ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್ 1, 2ನೇ ಡೋಸ್ ನಂತರ ಎಷ್ಟು ಪರಿಣಾಮಕಾರಿ: ಸ್ಟಡಿ ರಿಪೋರ್ಟ್

|
Google Oneindia Kannada News

ಮೊದಮೊದಲು ಗೋಗರೆದರೂ ಲಸಿಕೆ ಹಾಕಿಸಿಕೊಳ್ಳಲು ಹೋಗದ ಸಾರ್ವಜನಿಕರು ಈಗ ಲಸಿಕೆ ಕೇಂದ್ರಕ್ಕೆ ದಾಂಗುಡಿ ಇಡುತ್ತಿದ್ದಾರೆ. ಉತ್ಪಾದನೆಗಿಂತ ಜಾಸ್ತಿ ಬೇಡಿಕೆ ಇರುವುದರಿಂದ ಲಸಿಕೆ ಅಭಿಯಾನ ಕುಂಟುತ್ತಾ ಸಾಗುತ್ತಿದೆ.

Recommended Video

Covishield ತೆಗೆದುಕೊಂಡು ಮೇಲೆ ಏನೆಲ್ಲಾ ಪರಿಣಾಮವಾಗಿದೆ | Oneindia Kannada

ಮೇ ಒಂದರನಂತರ ಹದಿನೆಂಟು ವರ್ಷದ ಮೇಲ್ಪಟ್ಟವರಿಗೂ ಲಸಿಕೆ ಎಂದು ಪೂರ್ವತಯಾರಿ ಇಲ್ಲದೇ ಪ್ರಧಾನಿ ಮಾಡಿದ ಘೋಷಣೆಯ ನಂತರ ಲಸಿಕೆಗೆ ಹಾಹಾಕಾರ ಎದ್ದಿದೆ. ಯುವ ಸಮುದಾಯ ದೊಡ್ಡ ಮಟ್ಟದಲ್ಲಿ ಉತ್ಸಾಹ ತೋರುತ್ತಿರುವುದರಿಂದ ಎರಡನೇ ಡೋಸ್ ಪಡೆದುಕೊಳ್ಳುವುದೇ ದುಸ್ತರವಾಗುತ್ತಿದೆ.

ಭಾರತದಲ್ಲಿ ಯುವಕರಿಗೆ ಕೊರೊನಾವೈರಸ್ ಲಸಿಕೆಯೇ ಸಿಗುತ್ತಿಲ್ಲ! ಭಾರತದಲ್ಲಿ ಯುವಕರಿಗೆ ಕೊರೊನಾವೈರಸ್ ಲಸಿಕೆಯೇ ಸಿಗುತ್ತಿಲ್ಲ!

ಲಸಿಕೆ ಕಾರ್ಯಕ್ರಮವನ್ನು ಆಯಾ ರಾಜ್ಯ ಸರಕಾರಗಳ ಜವಾಬ್ದಾರಿಗೆ ಕೇಂದ್ರ ಸರಕಾರ ಬಿಟ್ಟ ನಂತರ, ಲಸಿಕೆ ತಯಾರಿಕಾ ಕಂಪೆನಿಗಳಾದ ಭಾರತ್ ಬಯೋಟೆಕ್ ಮತ್ತು ಸೆರಂ ಇನ್ಸ್ಟಿಟ್ಯೂಟ್ ಸಂಸ್ಥೆಗಳಿಗೆ ಭಾರೀ ಒತ್ತಡ ಹೇರಲಾಗುತ್ತಿದೆ.

ಎರಡು ಲಸಿಕೆಗಳಾದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಲ್ಲಿ ಕೋವಿಶೀಲ್ಡ್ ಪಡೆದುಕೊಂಡ ನಂತರ ಇದು ಎಷ್ಟು ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು ಬ್ರಿಟನ್ ಮೂಲದ ಸಂಸ್ಥೆಯೊಂದು ಅಧ್ಯಯನ ನಡೆಸಿ ವಿಸ್ತೃತ ವರದಿಯನ್ನು ನೀಡಿದೆ.

