ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ

By Mahesh
|
Google Oneindia Kannada News

ಚಂಡಮಾರುತಗಳ ಹೆಸರನ್ನು ಕೇಳಿದರೆ ಏಕೆ ಚೆಂದದ ಹೆಸರು ನೀಡುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಲೈಲಾ, ಫೇಟ್, ಗಿರಿ, ಐಲಾ, ಫಾನ್ ಭಾರತದಲ್ಲಿ ಕಾಣಿಸಿಕೊಂಡಿತ್ತು. ಅಮೆರಿಕದಲ್ಲಿ ಕತ್ರೀನಾ ಹರಿಕೇನ್ ಡ್ಯಾನ್ಸ್ ಮಾಡಿದ್ದಳು. ನಂತರ ಫೈಲಿನ್, ಹುಡ್ ಹುಡ್ ನೋಡಿಯಾಗಿದೆ.

ಭಾರತ ಹವಾಮಾನ ಇಲಾಖೆ (IMD) ಚಂಡಮಾರುತಗಳಿಗೆ ಹೆಸರಿಡಲು ಆರಂಭಿಸಿದ್ದು ತೀರಾ ಇತ್ತೀಚೆಗೆ ಎನ್ನಬಹುದು. ಕಳೆದ ಎರಡು ವರ್ಷಗಳಿಂದಚಂಡಮಾರುತಗಳಿಗೆ ಹೆಸರಿಡಲು ಆರಂಭಿಸಿದ್ದೇವೆ. ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಬಳಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. [ಆಂಧ್ರ, ಒಡಿಶಾ ಕರಾವಳಿಯಲ್ಲಿ ಹುಡ್ ಹುಡ್]

ವಿದೇಶಗಳಲ್ಲಿ ಚಂಡಮಾರುತಗಳಿಗೆ ಹೆಸರಿಡುವುದು ಸ್ವಲ್ಪ ಕಷ್ಟದ ಕೆಲಸ ಎಂದೇ ಭಾವಿಸಲಾಗಿದೆ. ವರ್ಷದಲ್ಲಿ ಅನೇಕ ಬಾರಿ ಚಂಡಮಾರುತ ಕಾಣಿಸಿಕೊಳ್ಳುವುದು ಹೀಗೆ ನಾನಾ ತೊಂದರೆಗಳಿವೆ. ಅದರೆ, ಭಾರತದ ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಏಳುವ ಭಾರಿ ಅಲೆಗಳಿಗೆ ಸುಲಭವಾಗಿ ಹೆಸರಿಡುವುದನ್ನು ಇಲಾಖೆ ಅಭ್ಯಾಸ ಮಾಡಿಕೊಂಡಿದೆ. [ಚಿತ್ರಗಳಲ್ಲಿ ನೋಡಿː ವಿಶಾಖಪಟ್ಟಣದಲ್ಲಿ ಹುಡ್ ಹುಡ್ ಹಾವಳಿ]

ಸಾಮಾನ್ಯವಾಗಿ ಸ್ತ್ರೀನಾಮಗಳನ್ನೇ ಹೆಚ್ಚಾಗಿ ಚಂಡ ಮಾರುತಗಳಿಗೆ ಇಡಲಾಗುತ್ತದೆ. ಅದರೆ, ಈ ಬಾರಿ ಪಕ್ಷಿಯ ಹೆಸರನ್ನು ಹುಡ್ ಹುಡ್ ಗೆ ನೀಡಲಾಗಿದೆ. ಬುಲ್ ಬುಲ್, ಚಿಟ್ಟೆಗಳ ಹೆಸರನ್ನು ಸೂಚಿಸಲಾಗುತ್ತದೆ. ಹಿಂದೂ ಮಹಾ ಸಾಗರವನ್ನು ಹಂಚಿಕೊಂಡಿರುವ ರಾಷ್ಟ್ರಗಳು ಒಂದೊಂದಾಗಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಗಿಟ್ಟಿಸುತ್ತಾರೆ.

