• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಸ್ಲಿಮರ ಪ್ರಾಬಲ್ಯ ಇರುವ ಬಾಲಿಗಂಜ್‌ನಲ್ಲಿ 'ಕೋಮುವಾದಿ' ಬಾಬುಲ್ ಜಯ

|
Google Oneindia Kannada News

ಕೋಲ್ಕತಾ, ಏ. 16: ಗಾಯಕ ಕಂ ರಾಜಕಾರಣಿ ಹಾಗು ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕೊನೆಗೂ ಚುನಾವಣಾ ಗೆಲುವಿನ ಹಾದಿಗೆ ಮರಳಿದ್ದಾರೆ. ಇಂದು ಪ್ರಕಟಗೊಂಡ ಬಾಲಿಗಂಜ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಫಲಿತಾಂಶದಲ್ಲಿ ಟಿಎಂಸಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಎಂನ ಸೈರಾ ಶಾ ಹಲೀಮ್ ಅವರನ್ನ 20,228 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಾಬುಲ್ ಸುಪ್ರಿಯೋ ಅವರು 50 ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದರೆ ಸೈರಾ ಹಲೀಮ್ ಅವರು 31 ಸಾವಿರ ಮತಗಳ ಗಡಿ ಸಮೀಪ ಬಂದಿದ್ದಾರೆ. ಬಿಜೆಪಿಯ ಕೇಯಾ ಘೋಷ್ ಅವರು 13 ಸಾವಿರದಷ್ಟು ಮತಗಳನ್ನ ಪಡೆದಿದ್ದಾರೆ.

Bypolls: ಉಪಚುನಾವಣೆ: ಬಿಜೆಪಿಗೆ 5-0 ಸೋಲಿನ ಮುಖಭಂಗBypolls: ಉಪಚುನಾವಣೆ: ಬಿಜೆಪಿಗೆ 5-0 ಸೋಲಿನ ಮುಖಭಂಗ

ಬಿಜೆಪಿಗೆ ತುಸು ನಿರಾಸೆ:
ಭಾರತೀಯ ಜನತಾ ಪಕ್ಷಕ್ಕೆ ಬಾಲಿಗಂಜ್‌ನಲ್ಲಿ ಗೆಲ್ಲುವ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ, ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಲೋಕನಾಥ್ ಚಟರ್ಜಿ ಅವರು 31,226 ಮತಗಳನ್ನ ಪಡೆದಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಇನ್ನಷ್ಟು ಹೆಚ್ಚು ಮತಗಳನ್ನ ಗಿಟ್ಟಿಸುವ ನಿರೀಕ್ಷೆಯಲ್ಲಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಬಾಲಿಗಂಜ್ ಕ್ಷೇತ್ರದಲ್ಲಿ ಮುಸ್ಲಿಮ್ ಬಾಹುಳ್ಯ:
ಕೋಲ್ಕತಾದ ದಕ್ಷಿಣ ಭಾಗದಲ್ಲಿರುವ ಬಾಲಿಗಂಜ್ ಕ್ಷೇತ್ರದಲ್ಲಿ ವಿಪರೀತ ಸ್ಲಂಗಳಿವೆ ಹಾಗೆಯೇ ಒಳ್ಳೊಳ್ಳೆಯ ಮ್ಯಾನ್ಷನ್ಸ್ ಇವೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಏಳು ವಾರ್ಡ್‌ಗಳಿದ್ದು ಅವುಗಳ ಪೈಕಿ ಐದು ವಾರ್ಡ್‌ಗಳಲ್ಲಿ ಮುಸ್ಲಿಮರ ಸಂಖ್ಯೆ ಶೇ. 60ರಷ್ಟಿದೆ. ಹೀಗಾಗಿ, ಇಲ್ಲಿ ಮುಸ್ಲಿಮ್ ಮತಗಳೇ ನಿರ್ಣಾಯಕ.

