ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೊಳಕ್ಕೆ ಅಕ್ರಮ ವಲಸೆ ಬಲು ಸಲೀಸು; ಬಾಂಗ್ಲಾ ಪ್ರಜೆ ಹೇಳಿದ ಸ್ಫೋಟಕ ಸತ್ಯ

By ಅನಿಲ್ ಆಚಾರ್
|
Google Oneindia Kannada News

ಅಸ್ಸಾಂನಲ್ಲಿ ಬಂಧಿತನಾದ ಬಾಂಗ್ಲಾದೇಶದ ಅಕ್ರಮ ವಲಸಿಗನೊಬ್ಬನ ಬಗೆಗಿನ ವರದಿ ಇದು. ಆತ ಭಾರತಕ್ಕೆ ಹೇಗೆ ಬಂದ, ಇಲ್ಲಿ ಹೇಗೆ ಅಧಿಕೃತ ದಾಖಲಾತಿಗಳನ್ನು ಪಡೆದ ಇತ್ಯಾದಿ ವಿವರಗಳನ್ನು ಬಾಯಿ ಬಿಟ್ಟಿದ್ದಾನೆ. 27 ವರ್ಷದ, ಬಾಂಗಾದೇಶದ ಅಯ್ನೂಲ್ ಹಕ್ ನನ್ನು ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಾಂಗ್ಲಾದೇಶದ ಗಡಿ ಕಾಯುವ ಸಿಬ್ಬಂದಿಗೆ 4000 ಟಾಕಾ (ಭಾರತೀಯ ಕರೆನ್ಸಿ ಲೆಕ್ಕಾಚಾರದಲ್ಲಿ 3,276.80 ರುಪಾಯಿ) ಲಂಚ ಕೊಟ್ಟ ಹಕ್ ನನ್ನು ಭಾರತದೊಳಕ್ಕೆ ನುಸುಳಲು ಅನುವು ಮಾಡಿಕೊಡಲಾಗಿದೆ. ಧುಬ್ರಿ ಜಿಲ್ಲೆಯ ಚಗೋಲಿಯಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಹಕ್ ಬಗ್ಗೆ ಸ್ಥಳೀಯರು ಅನುಮಾನಗೊಂಡಿದ್ದರು. ಆ ನಂತರ ಅವನನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ

ಅಸ್ಸಾಂನ ಪೊಲೀಸ್ ಇನ್ ಸ್ಪೆಕ್ಟರ್ ಬಿದನ್ ಬಸುಮತರಿ ಮಾತನಾಡಿ, ಬಾಂಗ್ಲಾದೇಶದ ಠಾಕೂರ್ ಗಾಂವ್ ಜಿಲ್ಲೆಯ ಪಿರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ರಿಯ ಸುಂದರಿಯಾ ಹಳ್ಳಿಯವನು ಅಯ್ನೂಲ್ ಹಕ್. ಆತನ ತಂದೆ ಹೆಸರು ಮೊಹಮ್ಮದ್ ಸೈಫುದ್ದೀನ್ ಶೇಖ್ ಎಂದು ಹೇಳಿದ್ದಾರೆ.

How Bangladesh illegal immigrant entered and staying in India for years?

ಮಾಧ್ಯಮಗಳ ಜತೆಗೆ ಹಕ್ ಮಾತನಾಡಿದ್ದು, ಅಕ್ರಮ ವಲಸಿಗರು ಭಾರತದೊಳಗೆ ನುಸುಳುವುದು ಎಷ್ಟು ಸಲೀಸು ಹಾಗೂ ಇಲ್ಲಿ ವಾಸಿಸುವುದು ಹೇಗೆ ಸುಲಭ ಎಂಬುದನ್ನೆಲ್ಲ ತೆರೆದಿಡುತ್ತದೆ. ಸ್ಥಳೀಯ ಪತ್ರಕರ್ತರ ಬಳಿ ಆ ಎಲ್ಲವನ್ನು ಹಕ್ ಹೇಳಿಕೊಂಡಿದ್ದಾನೆ.