ಒಂದೇ ಬಗೆಯ ವಿಧಾನದಲ್ಲಿ ಹೆಸರಿಡುತ್ತಾರಾ?

ಒಂದೇ ಬಗೆಯ ವಿಧಾನದಲ್ಲಿ ಹೆಸರಿಡುತ್ತಾರಾ?

ಚಂಡಮಾರುತಗಳಿಗೆ ಹೆಸರಿಡಲು ಒಂದೇ ಬಗೆಯ ವಿಧಾನ ಅನುಸರಿಸುವುದಿಲ್ಲ. ವಿವಿಧ ರೀತಿ ವ್ಯವಸ್ಥೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಕ್ಯಾಥೊಲಿಕ್ ಸಂತರ ಹೆಸರುಗಳನ್ನು ಬಳಸಲಾಗುತ್ತದೆ. ನಂತರ ಚಂಡಮಾರುತ ಮೇಲೇಳುವ ಪ್ರದೇಶದ ಅಕ್ಷಾಂಶ, ರೇಖಾಂಶಗಳ ಅಂಕಿ ಅಂಶ ಆಧಾರದ ಮೇಲೆ ಹೆಸರಿಡಲು ಆರಂಭಿಸಲಾಯಿತು. ಅದರೆ, ಇದು ವಿಜ್ಞಾನಿಗಳಿಗೆ ಕೊಂಚ ತ್ರಾಸದಾಯಕ ವ್ಯವಸ್ಥೆಯಾಗಿ ಕಂಡು ಬಂದಿತು.

ಹುಡ್ ಹುಡ್ ಹೆಸರೇ ವಿಶಿಷ್ಟ

ಹುಡ್ ಹುಡ್ ಹೆಸರೇ ವಿಶಿಷ್ಟ

ಹುಡ್'ಹುಡ್ ಚಂಡಮಾರುತ ಹುಟ್ಟಿದ್ದು ಅಕ್ಟೋಬರ್ 6ರಂದು ಅಂಡಮಾನ್ ಸಮುದ್ರದಲ್ಲಿ ಬೆಳೆದಿದ್ದು ಅ.12ರ ಹೊತ್ತಿಗೆ ಪ್ರಕರತೆ ತೋರಿದ್ದು ಮಧ್ಯಾಹ್ನದ ವೇಳೆಗೆ ಭಾರತದ ವಿಶಾಖ ಪಟ್ಟಣಂ ಹಾಗೂ ಶ್ರೀಕಾಕುಳಂ ಒಡಿಶಾದ ಗೋಪಾಲಪುರಂ ಸೇರಿದಂತೆ ಪೂರ್ವ ಕರಾವಳಿಯಲ್ಲಿ ರುದ್ರ ನರ್ತನ ಮಾಡಿ ಉತ್ತರದ ಕಡೆಗೆ ಸಾಗಿತು.

ಹುಡ್‌ಹುಡ್ ಎಂಬುದು ಅರೇಬಿಕ್ ಭಾಷೆಯ ಪದವಾಗಿದ್ದು. ಹೂಪೋ(ಚಂದ್ರಮುಕುಟ ಪಕ್ಷಿ ರೀತಿ) ಎಂಬ ಪಕ್ಷಿಯನ್ನು ಇದು ಸೂಚಿಸುತ್ತದೆ. ಮಧ್ಯಪ್ರಾಚ್ಯದ ಪೌರಾಣಿಕ ಕಥೆಯಲ್ಲಿ ಬರುವ ಈ ಪಕ್ಷಿಯ ಹೆಸರನ್ನು ಚಂಡಮಾರುತಕ್ಕೆ ಇಡಲಾಗಿದೆ. ಭಾನುವಾರ ಆಂಧ್ರ, ಒಡಿಶಾ ಕರಾವಳಿಗೆ ಅಪ್ಪಳಿಸಲಿರುವ ಚಂಡಮಾರುತಕ್ಕೆ ಹುಡ್‌ಹುಡ್ ಎಂಬ ಹೆಸರನ್ನು ಸೂಚಿಸಿದ್ದ ಒಮನ್.