ಈ ಕ್ಷೇತ್ರದ ಮುಸ್ಲಿಮರು ಟಿಎಂಸಿಗೆ ಹೆಚ್ಚು ಒಲವು ಹೊಂದಿದ್ದಾರೆ. ಆದರೆ, ಈ ಬಾರಿ ಟಿಎಂಸಿ ಅಭ್ಯರ್ಥಿಯಾಗಿ ಬಾಬುಲ್ ಸುಪ್ರಿಯೋ ನಿಂತಿದ್ದು ಹಲವು ಮುಸ್ಲಿಮರಿಗೆ ಇರಿಸುಮುರುಸು ತಂದಿತ್ತು. ಅದಕ್ಕೆ ಕಾರಣವೂ ಇದೆ.

Asansol Bypoll Result: ಬಿಜೆಪಿಯ ಹೊಸ ಭದ್ರಕೋಟೆ ಛಿದ್ರ: ಆಸನ್ಸೋಲ್‌ನಲ್ಲಿ ಶತ್ರುಘ್ನಗೆ ಗೆಲುವಿನ ನಗೆAsansol Bypoll Result: ಬಿಜೆಪಿಯ ಹೊಸ ಭದ್ರಕೋಟೆ ಛಿದ್ರ: ಆಸನ್ಸೋಲ್‌ನಲ್ಲಿ ಶತ್ರುಘ್ನಗೆ ಗೆಲುವಿನ ನಗೆ

ಸುಪ್ರಿಯೋ ಕೋಮುವಾದಿ ಎಂದು ಆರೋಪಿಸಿದ್ದ ಇಮಾಮರು:
ಬಾಬುಲ್ ಸುಪ್ರಿಯೋ ಬಿಜೆಪಿಯಲ್ಲಿದ್ದಾಗ ಬಹಳ ತೀವ್ರ ಮಟ್ಟದಲ್ಲಿ ಟಿಎಂಸಿ ವಿರುದ್ಧ ಹೋರಾಟ ಮಾಡಿದ್ದರು. ಎರಡು ಬಾರಿ ಆಸನ್ಸೋಲ್ ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದ ಬಾಬುಲ್ ಅವರು 2018ರಲ್ಲಿ ರಾಮನವಮಿ ಕಾರ್ಯಕ್ರಮದ ನಂತರ ಸಂಭವಿಸಿದ್ದ ಕೋಮುಗಲಭೆ ವಿಚಾರ ಇಟ್ಟುಕೊಂಡು ತೀವ್ರ ಹೇಳಿಕೆಗಳನ್ನ ಕೊಟ್ಟಿದ್ದರು. ಅಲ್ಲದೇ ಸಿಎಎ ಮತ್ತು ಎನ್‌ಆರ್‌ಸಿ ಯೋಜನೆಯನ್ನು ಬಂಗಾಳದಲ್ಲಿ ತರಬೇಕೆಂದು ಬಲವಾಗಿ ವಾದಿಸುತ್ತಿದ್ದವರಲ್ಲಿ ಅವರೂ ಒಬ್ಬರು. ಇದು ಬಾಬುಲ್ ಸುಪ್ರಿಯೋ ಅವರನ್ನ ಮುಸ್ಲಿಮ್ ವಿರೋಧಿ ಎಂಬಂತೆ ಬಿಂಬಿತವಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಇದೇ ವಿಚಾರ ಬಾಬುಲ್ ಅವರಿಗೆ ಹಿನ್ನಡೆ ತರಬಹುದು ಎಂಬ ಎಣಿಕೆ ಇತ್ತು. ಆದರೆ, ಮಮತಾ ಬ್ಯಾನರ್ಜಿ ವರ್ಚಸ್ಸು ಬಾಬುಲ್ ಗೆಲುವಿಗೆ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ.

