ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ನೋವಾವ್ಯಾಕ್ಸ್ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ಏನು ಹೇಳುತ್ತೆ?

|
Google Oneindia Kannada News

ನವದೆಹಲಿ, ಜೂನ್ 16: ಕೋವಿಡ್ 19 ವಿರುದ್ಧದ ನೋವಾವ್ಯಾಕ್ಸ್ ಲಸಿಕೆಯ ಪರಿಣಾಮಕಾರಿತ್ವದ ದತ್ತಾಂಶವು ಭರವಸೆ ಮೂಡಿಸಿದೆ ಹಾಗೂ ಅದರ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ.

ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಮಾತನಾಡಿ ''ನಮಗೆ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ ನೋವಾವ್ಯಾಕ್ಸ್ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ''.

ರೂಪಾಂತರಗಳ ವಿರುದ್ಧವೂ ನೋವಾವ್ಯಾಕ್ಸ್‌ 90% ಪರಿಣಾಮಕಾರಿ; ವರದಿರೂಪಾಂತರಗಳ ವಿರುದ್ಧವೂ ನೋವಾವ್ಯಾಕ್ಸ್‌ 90% ಪರಿಣಾಮಕಾರಿ; ವರದಿ

ಅಮೆರಿಕ ಹಾಗೂ ಮೆಕ್ಸಿಕೋದಲ್ಲಿ ಸುಮಾರು 30,000 ಮಂದಿಗೆ ಈ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ಅದರ ಅನ್ವಯ ಲಸಿಕೆ ಕೋವಿಡ್ ಸೋಂಕಿನ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ ಎಂದು ಕಂಪನಿ ಹೇಳಿಕೊಂಡಿದೆ.

How Effective Is Novavax COVID-19 Vaccine

ಇನ್ನು ಕಂಪನಿಯ ಮೇರಿಲ್ಯಾಂಡ್ ಪ್ರಧಾನ ಕಚೇರಿಯು 2021ರ ಮೂರನೇ ತ್ರೈಮಾಸಿಕದೊಳಗೆ ವಿಶ್ವಾದ್ಯಂತ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅನುಮೋದಿಸುವಂತೆ ಔಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಲು ಉದ್ದೇಶಿಸಲಾಗಿದೆ.

ಔಷಧ ನಿಯಂತ್ರಕರ ಎಲ್ಲಾ ರೀತಿಯಾನುಮೋದನೆಯನ್ನು ಪಡೆದುಕೊಳ್ಳಲು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಅತಿ ಶೀಘ್ರದಲ್ಲಿ ವಿಶ್ವದೆಲ್ಲೆಡೆ ಈ ಲಸಿಕೆಯ ಬಳೆಯಾಗುವುದನ್ನು ನಾವು ಎದುರುನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಲಸಿಕೆಯ ಸಂಗ್ರಹಣೆ ಬಗ್ಗೆ ನೋವಾವ್ಯಾಕ್ಸ್ ಮಾಹಿತಿ ನೀಡಿದ್ದು, 2 ಡಿಗ್ರಿ ಸೆಲ್ಸಿಯಸ್‌ನಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಇಡಬಹುದು ಹಾಗೂ ಸುಲಭವಾಗಿ ಸಾಗಿಸಬಹುದು ಎಂದು ಹೇಳಲಾಗಿದೆ.

ನೋವಾವ್ಯಾಕ್ಸ್ ಪ್ರೊಟೀನ್ ಆಧಾರಿತ ಕೋವಿಡ್ 19 ಲಸಿಕೆ ಪ್ರಮುಖ ರೂಪಾಂತರದ ವಿರುದ್ಧ ಶೇ.90.4ರಷ್ಟು ಪರಿಣಾಮಕಾರಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
The government said the efficacy data of Novavax vaccine against Covid-19 is promising and encouraging and its clinical trials are in an advanced stage of completion in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X