ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸನ್ನು ಹಿಂದಿಕ್ಕಿದ ಬಿಜೆಪಿಯ ವಿದೇಶಾಂಗ ನೀತಿ

|
Google Oneindia Kannada News

ವೀರ ಯೊಧರನ್ನು ಹತ್ಯೆ ಮಾಡಿದ್ದ ಉಗ್ರರ ಜಾಡು ಬೆನ್ನತ್ತಿದ್ದ ಭಾರತದ ಸೇನೆ ಮಯನ್ಮಾರ್ ಗೆ ತರಳಿ ಅವರನ್ನು ಸದೆಬಡಿದು ಹಿಂದಿರುಗಿದೆ. ಇದು ಕೇಂದ್ರ ಸರ್ಕಾರ ಉಗ್ರರ ಮೇಲೆ ಯಾವ ಮುಲಾಜಿಗೂ ಒಳಗಾಗದೆ ಕಠಿಣ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಹಿಡದ ಕನ್ನಡಿಯಂತಿದೆ. ಅಲ್ಲದೇ ಎನ್ ಡಿ ಎ ಸರ್ಕಾರದ ಈ ನೀತಿ ಕಾಂಗ್ರೆಸ್ ಪಕ್ಷವನ್ನು ಹಿಂದಿನ ಸಾಲಿಗೆ ಸೇರಿಸಿದೆ.

ಸೈನ್ಯದ ಕೆಲಸವನ್ನು ಕಾಂಗ್ರೆಸ್ ಪ್ರಶಂಸಿಸಿದೆ. ಆದರೆ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಮರೆತಿದೆ. ಮೋದಿ ಸರ್ಕಾರ ಉಗ್ರರ ವಿರುದ್ಧ ತೆಗೆದುಕೊಳ್ಳುತ್ತಿರುವ ಯಾವ ನೀತಿಯ ಬಗ್ಗೆಯೂ ಕಾಂಗ್ರೆಸ್ ನಾಯಕರು ಮಾತನಾಡುತ್ತಿಲ್ಲ.[ಮ್ಯಾನ್ಮಾರ್ ಗಡಿಯಲ್ಲಿ ಎಷ್ಟು ಉಗ್ರರು ಹತರಾದರು?]

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ (1999) ಕಾರ್ಗಿಲ್ ಯುದ್ಧ ದ ಸಂದರ್ಭ ಕಾಂಗ್ರೆಸ್ ಪಕ್ಷದಲ್ಲಿ ಯಾವ ಸ್ಥಿತಿಯಿತ್ತೋ ಇಂದಿಗೂ ಅದೇ ಇದೆ. ದೇಶದ ಎಷ್ಟೋ ಸೈನಿಕರು ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ್ದರು. ಅಂತಿಮವಾಗಿ ಭಾರತ ಮಾತೆಯ ವಿಜಯ ಪತಾಕೆಯನ್ನು ಕಾರ್ಗಿಲ್ ನಲ್ಲಿ ಹಾರಿಸಲಾಗಿತ್ತು. ಆದರೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ ಗೆ ಮಣೆ ಹಾಕಿದ್ದರು. ಯಾವ ಮುನ್ಸೂಚನೆಯೂ ಇಲ್ಲದೇ ಕಾಂಗ್ರೆಸ್ ಅಧಿಕಾರದ ಹಾದಿ ಹಿಡಿದಿತ್ತು. ಈಗ ನರೇಂದ್ರ ಮೋದಿ ಸರ್ಕಾರ ಯಾವ ರೀತಿ ಕಾಂಗ್ರೆಸ್ ವಿದೇಶಾಂಗ ನೀತಿಯನ್ನು ಮೀರಿಸಿದೆ ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.

