚಾ ಪಾಮ್ ಆಯಿಲ್ ಮತ್ತು ಸೋಯಾಬಿನ್ ಎಣ್ಣೆಯ ಬೆಲೆಯು ಕಡಿಮೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ಯಾಕೇಜ್ ರೀತಿಯಲ್ಲಿ ಈ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಈ ಅಬಕಾರಿ ಸುಂಕ ಕಡಿತದಿಂದ ದೇಶದ ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿದೆಯೇ? ಎಂದು ಪ್ರಶ್ನಿಸಿದರೆ ಅದು ಅಸಾಧ್ಯ ಎಂದು ಹೇಳಲಾಗುತ್ತದೆ. ದೇಶದಲ್ಲಿ ಹಣದುಬ್ಬರಣ ಪ್ರಮಾಣವು ಈಗಾಗಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಹಂತದಲ್ಲಿ ತೆಗದುಕೊಂಡ ಕ್ರಮವು ಕೊಂಚ ಸಹಕಾರಿ ಆಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಅಬಕಾರಿ ಸುಂಕ ಕಡಿತಗೊಳಿಸಿದರೂ ದೇಶದ ಹಣದುಬ್ಬರ ನಿಯಂತ್ರಿಸಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಮುಂದೆ ಓದಿ.

ಏಪ್ರಿಲ್ ತಿಂಗಳಿನಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಹಣದುಬ್ಬರ

ಏಪ್ರಿಲ್ ತಿಂಗಳಿನಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಹಣದುಬ್ಬರ

ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಶೇ.7.9ಕ್ಕೆ ಏರಿಕೆಯಾಗಿದೆ. ಸಗಟು ಹಣದುಬ್ಬರವು ಸತತ 13 ತಿಂಗಳುಗಳಿಂದ ಎರಡಂಕಿ ದಾಟಿದೆ, ಕಳೆದ ತಿಂಗಳು ಶೇ.15.1ರ ಬಹು ದಶಕಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಬಡ್ಡಿದರಗಳನ್ನು ಹೆಚ್ಚಿಸಲು ಈ ತಿಂಗಳ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರದ ಮೇಲೆ ಸರ್ಕಾರದ ಕ್ರಮಗಳು ಜಾರಿಗೆ ಬಂದಿವೆ.

ಇಂಧನ ತೆರಿಗೆಗಳಲ್ಲಿನ ಕಡಿತವು ಜೂನ್‌ನಲ್ಲಿ ಹಣದುಬ್ಬರವನ್ನು ನೇರವಾಗಿ ಸುಮಾರು 20 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ ಒಟ್ಟಾರೆಯಾಗಿ, ಬೆಲೆಗಳ ಮೇಲಿನ ಒತ್ತಡ ಸರಕುಗಳು ಮತ್ತು ಸೇವೆಗಳಾದ್ಯಂತ ವ್ಯಾಪಕವಾಗಿ ಹರಡಿರುವುದರಿಂದ ಹಣದುಬ್ಬರದ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

ಉಕ್ರೇನ್-ರಷ್ಯಾ ಯುದ್ಧದಿಂದ ಜಾಗತಿಕ ಬೆಲೆ ಏರಿಕೆ

ಉಕ್ರೇನ್-ರಷ್ಯಾ ಯುದ್ಧದಿಂದ ಜಾಗತಿಕ ಬೆಲೆ ಏರಿಕೆ

ದೇಶದಲ್ಲಿ ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡುವ ಹಣಕಾಸಿನ ಕ್ರಮಗಳಂತಹ ದೇಶೀಯ ಕಾರಣಗಳ ಹೊರತಾಗಿ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಜಾಗತಿಕ ಪೂರೈಕೆ ಅಡೆತಡೆಗಳು ಬೆಲೆ ಏರಿಕೆಗೆ ಕಾರಣವಾಗಿವೆ. ಜಾಗತಿಕ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಅನುಕೂಲಕರವಾಗಿ ಬದಲಾಗುವ ಸಾಧ್ಯತೆಯಿಲ್ಲ. ಆಂತರಿಕವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ಕೆಲವು ಸಭೆಗಳಲ್ಲಿ ಆಕ್ರಮಣಕಾರಿಯಾಗಿ ದರಗಳನ್ನು ಹೆಚ್ಚಿಸಲು ಬದ್ಧವಾಗಿದೆ. ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ನಂತರ, ಪ್ರಸಕ್ತ ಹಣಕಾಸು ವರ್ಷದ ಗ್ರಾಹಕ ಬೆಲೆ ಹಣದುಬ್ಬರವು ಶೇ.7.2ರಷ್ಟು ಏರಿಕೆಯಾಗಬಹುದು.