ಭಾರತದಲ್ಲಿ ಉತ್ತುಂಗಕ್ಕೇರಿದ ಕೋವಿಡ್ 19 ಪ್ರಕರಣ, 2 ಅಲೆ ಕಡಿಮೆಯಾಗುವ ನಿರೀಕ್ಷೆ ಭಾರತದಲ್ಲಿ ಉತ್ತುಂಗಕ್ಕೇರಿದ ಕೋವಿಡ್ 19 ಪ್ರಕರಣ, 2 ಅಲೆ ಕಡಿಮೆಯಾಗುವ ನಿರೀಕ್ಷೆ

 ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕ (ಭಾರತದಲ್ಲಿ ಕೋವಿಶೀಲ್ಡ್)

ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕ (ಭಾರತದಲ್ಲಿ ಕೋವಿಶೀಲ್ಡ್)

ದಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಸಂಸ್ಥೆಯು, ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕ (ಭಾರತದಲ್ಲಿ ಕೋವಿಶೀಲ್ಡ್) ಸಂಸ್ಥೆಯ ಲಸಿಕೆ ಮೊದಲನೇ ಡೋಸ್ ಮತ್ತು ಎರಡನೇ ಡೋಸ್ ತೆಗೆದುಕೊಂಡ ನಂತರ ಸಾವಿನ ಪ್ರಮಾಣ ಎಷ್ಟರ ಮಟ್ಟಿಗೆ ತಗ್ಗುತ್ತದೆ ಎನ್ನುವುದರ ಬಗ್ಗೆ ವರದಿಯನ್ನು ನೀಡಿದೆ.

 ಬಯೋ-ಎನ್-ಟೆಕ್ ಫೈಜರ್ ಒಂದು ಡೋಸ್ ತೆಗೆದುಕೊಂಡರೆ ಎಷ್ಟು ಪರಿಣಾಮಕಾರಿ

ಬಯೋ-ಎನ್-ಟೆಕ್ ಫೈಜರ್ ಒಂದು ಡೋಸ್ ತೆಗೆದುಕೊಂಡರೆ ಎಷ್ಟು ಪರಿಣಾಮಕಾರಿ

ಈ ವರದಿಯ ಪ್ರಕಾರ ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದ ನಂತರ ಸಾವಿನ ಸಂಭ್ಯಾವತೆ ಶೇ. 80ರಷ್ಟು ತಗ್ಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ರೀತಿ ಬಯೋ-ಎನ್-ಟೆಕ್ ಫೈಜರ್ ಲಸಿಕೆ ಒಂದು ಡೋಸ್ ತೆಗೆದುಕೊಂಡರೂ ಇದೇ ಪ್ರಮಾಣದಲ್ಲಿ ಅದು ಕೆಲಸ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಂಡ ನಂತರ ಸಾವಿನ ಸಂಭಾವ್ಯತೆ ಶೇ. 97ರಷ್ಟು ತಗ್ಗುತ್ತದೆ

ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಂಡ ನಂತರ ಸಾವಿನ ಸಂಭಾವ್ಯತೆ ಶೇ. 97ರಷ್ಟು ತಗ್ಗುತ್ತದೆ

ಇನ್ನು, ಕೋವಿಶೀಲ್ಡ್ ಎರಡನೇ ಡೋಸ್ ತೆಗೆದುಕೊಂಡ ನಂತರವಂತೂ ಸಾವಿನ ಸಂಭಾವ್ಯತೆ ಶೇ. 97ರಷ್ಟು ತಗ್ಗುತ್ತದೆ ಎನ್ನುವ ವರದಿಯನ್ನು ದಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ನೀಡಿದೆ. ಕೋವಿಶೀಲ್ಡ್ ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ನಡೆಸಿದ ಮೊದಲ ಅಧ್ಯಯನ ಇದಾಗಿದೆ.

 ಬ್ರಿಟನ್ ಸರಕಾರದ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆಯ ನೊಂದಾಯಿತ ಏಜೆನ್ಸಿ

ಬ್ರಿಟನ್ ಸರಕಾರದ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆಯ ನೊಂದಾಯಿತ ಏಜೆನ್ಸಿ

ದಿ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಸಂಸ್ಥೆ, ಬ್ರಿಟನ್ ಸರಕಾರದ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆಯ ನೊಂದಾಯಿತ ಏಜೆನ್ಸಿಯಾಗಿದೆ. ಡಿಸೆಂಬರ್ -ಏಪ್ರಿಲ್ ವೇಳೆ ವ್ಯಾಕ್ಸಿನ್ ತೆಗೆದುಕೊಂಡ ಜನರನ್ನು ಆಧರಿಸಿ ನಡೆಸಿದ ಅಧ್ಯಯನದ ವರದಿಯಾಗಿದೆ.

English summary
How effective is the Covishield after the 1st and 2nd dose: Study report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X