ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವೇ: ಅಮೆರಿಕಾದಲ್ಲಿ ಪ್ರಧಾನಿ ಮೋದಿ, ಬಿಜೆಪಿ ಹಿರಿಮೆಗೆ ಮತ್ತೊಂದು ಗರಿ: ಆದರೆ..

|
Google Oneindia Kannada News

ವಿಶ್ವದ ಎಲ್ಲಾ ದೇಶಗಳು ಅಮೆರಿಕಾ ಜೊತೆಗಿನ ದ್ವಿಪಕ್ಷೀಯ ಸಂಬಂಧ ಚೆನ್ನಾಗಿರಬೇಕೆಂದು ಬಯಸುತ್ತವೆ, ಯಾಕೆಂದರೆ ಆ ದೇಶಕ್ಕಿರುವ ಶಕ್ತಿಯೇ ಅಂತದ್ದು. ಅಮೆರಿಕಾದ ಅಧ್ಯಕ್ಷರಾದ ನಂತರ ಜೋ ಬೈಡೆನ್ ಮೊದಲ ಬಾರಿಗೆ ಪ್ರಧಾನಿ ಮೋದಿ ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಅಮೆರಿಕಾದಲ್ಲಿ ಭಾರತೀಯರು ಶೇ. ಒಂದಕ್ಕಿಂತ ಹೆಚ್ಚು, ರಿಜಿಸ್ಟರ್ಡ್ ವೋಟರ್ ಶೇ. ಒಂದಕ್ಕಿಂತ ಕಮ್ಮಿ ಸಂಖ್ಯೆಯಲ್ಲಿದ್ದಾರೆ. ಅಮೆರಿಕಾದಲ್ಲಿ ವಾಸಿಸುವ ಭಾರತೀಯರು ಪ್ರಬಾವೀ ಸಮುದಾಯದವರಾಗಿದ್ದಾರೆ. ಹಾಗಾಗಿ, ಅಮೆರಿಕಾದ ನೂತನ ಕ್ಯಾಬಿನೆಟ್ ಗೆ ಹಲವು ಭಾರತೀಯ ಮೂಲದವರ ನೇಮಕವಾಗಿದೆ. ಅಲ್ಲಿನ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಕೂಡಾ ಚೆನ್ನೈ ಮೂಲದವರು.

ಕೃಷಿ ಸುಧಾರಣೆ ಅವಶ್ಯಕ; ಕಾಯ್ದೆಗಳು ರೈತರಿಗೆ ಆಯ್ಕೆಯಾಗಲಿವೆ; ಮೋದಿಕೃಷಿ ಸುಧಾರಣೆ ಅವಶ್ಯಕ; ಕಾಯ್ದೆಗಳು ರೈತರಿಗೆ ಆಯ್ಕೆಯಾಗಲಿವೆ; ಮೋದಿ

ಇಂಡಿಯನ್ ಅಮೆರಿಕನ್ ಆಟಿಟ್ಯೂಡ್ ಸರ್ವೇ (ಐಎಎಎಸ್) ಕಳೆದ ಮಂಗಳವಾರ (ಫೆ 9) ಬಿಡುಗಡೆಯಾಗಿದೆ. ಕಾರ್ನೇಜ್ ಎಂಡೋಮೆಂಟ್, ಜಾನ್ಸ್ ಹೋಪ್ಕಿನ್ಸ್, ಪೆನಿನ್ಸುಲಾ ವಿವಿ,ಯುವ್ ಗವ್ ಜಂಟಿಯಾಗಿ ನಡೆಸಿದ ಸಮೀಕ್ಷೆ ಇದಾಗಿದೆ.

 ಏನಿದು ಏನಿದು "ಆಂದೋಲನ ಜೀವಿ"? ಮೋದಿ ಬಳಸಿದ ಈ ಪದಕ್ಕೆ ಕಾಂಗ್ರೆಸ್ಸಿಗರ ಬಾಣ

ಸೆಪ್ಟಂಬರ್ ಒಂದರಿಂದ ಇಪ್ಪತ್ತರ ಅವಧಿಯಲ್ಲಿ ನಡೆಸಲಾದ ಸಮೀಕ್ಷೆ ಇದಾಗಿದೆ. ಅಮೆರಿಕಾದ ಮೇಲೆ ಪರಿಣಾಮ ಬೀರುವ ಭಾರತ-ಅಮೆರಿಕಾ ದ್ವಿಪಕ್ಷೀಯ ಸಂಬಂಧ, ಬಿಜೆಪಿ, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮುಂತಾದ ವಿಚಾರಗಳನ್ನು ಸರ್ವೇಯಲ್ಲಿ ಕೇಳಲಾಗಿದೆ.

ಮೋದಿ ಆಡಳಿತದ ಕಾರ್ಯವೈಖರಿ ತೃಪ್ತಿ ತಂದಿದೆಯೇ

ಮೋದಿ ಆಡಳಿತದ ಕಾರ್ಯವೈಖರಿ ತೃಪ್ತಿ ತಂದಿದೆಯೇ

ಪ್ರಧಾನಿ ಮೋದಿ ಆಡಳಿತದ ಕಾರ್ಯವೈಖರಿ ತೃಪ್ತಿ ತಂದಿದೆಯೇ ಎನ್ನುವ ಪ್ರಶ್ನೆಗೆ ಶೇ. 49ರಷ್ಟು ಜನ ಯೆಸ್, ಶೇ. 31ರಷ್ಟು ಜನ ನೋ ಅಂದಿದ್ದಾರೆ. ಇದರಲ್ಲಿ ಬಹುತೇಕರು ಅಮೆರಿಕಾದಲ್ಲಿ ಜನಿಸದ ಭಾರತೀಯ-ಅಮೆರಿಕನ್ನರು, ರಿಪಬ್ಲಿಕ್ ಪಕ್ಷದ ಬೆಂಬಲಿಗರು, ಹಿಂದೂಗಳು ಮತ್ತು ಇಂಜಿನಿಯರ್ ಪದವೀಧರರು ಆಗಿದ್ದಾರೆ. ಇನ್ನು ಬಿಜೆಪಿಯನ್ನು ಬೆಂಬಲಿಸುವವರು ಶೇ. 32, ಕಾಂಗ್ರೆಸ್ ಅನ್ನು ಬೆಂಬಲಿಸುವವರು ಶೇ. 12.