How Babul Supriyo won Ballygunge despite branded as anti-muslim

ಇನ್ನು, ಬಾಬುಲ್ ಸುಪ್ರಿಯೋ ಅವರ ಎದುರಿಗೆ ನಿಂತಿದ್ದ ಸಿಪಿಐಎಂ ಅಭ್ಯರ್ಥಿ ಸಾಯಿರಾ ಶಾ ಹಲೀಮ್ ಅವರು ನಿವೃತ್ತ ಸೇನಾಧಿಕಾರಿ ಝಮೀರುದ್ದೀನ್ ಶಾ ಅವರ ಮಗಳು. ಹಾಗೆಯೇ ನಟ ನಾಸಿರುದ್ದೀನ್ ಶಾ ಅವರ ಸಂಬಂಧಿಕಳು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಹೋರಾಟದಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ, ಕ್ಷೇತ್ರದಲ್ಲಿ ಇವರು ಚಿರಪರಿಚಿತರಾಗಿದ್ದರು. ಇವರ ಪತಿ ಫಾವದ್ ಹಲೀಮ್ ಅವರು ವೃತ್ತಿಯಲ್ಲಿ ವೈದ್ಯರು, ಸಿಪಿಐಎಂ ಮುಖಂಡರೂ ಹೌದು. ಬಡವರಿಗಾಗಿ ಇವರು ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಾ ಹೆಸರು ಮಾಡಿದ್ದಾರೆ. ಫಾವದ್ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಾದರೂ 10 ಸಾವಿರಕ್ಕಿಂತ ಕಡಿಮೆ ಮತಗಳನ್ನ ಪಡೆದಿದ್ದರು.

ಆ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಸುಬ್ರತಾ ಮುಖರ್ಜಿ ಬರೋಬ್ಬರಿ 70 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ಲೋಕನಾಥ್ ಚಟರ್ಜಿ ೩೦ ಸಾವಿರ ಮತ ಪಡೆದು ಅಚ್ಚರಿ ಹುಟ್ಟಿಸಿದ್ದರು. ಆದರೆ, ಫಾವದ್ ಹಲೀಮ್ ಪತ್ನಿ ಸಾಯಿರಾ ಅವರು ಈ ಬಾರಿ ಸಿಪಿಎಂಗೆ ಪ್ರಬಲ ಅಭ್ಯರ್ಥಿ ಎನಿಸಿದ್ದರು.

ಟಿಎಂಸಿಯ ಸಾಂಪ್ರದಾಯಿಕ ಬೆಂಬಲಿಗರೆನ್ನಲಾದ ಮುಸ್ಲಿಮರ ಮತಗಳನ್ನ ಸಾಯಿರಾ ಸೆಳೆದುಕೊಳ್ಳಬಹುದು, ಇದರಿಂದ ತನಗೆ ಅನುಕೂಲವಾಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆದರೆ, ಬಿಜೆಪಿಯ ಈ ನಿರೀಕ್ಷೆ ಕೈಗೂಡಲಿಲ್ಲ. ಮೂರನೇ ಸ್ಥಾನಕ್ಕೆ ಅದು ಕುಸಿಯಬೇಕಾಯಿತು.

ಇನ್ನು ಬಾಬುಲ್ ಸುಪ್ರಿಯೊ ಅವರು ಗೆಲುವಿನ ಲಯಕ್ಕೆ ಮರಳಿದಂತಾಗಿದೆ. ಆಸನ್ಸೋಲ್ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಗೆದ್ದಿದ್ದ ಅವರು ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಾಲಿಗಂಜ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅದಕ್ಕಾಗಿ ಅವರು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರ ದುರದೃಷ್ಟಕ್ಕೆ ಟಾಲಿಗಂಜ್ ಚುನಾವಣೆಯಲ್ಲಿ ಟಿಎಂಸಿ ಎದುರು ಸೋಲುಂಡರು. ಅದಾದ ಬಳಿಕ ಅವರು ಬಿಜೆಪಿ ತೊರೆದು ಟಿಎಂಸಿ ಪಕ್ಷವನ್ನೇ ಸೇರಿದರು. ಇದೀಗ ಟಿಎಂಸಿ ಅಭ್ಯರ್ಥಿಯಾಗಿ ಬಾಲಿಗಂಜ್ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

English summary
TMC candidate Babul Supriyo faced some resistance in Ballygunge assembly constituency before winning by 20 thousand votes margin. CPM candidate put up tough fight, while BJP performed poorer compared to last elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X