1962 ರಲ್ಲಿ ಕಾಲು ಕೆದರಿಕೊಂಡು ಬಂದಿದ್ದ ಚೀನಾ

1962 ರಲ್ಲಿ ಕಾಲು ಕೆದರಿಕೊಂಡು ಬಂದಿದ್ದ ಚೀನಾ

ವಿದೇಶಾಂಗ ನೀತಿ ಮತ್ತು ಉಗ್ರರ ಉಪಟಳ ನಿಭಾಯಿಸುವಲ್ಲಿ ಕಾಂಗ್ರಸ್ ಮತ್ತು ಬಿಜೆಪಿ ನಡುವೆ ಅಪಾರ ವ್ಯತ್ಯಾಸವಿದೆ. 1962 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚೀನಿಯರು ಯುದ್ಧಕ್ಕೆ ಬಂದಿದ್ದರು. ಆಗ ಆ ಪಕ್ಷ ನಡೆದುಕೊಂಡ ರೀತಿಯೇ ಬೇರೆಯಾಗಿತ್ತು.

ಶ್ರೀಲಂಕಾ ಪ್ರಕರಣ

ಶ್ರೀಲಂಕಾ ಪ್ರಕರಣ

1980 ರಲ್ಲಿ ಶ್ರೀಲಂಕಾಕ್ಕೆ ಸಂಬಂಧಿಸಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ತೆಗೆದುಕೊಂಡ ಕ್ರಮಗಳು ಇಂದಿಗೂ ಟೀಕೆಗೆ ಒಳಗಾಗುತ್ತಿವೆ. ಕಾಂಗ್ರೆಸ್ ಪಕ್ಷ ವಿದೇಶಾಂಗ ನೀತಿಯನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿಯೇ ಉಳಿದುಕೊಂಡಿದೆ.

ಕೆಲಸವಿಲ್ಲದ ಪಾಕಿಸ್ತಾನ

ಕೆಲಸವಿಲ್ಲದ ಪಾಕಿಸ್ತಾನ

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಅಂದರೆ 1947, 1965 ಮತ್ತು 1971 ರಲ್ಲಿ ಪಾಕಿಸ್ತಾನ ತನ್ನ ಕುತಂತ್ರ ಪ್ರದರ್ಶನ ಮಾಡಿತ್ತು. ಈ ವೇಳೆ ಅಂದಿನ ಕೇಂದ್ರ ಸರ್ಕಾರ ತಳೆದ ಮೃದು ಧೋರಣೆ ಉಗ್ರರಿಗೆ ಕಡಿವಾಣ ಹಾಕುವಷ್ಟು ಪರಿಣಾಮಕಾರಿಯಾಗಿರಲಿಲ್ಲ ಎಂಬುದು ಗೊತ್ತೆ ಇದೆ.

ಪೂರ್ವ ಪಾಕಿಸ್ತಾನ ಉದಯ

ಪೂರ್ವ ಪಾಕಿಸ್ತಾನ ಉದಯ

1947 ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಪ್ರಯಾಸಕರ ಜಯ ಸಾಧಿಸಿದ್ದು, ನಂತರ ಬಾಂಗ್ಲಾದೇಶದ ಹುಟ್ಟಿನ ಸಂದರ್ಭ ನಡೆದ ಗೊಂದಲಗಳು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ.

ಎನ್ ಡಿಎ ವಿದೇಶಾಂಗ ನೀತಿ ಏನು?

ಎನ್ ಡಿಎ ವಿದೇಶಾಂಗ ನೀತಿ ಏನು?