ಯಾವ ರಾಜಕೀಯ ಪಕ್ಷ ಹೆಚ್ಚು ಜನಪ್ರಿಯ

ಯಾವ ರಾಜಕೀಯ ಪಕ್ಷ ಹೆಚ್ಚು ಜನಪ್ರಿಯ

ಇನ್ನು ರಾಜಕೀಯ ಪಕ್ಷ ಮತ್ತು ಮುಖಂಡರ ವಿಚಾರಕ್ಕೆ ಬಂದಾಗ ಪ್ರಧಾನಿ ಮೋದಿಗೆ 58 ರೇಟಿಂಗ್, ಬಿಜೆಪಿಗೆ 57, ಆರ್ ಎಸ್ ಎಸ್ ಗೆ 46, ಕಾಂಗ್ರೆಸ್ಸಿಗೆ 44 ಮತ್ತು ರಾಹುಲ್ ಗಾಂಧಿಗೆ 38 ರೇಟಿಂಗ್ ನೀಡಿದ್ದಾರೆ. ಇನ್ನು ಶೇ. 36ರಷ್ಟು ಜನ ಭಾರತ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಹೇಳಿದರೆ, ಶೇ. 39ರಷ್ಟು ಮಂದಿ ಸರಕಾರ ದಿಕ್ಕು ತಪ್ಪುತ್ತಿದೆ ಎನ್ನುವ ಅಭಿಪ್ರಾಯವನ್ನು ಪಟ್ಟಿದ್ದಾರೆ. ಬಿಜೆಪಿ ಜನಪ್ರಿಯ ಪಕ್ಷವಾಗಿದೆ.

ಮಿಲಿಟರಿ ಬಲಾಢ್ಯಗೊಳಿಸಲು ಅಮೆರಿಕಾ ಭಾರತಕ್ಕೆ ಸಹಾಯ ಮಾಡಬೇಕು

ಮಿಲಿಟರಿ ಬಲಾಢ್ಯಗೊಳಿಸಲು ಅಮೆರಿಕಾ ಭಾರತಕ್ಕೆ ಸಹಾಯ ಮಾಡಬೇಕು

ಇನ್ನು, ಶೇ. 53ರಷ್ಟು ಮಂದಿ ಭಾರತದ ಮಿಲಿಟರಿ ಬಲಾಢ್ಯಗೊಳಿಸಲು ಅಮೆರಿಕಾವು ಭಾರತಕ್ಕೆ ಸಹಾಯ ಮಾಡಬೇಕು ಎನ್ನುವ ಅಭಿಪ್ರಾಯವನ್ನು ಪಟ್ಟಿದ್ದಾರೆ. ಇನ್ನು, ಶೇ. 70ರಷ್ಟು ಮಂದಿ (ಸರ್ವೇಯಲ್ಲಿ ಭಾಗವಹಿಸಿದ್ದವರು) ಭಾರತ ಮತ್ತು ಮೋದಿಯ ಹೆಸರನ್ನು ಕೇಳಿದವರಾಗಿದ್ದರೆ, ಶೇ. 60ಷ್ಟು ಮಂದಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ, ಮತ್ತು, ಶೇ. 41ರಷ್ಟು ಜನ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಕೇಳಿದ್ದಾರೆ.

ಶಾಂತಿಯುತ ಪ್ರತಿಭಟನೆಯ ವಿರುದ್ದ ಸರಕಾರದ ಅಸ್ತ್ರ

ಶಾಂತಿಯುತ ಪ್ರತಿಭಟನೆಯ ವಿರುದ್ದ ಸರಕಾರದ ಅಸ್ತ್ರ

ಇನ್ನು ಭಾರತದ ಯಾವ ಮಾಧ್ಯಮ ಇವರಿಗೆ ಚಿರಪರಿಚಿತ ಎನ್ನುವ ಪ್ರಶ್ನೆಗೆ ಟೈಮ್ಸ್ ಗ್ರೂಪ್ ಮೊದಲ ಸ್ಥಾನದಲ್ಲಿ, ನಂತರದ ಸ್ಥಾನ ಎನ್ ಡಿಟಿವಿ, ಆಜ್ ತಕ್ ಮತ್ತು ರಿಪಬ್ಲಿಕ್ ಟಿವಿ ಸ್ಥಾನ ಪಡೆದಿದೆ. ಇನ್ನು ಶಾಂತಿಯುತ ಪ್ರತಿಭಟನೆಯ ವಿರುದ್ದ ಸರಕಾರ ಅಸ್ತ್ರ ಪ್ರಯೋಗಿಸಿದ್ದು, ಮಾಧ್ಯಮಗಳ ಮೇಲಿನ ದಬ್ಬಾಳಿಕೆಯ ವಿರುದ್ದ ಶೇ. 68-39ರಷ್ಟು ಜನ ವಿರೋಧ ವ್ಯಕ್ತ ಪಡಿಸಿದ್ದಾರೆ.

English summary
How Do Indian Americans View India? Results From the 2020 Indian American Attitudes Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X