ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಪ್ತಚರ ಮಾಹಿತಿ ಇದ್ದೂ ಅಮರನಾಥ ದಾಳಿ ನಡೆದಿದ್ದು ಹೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಜುಲೈ 12: ಆಗಿನ್ನೂ ಅಮರನಾಥ ಯಾತ್ರೆಗೆ 1 ವಾರ ಇತ್ತು. ಅದಾಗಲೇ ಗುಪ್ತಚರ ಇಲಾಖೆ ಯಾತ್ರೆಯ ಸಮಯದಲ್ಲಿ ಲಷ್ಕರ್ ಇ ತಯ್ಯಬಾದ ಉಗ್ರರಿಂದ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿತ್ತು.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆರೆಸ್ಸೆಸ್ ವಾಗ್ದಾಳಿನರೇಂದ್ರ ಮೋದಿ ಸರ್ಕಾರದ ವಿರುದ್ಧ ಆರೆಸ್ಸೆಸ್ ವಾಗ್ದಾಳಿ

ಹೀಗಿದ್ದೂ ದಾಳಿ ನಡೆದಿದ್ದು ಹಲವರನ್ನು ಅಚ್ಚರಿಗೆ ಕೆಡವಿದೆ. ಆದರೆ ಇದಕ್ಕೆ ಭದ್ರತಾ ಅಧಿಕಾರಿಗಳು ಹೇಳುವುದೇ ಬೇರೆ. ಅವರ ಪ್ರಕಾರ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿತ್ತು. ಮತ್ತು ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು.

How did terrorists attack Amarnath yatra despite specific intel?

ಈ ಕುರಿತು ಹೇಳಿಕೆ ನೀಡಿರುವ ಸಿಆರ್'ಪಿಎಫ್ ಡಿಜಿ ಆರ್.ಆರ್ ಭಟ್ನಾಗರ್, "ಅಮರನಾಥ ದೇವಸ್ಥಾನ ಮಂಡಳಿಯ ಬಳಿಯಲ್ಲಿ ಭಕ್ತರು ನೋಂದಣಿ ಮಾಡಿಕೊಂಡಿರಲಿಲ್ಲ. ಮತ್ತು ಭದ್ರತಾ ಪಡೆಗಳಿಂದ ಭದ್ರತೆ ಒದಗಿಸುವ ತಂಡದಲ್ಲಿಯೂ ಅವರು ಇರಲಿಲ್ಲ. ಮಾತ್ರವಲ್ಲ ಸಂಜೆ 7 ಗಂಟೆ ನಂತರ ಭಕ್ತರು ಓಡಾಟ ನಡೆಸಬಾರದು ಎಂದಿದ್ದ ಕರ್ಫೂವನ್ನೂ ಅವರು ಉಲ್ಲಂಘಿಸಿದ್ದರು," ಎಂದು ಮಾಹಿತಿ ನೀಡಿದ್ದಾರೆ.

ಅಮರನಾಥ್ ಉಗ್ರರ ದಾಳಿಯಲ್ಲಿ ರಾಜಕೀಯ ಲಾಭನಷ್ಟದ ದುರ್ವಾಸನೆಅಮರನಾಥ್ ಉಗ್ರರ ದಾಳಿಯಲ್ಲಿ ರಾಜಕೀಯ ಲಾಭನಷ್ಟದ ದುರ್ವಾಸನೆ

ಇನ್ನು ಇಲ್ಲಿ ಯಾರನ್ನೂ ದೂರುತ್ತಾ ಕೂತರೆ ಆಗುವುದಿಲ್ಲ. ಸ್ವಲ್ಪ ಸಮಸ್ಯೆಯಾಗಿದ್ದು ನಿಜ. ಈ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾತ್ರವಲ್ಲ ಆದಷ್ಟು ಬೇಗ ದಾಳಿ ನಡೆಸಿದ ಉಗ್ರರನ್ನು ಬಂಧಿಸಬೇಕಾದ ಸವಾಲೂ ನಮ್ಮ ಮುಂದಿದೆ ಎಂದಿದ್ದಾರೆ.

English summary
A week before the Amarnath yatra commenced, there was a specific intelligence warning about the same being under threat from the Lashkar-e-Tayiba. The alert was too specific in nature and even warned that it would the Lashkar which will carry out the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X