ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಲಕ್ಷದಿಂದ‌ ಲಕ್ಷಕ್ಕೆ ಏರುತ್ತಿರುವ ಗ್ರಾಫ್ ಹೀಗಿದೆ

|
Google Oneindia Kannada News

ನವದೆಹಲಿ, ಜುಲೈ.07: ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಇದೀಗ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಿಕೆಯಾಗಿದೆ.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

ಎರಡು ದಿನಗಳ ಹಿಂದೆಯಷ್ಟೇ ರಷ್ಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇದೀಗ 7 ಲಕ್ಷದ ಗಡಿಯನ್ನೂ ದಾಟಿದೆ. ಗುಣಮುಖರ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ಸಾವಿನ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?ಕೊರೊನಾವೈರಸ್ ಸೋಂಕಿತರಲ್ಲಿ ಗೋಚರಿಸುವ ಲಕ್ಷಣಗಳು ಯಾವುವು?

ಮಂಗಳವಾರದ ಮಧ್ಯಾಹ್ನದ ವೇಳೆಗೆ ಕೊರೊನಾವೈರಸ್ ಸೋಂಕಿತರ ಅಂಕಿ-ಅಂಶವನ್ನು ನೋಡುವುದಾದರೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,22,007ಕ್ಕೆ ಏರಿಕೆಯಾಗಿದ್ದು, 1661 ಹೊಸ ಪ್ರಕರಣಗಳು ಪತ್ತೆಯಾಗಿವೆ. 20,185 ಜನರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. 4,40,287 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದರೆ, 2,61,535 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಕೊವಿಡ್-19 ಸೋಂಕಿತರ ಸಂಖ್ಯೆ 7 ಲಕ್ಷ ಮೀರಿದ್ದು ಹೇಗೆ?

ಕೊವಿಡ್-19 ಸೋಂಕಿತರ ಸಂಖ್ಯೆ 7 ಲಕ್ಷ ಮೀರಿದ್ದು ಹೇಗೆ?

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಆರಂಭದಲ್ಲಿ ಯಾವುದೇ ರೀತಿ ಆತಂಕವನ್ನು ಹುಟ್ಟಿಸಿರಲಿಲ್ಲ. ಮಾರ್ಚ್.24ರಿಂದ ದೇಶದಲ್ಲಿ ಲಾಕ್ ಡೌನ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಎರಡು ಬಾರಿ ಲಾಕ್ ಡೌನ್ ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿ ದೇಶಾದ್ಯಂತ ಗರಿಷ್ಠ 2 ಸಾವಿರ ಸೋಂಕಿತ ಪ್ರಕರಣಗಳು ಪ್ರತಿನಿತ್ಯ ಪತ್ತೆಯಾಗುತ್ತಿದ್ದವು. ಆದರೆ ಭಾರತ ಅನ್ ಲಾಕ್ ಆಗುತ್ತಿದ್ದಂತೆ ಇಡೀ ದೇಶದ ಚಿತ್ರಣವೇ ಬದಲಾಗಿ ಬಿಟ್ಟಿದೆ. ಮೇ.19ರ ವೇಳೆಯಲ್ಲಿ 1 ಲಕ್ಷದ ಆಸುಪಾಸಿನಲ್ಲಿದ್ದ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಜುಲೈ.07ರ ವೇಳೆ 7 ಲಕ್ಷದ ಗಡಿಯನ್ನೂ ದಾಟಿ ಹೋಗಿದೆ.

1 ರಿಂದ 2 ಲಕ್ಷ ಸೋಂಕಿತರ ಸಂಖ್ಯೆ ಏರಲು 15 ದಿನ

1 ರಿಂದ 2 ಲಕ್ಷ ಸೋಂಕಿತರ ಸಂಖ್ಯೆ ಏರಲು 15 ದಿನ

ಭಾರತದಲ್ಲಿ ಮೊದಲ ಕೊರೊನಾವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿ 110 ದಿನಗಳ ನಂತರದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು ಒಂದು ಲಕ್ಷದ ಗಡಿದೆ ತಲುಪಿತ್ತು. ಅದಾಗಿ 15 ದಿನಕ್ಕೆ 1 ಲಕ್ಷದಿಂದ ಸೋಂಕಿತರ ಸಂಖ್ಯೆ 2 ಲಕ್ಷದ ಸಂಖ್ಯೆಯನ್ನು ಮೀರಿತ್ತು. ಅಂದರೆ ಮೇ.19ರ ವೇಳೆಯಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1,01,139ರಷ್ಟಿತ್ತು. ಆದರೆ ಜೂನ್.03ರಷ್ಟರಲ್ಲೇ 2,07,615 ಮಂದಿಗೆ ಮಹಾಮಾರಿ ಅಂಟಿಕೊಂಡಿತ್ತು.

COVID-19: ರಷ್ಯಾ ಮೀರಿ ಬೆಳೆದ ಭಾರತ, ಯಾವ ದೇಶದಲ್ಲಿ ಎಷ್ಟು ಸೋಂಕಿತರು?COVID-19: ರಷ್ಯಾ ಮೀರಿ ಬೆಳೆದ ಭಾರತ, ಯಾವ ದೇಶದಲ್ಲಿ ಎಷ್ಟು ಸೋಂಕಿತರು?

2 ರಿಂದ 3 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಲು 10 ದಿನ

2 ರಿಂದ 3 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಲು 10 ದಿನ

ಮೊದಲು 1 ಲಕ್ಷದಿಂದ 2 ಲಕ್ಷಕ್ಕೆ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುವುದಕ್ಕೆ 15 ದಿನಗಳು ಬೇಕಾಗಿತ್ತು. ತದನಂತರದ ಹತ್ತೇ ದಿನದಲ್ಲಿ 2 ಲಕ್ಷದಿಂದ 3 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಯಿತು. ಅಂದರೆ ಜೂ.03ರಂದು 2,07,615ರಷ್ಟಿದ್ದ ಸೋಂಕಿತರ ಸಂಖ್ಯೆಯು ಜೂನ್.13ರ ವೇಳೆಗೆ 3,08,993ಕ್ಕೆ ಏರಿಕೆಯಾಗಿತ್ತು.