ಕಾಂಗ್ರೆಸ್ ಗೆ ಹೋಲಿಸಿದರೆ ಎನ್ ಡಿಎ ವಿದೇಶಾಂಗ ನೀತಿಯ ನಿರ್ವಹಣೆಯೇ ಬೇರೆ ರೀತಿಯದ್ದಾಗಿದೆ. ಜಾರ್ಜ್ ಫರ್ನಾಂಡೀಸ್ ಕಾಲದಿಂದಲೂ ರಾಷ್ಟ್ರೀಯತೆಯನ್ನು ಕಾಪಾಡಿಕೊಂಡು ಬಂದಿದೆ. ಮುಖ್ಯ ವೈರಿ ಎಂದೇ ಗುರುತಿಸಿಕೊಂಡಿದ್ದ ಚೀನಾಕ್ಕೆ ತಕ್ಕದಾದ ಉತ್ತರವನ್ನು ನೀಡುತ್ತಲೇ ಇದೆ. ಈಗ ಮಯನ್ಮಾರ್ ಘಟನೆ ಪಾಕಿಸ್ತಾನಕ್ಕೆ ಭಾರತ ನೀಡಿದ ಸ್ಪಷ್ಟ ಎಚ್ಚರಿಕೆಯಾಗಿದೆ.

ಮುಂಬೈ ತಾಜ್ ದಾಳಿ

ಮುಂಬೈ ತಾಜ್ ದಾಳಿ

ಎನ್ ಡಿಎ ಸರ್ಕಾರಕ್ಕೆ ಮಾಧ್ಯಮಗಳ ಮೂಲಕ ತಮ್ಮ ನೀತಿಯನ್ನು ಸ್ಪಷ್ಟ ರೀತಿಯಲ್ಲಿ ಪ್ರಚಾರ ಮಾಡಿಕೊಳ್ಳುವುದನ್ನು ಹೇಳಿಕೊಡಬೇಕಾಗಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ 26/11 ಮುಂಬೈ ದಾಳಿ ಮತ್ತು ಕೇರಳ ಮೀನುಗಾರರ ಪ್ರಕರಣವನ್ನು ತಹಬದಿಗೆ ತಂದರೂ ಜನರಲ್ಲಿ ಅಸಮಾಧಾನ ಹಾಗೆ ಉಳಿದಿತ್ತು.

ಬಾಂಗ್ಲಾದೊಂದಿಗಿನ ಗಡಿ ಒಪ್ಪಂದ

ಬಾಂಗ್ಲಾದೊಂದಿಗಿನ ಗಡಿ ಒಪ್ಪಂದ

ಮೋದಿ ಬಾಂಗ್ಲಾದೇಶದೊಂದಿಗೆ ಮಾಡಿಕೊಂಡ ಗಡಿ ಒಪ್ಪಂದ, ಗ್ರಾಮಗಳ ಹಂಚಿಕೊಳ್ಳುವಿಕೆ, ಹಿಂದಿನ ಮನಮೋಹನ್ ಸಿಂಗ್ ಆಡಳಿತಕ್ಕೆ ಹೋಲಿಸಿದರೆ ಉತ್ತಮ ಬೆಳವಣಿಗೆ ಎಂದೇ ಗುರುತಿಸಲಾಗಿದೆ. ಅಲ್ಲದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಜತೆಗೆ ಕರೆದೊಯ್ದಿದ್ದು ಮೋದಿ ಚಾಕಚಕ್ಯತೆಗೆ ಸಾಕ್ಷಿ.

ದೇಶದ ಏಕತೆಗೆ ಪೂರಕ

ದೇಶದ ಏಕತೆಗೆ ಪೂರಕ

ಮಯನ್ಮಾರ್ ಪ್ರಕರಣದ ನಂತರ ಯಾವ ಗಾಂಧಿಗಳು ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಸಮಗ್ರತೆ ಮತ್ತು ಐಕ್ಯತೆ ಕಾಪಾಡಲು ಇಂಥ ಕಠಿಣ ಕ್ರಮಗಳು ಅನಿವಾರ್ಯ ಎಂದೇ ವಿಶ್ಲೇಷಣೆ ಮಾಡಲಾಗಿದೆ.

English summary
The Indian Army's campaign against the militants in Myanmar after 18 soldiers were killed in an ambush on June 4 has given the BJP a major boost not only on the foreign policy front but also in domestic politics. For the action has put opposition Congress on the backfoot as it is now struggling to find a way to take on the Narendra Modi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X