ರಾಜ್ಯಗಳ ಮೇಲೆ ವ್ಯಾಟ್ ತಗ್ಗಿಸುವ ಜವಾಬ್ದಾರಿ

ರಾಜ್ಯಗಳ ಮೇಲೆ ವ್ಯಾಟ್ ತಗ್ಗಿಸುವ ಜವಾಬ್ದಾರಿ

ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಲು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಿದೆ. ಇಂಧನದ ಬೆಲೆಗಳನ್ನು ಮತ್ತಷ್ಟು ತಗ್ಗಿಸಲು ಅದರ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕಿದೆ. ಕೆಲವು ರಾಜ್ಯಗಳು ವ್ಯಾಟ್ ಅನ್ನು ಕಡಿಮೆಗೊಳಿಸಿವೆ, ಆದರೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ತಮ್ಮ ತೆರಿಗೆಗಳನ್ನು ತಗ್ಗಿಸುವುದರ ಮೂಲಕ ಭಾರೀ ಆದಾಯದ ನಷ್ಟವನ್ನು ಎದುರಿಸಲು ಸಿದ್ಧವಾಗಿವೆ ಎಂದು ನಿರೀಕ್ಷಿಸುವುದು ಅಸಮಂಜಸ ಎಂದು ಹೇಳಲಾಗುತ್ತಿದೆ.

ರಾಜಕೀಯ ಕಿತ್ತಾಟದಿಂದ ಹಣದುಬ್ಬರ ನಿಯಂತ್ರಣ ಅಸಾಧ್ಯ

ರಾಜಕೀಯ ಕಿತ್ತಾಟದಿಂದ ಹಣದುಬ್ಬರ ನಿಯಂತ್ರಣ ಅಸಾಧ್ಯ

ಇಂಧನದ ಮೇಲಿನ ಸೆಸ್ ಅನ್ನು ರದ್ದುಪಡಿಸಬೇಕು ಮತ್ತು ಬೆಲೆಗಳನ್ನು 2014 ರ ಮಟ್ಟಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೇಡಿಕೆಗಳು ಮತ್ತು ವಿನಿಮಯಗಳು ರಾಜಕೀಯ ಮೇಲ್ಪದರಗಳನ್ನು ಹೊಂದಿವೆ. ರಾಜ್ಯಗಳು ತಮ್ಮ ಆದಾಯದ ಮೂಲಗಳು ಸೀಮಿತವಾಗಿರುವುದರಿಂದ ಹಣಕಾಸಿನ ಗಳಿಕೆಯ ವ್ಯಾಪ್ತಿಯು ತೀರಾ ಕಡಿಮೆಯಾಗಿದೆ, ಆದರೆ ಕೇಂದ್ರವು ಅನೇಕ ರೀತಿಯಲ್ಲಿ ಮತ್ತು ಮೂಲಗಳಿಂದ ಆದಾಯವನ್ನು ಸಂಗ್ರಹಿಸಬಹುದು. ರಾಜ್ಯಗಳು ತಮ್ಮ ಕೈಲಾದಷ್ಟು ಮಾಡಬೇಕಾದರೂ, ಈ ವಿಷಯದ ಬಗ್ಗೆ ರಾಜಕೀಯ ಕಿತ್ತಾಟವೇ ನಡೆಯುತ್ತಿದೆ. ಇಂಥ ರಾಜಕೀಯ ಕಿತ್ತಾಟದಿಂದ ದೇಶದ ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

English summary
How Fuel tax cuts help enough to curb inflation in India. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X