ನಾಲ್ಕು ಲಕ್ಷದ ಗಡಿ ದಾಟಲು ಎಂಟು ದಿನ

ನಾಲ್ಕು ಲಕ್ಷದ ಗಡಿ ದಾಟಲು ಎಂಟು ದಿನ

ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇಮ್ಮಡಿಯಾಗುವುದಕ್ಕೆ ಆರಂಭದಲ್ಲಿ 15 ದಿನ, ನಂತರದಲ್ಲಿ 10 ದಿನ ಬೇಕಾಯಿತು. ಆದರೆ 3 ರಿಂದ ನಾಲ್ಕು ಲಕ್ಷಕ್ಕೆ ಸೋಂಕಿತರ ಸಂಖ್ಯೆ ಕೇವಲ ಎಂಟು ದಿನದಲ್ಲಿ ಏರಿಕೆಯಾಯಿತು. ಜೂನ್.13ರಂದು 3,08,993ರಷ್ಟಿದ್ದ ಸೋಂಕಿತರ ಸಂಖ್ಯೆ ಜೂನ್.21ರ ವೇಳೆಗೆ 4,10,461ಕ್ಕೆ ಏರಿಕೆಯಾಯಿತು.

ಸೋಂಕಿತರ ಸಂಖ್ಯೆ ಆರು ದಿನದಲ್ಲೇ ಐದು ಲಕ್ಷವನ್ನು ದಾಟಿತು

ಸೋಂಕಿತರ ಸಂಖ್ಯೆ ಆರು ದಿನದಲ್ಲೇ ಐದು ಲಕ್ಷವನ್ನು ದಾಟಿತು

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಜೂನ್.21ರ ವೇಳೆಗೆ 4,10,461ರಷ್ಟಿತ್ತು. ಅಲ್ಲಿಂದ ಆರು ದಿನಗಳಲ್ಲೇ 5 ಲಕ್ಷದ ಗಡಿ ದಾಟಿತು. ಅಂದರೆ ಜೂನ್.27ರ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆಯು 5,08,953ಕ್ಕೆ ಏರಿಕೆಯಾಯಿತು. ಅದಾಗಿ ಐದೇ ದಿನಕ್ಕೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 6 ಲಕ್ಷವನ್ನೂ ಮೀರಿ ಹೋಯಿತು. ಜುಲೈ.02ರಂದು ದೇಶದಲ್ಲಿ ಒಟ್ಟು 6,04,641 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು.

ಪ್ರತಿನಿತ್ಯ 24 ಸಾವಿರ ಕೊವಿಡ್-19 ಪ್ರಕರಣ

ಪ್ರತಿನಿತ್ಯ 24 ಸಾವಿರ ಕೊವಿಡ್-19 ಪ್ರಕರಣ

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಎಷ್ಟರಮಟ್ಟಿಗೆ ಏರಿಕೆಯಾಗುತ್ತಿದೆ ಎಂದರೆ ಪ್ರತಿನಿತ್ಯ ಕನಿಷ್ಠ 24 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರತಿ ಐದು ದಿನಕ್ಕೆ ಒಂದು ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಜುಲೈ.02ರಂದು 6,04,641ರಷ್ಟಿದ್ದ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಜುಲೈ.07ರ ವೇಳೆಗೆ 7,22,007ಕ್ಕೆ ಏರಿಕೆಯಾಗಿದೆ. ಈ ಅಂಕಿ-ಸಂಖ್ಯೆಗಳು ಪ್ರತಿಯೊಬ್ಬ ಭಾರತೀಯರ ಎದೆಯಲ್ಲೂ ನಡುಕ ಹುಟ್ಟಿಸುವಂತಿದೆ.

ಕೊವಿಡ್-19 ಅಗ್ರಸ್ಥಾನಕ್ಕೆ ಏರುತ್ತಾ ಭಾರತ?

ಕೊವಿಡ್-19 ಅಗ್ರಸ್ಥಾನಕ್ಕೆ ಏರುತ್ತಾ ಭಾರತ?

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಹರಡುವಿಕೆ ವೇಗ ಏರಿಕೆಯಾಗುತ್ತಿದೆ. ಈ ಅಂಕಿ-ಅಂಶಗಳೇ ಕೊವಿಡ್-19 ಸೋಂಕಿನ ಅಪಾಯದ ಕುರಿತು ಮುನ್ಸೂಚನೆಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರವು ಎಲ್ಲವೂ ಸರಿಯಾಗಿದೆ. ಗುಣಮುಖ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದೆ. ಆದರೆ ಗುಣಮುಖ ಪ್ರಮಾಣಕ್ಕಿಂತ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಇಮ್ಮಡಿಯಾಗುತ್ತಿರುವ ಪ್ರಮಾಣವೇ ಹೆಚ್ಚಾಗಿದೆ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರತವು ಅಮೆರಿಕಾವನ್ನು ಹಿಂದಿಕ್ಕಿದರೂ ಆಶ್ಚರ್ಯ ಪಡುವಂತಿಲ್ಲ ಎಂಬ ವಾದ ಕೇಳಿ ಬರುತ್ತಿದೆ.

English summary
Coronavirus Cases In India: Here Is The Graph To Explain How Covid-19 Cases Increased To 0 To 7 Lakh. Read On.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X