ನನ್ನ ಜತೆಗೆ ಇನ್ನೂ 10-11 ಮಂದಿ ಮಾರ್ಚ್ 2013ರಲ್ಲಿ ಪಶ್ಚಿಮ ಬಂಗಾಲದ ಮಾಲ್ಡಾ ಗಡಿ ಜಿಲ್ಲೆಯ ಮೂಲಕ ಭಾರತ ಪ್ರವೇಶಿಸಿದರು. ಬಾಂಗ್ಲಾದೇಶದ ಗಡಿ ಕಾಯುವ ಸಿಬ್ಬಂದಿಗೆ 4,200 ಟಾಕಾ ಲಂಚ ಕೊಟ್ಟಿದ್ದೆವು. ಅವರು ಗಡಿ ದಾಟಲು ಅವಕಾಶ ನೀಡಿದರು ಎಂದು ಹೇಳಿದ್ದಾನೆ.

ಭಾರತಕ್ಕೆ ಬಂದ ಮೇಲೆ ಪಶ್ಚಿಮ ಬಂಗಾಲದ ಉತ್ತರ್ ದಿನಜ್ ಪುರ್ ಜಿಲ್ಲೆಯ ವ್ಯಕ್ತಿ ಆಜಾದ್ ಅಲಿ ಎಂಬಾತನನ್ನು ತಂದೆ ಎಂದು ದಾಖಲೆ ಸೃಷ್ಟಿ ಮಾಡಿ, ಆಧಾರ್ ಪಡೆದುಕೊಂಡೆ. ಪಶ್ಚಿಮ ಬಂಗಾಲದಿಂದ ದೆಹಲಿ, ಹರಿಯಾಣ ಹಾಗೂ ರಾಜಸ್ತಾನಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದೆ. ಅಸ್ಸಾಂ ಬೊಂಗೈಗಾಂವ್ ಜಿಲ್ಲೆಯ ಹುಡುಗಿಯ ಪರಿಚಯ ಫೋನ್ ಮೂಲಕ ಆಯಿತು. ಅವಳನ್ನು ಮದುವೆ ಆದೆ. ನಮಗೆ ಮಗು ಇದೆ ಎಂದು ಹಕ್ ಹೇಳಿಕೊಂಡಿದ್ದಾನೆ.

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ಎಚ್ಡಿಕೆ ಕೊಟ್ಟ ವಿವರಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ಎಚ್ಡಿಕೆ ಕೊಟ್ಟ ವಿವರ

ಹಕ್ ಬಳಿ ಪ್ಯಾನ್ ಕಾರ್ಡ್ ಕೂಡ ಇದೆ. ಆತ ಸರೀಫಾ ಬೇಗಂ ಎಂಬಾಕೆಯನ್ನು ಮದುವೆ ಆಗಿದ್ದಾನೆ. ಆಕೆಯನ್ನು ಮದುವೆ ಆದ ನಂತರ ಅಸ್ಸಾಂನಲ್ಲಿ ವಾಸ್ತವ್ಯ ಹೂಡಿದ್ದಾನೆ. ಈ ದಂಪತಿಗೆ ಎರಡು ವರ್ಷದ ಮಗ ಇದ್ದಾನೆ. "ಕಳೆದ ಕೆಲ ವರ್ಷಗಳಲ್ಲಿ 7.2 ಲಕ್ಷ ರುಪಾಯಿಯಷ್ಟು ಹಣವನ್ನು ಬಾಂಗ್ಲಾದೇಶದಲ್ಲಿ ಇರುವ ನನ್ನ ತಂದೆಗೆ ಆನ್ ಲೈನ್ ಮೂಲಕ ಕಳುಹಿಸಿದ್ದೇನೆ. ಧುಬ್ರಿಯ ಚಗೋಲಿಯಾಗೆ ಬಂದಿದ್ದು ಪ್ರಯಾಣದ ಸಲುವಾಗಿ" ಎಂದು ಹೇಳಿಕೊಂಡಿದ್ದಾನೆ.

English summary
This is the real story of Bangladesh illegal immigrant Aynul Haq, who entered India by giving bribe of 3,200 rupees. He explained about story of him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X