ಚಂಡಮಾರುತಗಳಿಗೆ ಮಹಿಳೆಯ ಹೆಸರು ಏಕೆ?

ಚಂಡಮಾರುತಗಳಿಗೆ ಮಹಿಳೆಯ ಹೆಸರು ಏಕೆ?

ಇದು ಕೂಡಾ ಕುತೂಹಲಕಾರಿಯಾಗಿದೆ.ಚಂಡಿಯಂತೆ ಆಡುವ ಮಾರುತಗಳಿಗೆ ಸ್ತ್ರೀಲಿಂಗ ನಾಮಗಳೇ ಇದೆ ಏಕೆ? ಎಂಬ ಪ್ರಶ್ನೆ ಥಟ್ಟನೆ ಬರುವುದು ಸಹಜ.

ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು.

WMO ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಬದಲಾಯಿಸುತ್ತಾ ಹೋಗಲು ನಿರ್ಧರಿಸಿತು. ಇದು ಕೂಡಾ ಚಂಡಮಾರುತ ಹೊಡೆತಕ್ಕೆ ಸಿಲುಕಿದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು WMO ಸೂಚಿಸುತ್ತಾ ಬಂದಿದೆ.

ಒಂದೇ ಹೆಸರು ಮತ್ತೆ ಬಳಸಬಹುದೇ?

ಒಂದೇ ಹೆಸರು ಮತ್ತೆ ಬಳಸಬಹುದೇ?

ಸ್ತ್ರೀನಾಮವಾಗಲಿ, ಪುರುಷನಾಮವಾಗಲಿ, ಹುಡ್ ಹುಡ್ ನಂತೆ ಪಕ್ಷಿ ಹೆಸರಾಗಲಿ ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.ಭಾರತದಲ್ಲಿ ಸದ್ಯಕ್ಕೆ ಈ ವ್ಯವಸ್ಥೆ ಸಂಪೂರ್ಣ ಜಾರಿಯಾಗಿಲ್ಲ.

ಪುರುಷರ ಹೆಸರನ್ನು ಕೆಲವೊಮ್ಮೆ ಬಳಸಿದ್ದುಂಟು

ಪುರುಷರ ಹೆಸರನ್ನು ಕೆಲವೊಮ್ಮೆ ಬಳಸಿದ್ದುಂಟು

70ರ ದಶಕದ ಕೊನೆಗೆ ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಫ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ಚಂಡಮಾರುತದ ಹೊಡೆತಕ್ಕೆ ಸಿಕ್ಕ ರಾಷ್ಟ್ರಗಳ ಭಾಷೆ ಆಧಾರಿಸಿ ಹೆಸರುಗಳನ್ನು ಸೂಚಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಯುಎಸ್ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

WMO ಸುಮಾರು 6 ಪಟ್ಟಿ ಹೊಂದಿದೆ

WMO ಸುಮಾರು 6 ಪಟ್ಟಿ ಹೊಂದಿದೆ

ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ(WMO) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( Q, U, X, Y ಹಾಗೂ Z ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ. 2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಧಿಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ.

ಹೆಸರಿಡುವುದು ಅಷ್ಟು ಸುಲಭದ ಮಾತಲ್ಲ

ಹೆಸರಿಡುವುದು ಅಷ್ಟು ಸುಲಭದ ಮಾತಲ್ಲ

ಕೆಲವೊಮ್ಮೆ ಹೆಸರಿಡುವ ಗೊಂದಲದಲ್ಲಿ ಚಂಡಮಾರುತಗಳಿಗೂ 'ಐಡೆಂಟಿಟಿ' ಬಿಕ್ಕಟ್ಟು ತಲೆ ದೋರುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ ಕಷ್ಟ ಎನ್ನುತ್ತಾರೆ ತಜ್ಞರು.

English summary
How do tropical storms/hurricanes get their names? Super storm will came and cause large-scale devastation across the coastal region. Sandy, Nilam, Giri, Aila, phailin, Hud Hud cyclone always get interesting names but there is scientific theory also to support it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X