ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಯಿ ಮುಚ್ಚು ಸಾಕು'; ಬೆಲೆ ಏರಿಕೆ ಪ್ರೆಶ್ನಿಸಿದ್ದಕ್ಕೆ ಪತ್ರಕರ್ತನಿಗೆ ರಾಮದೇವ್ ಆವಾಜ್!

|
Google Oneindia Kannada News

ನವದೆಹಲಿ, ಮಾರ್ಚ್ 31: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸೇರಿದಂತೆ ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಗರಂ ಆದ ಯೋಗ ಗುರು ಬಾಬಾ ರಾಮದೇವ್, ಪತ್ರಕರ್ತರ ಮೇಲೆಯೇ ಹರಿಹಾಯ್ದ ಘಟನೆ ನಡೆದಿದೆ.

ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೆಟ್ರೋಲ್ ಲೀಟರ್‌ಗೆ 40 ರೂ. ಮತ್ತು ಅಡುಗೆ ಅನಿಲ ಲೀಟರ್‌ಗೆ 300 ರೂ.ಗೆ ಖಾತ್ರಿಪಡಿಸುವ ಪಕ್ಷಕ್ಕೆ ಜನರು ಮತ ಹಾಕಬೇಕು ಎಂಬ ತಮ್ಮ ಹಳೆಯ ಹೇಳಿಕೆ ಬಗ್ಗೆ ಪ್ರಶ್ನೆ ಮಾಡಲಾಯಿತು. ಪ್ರಸ್ತುತ ಇಂಧನ ಮತ್ತು ಅಡುಗೆ ಅನಿಲದ ಬೆಲೆಯ ಬಗ್ಗೆ ಏನು ಹೇಳುತ್ತೀರಿ ಎಂದು ಪತ್ರಕರ್ತರು ಕೇಳುತ್ತಿದ್ದಂತೆ ರಾಮದೇವ್ ಫುಲ್ ಗರಂ ಆಗಿ ಬಿಟ್ಟದರು.

ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಮ್‌ದೇವ್, "ಹೌದು, ನಾನು ಹೇಳಿದ್ದೇನೆ, ನೀವು ಏನು ಮಾಡಬಹುದು?, ಇಂತಹ ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಇರಬೇಕಾದ ನಿಮ್ಮ ಗುತ್ತಿಗೆದಾರನೇ ನಾನು? ಎಂದು ಪ್ರಶ್ನಿಸಿದರು. ಸುಮ್ಮನೆ ಬಾಯಿ ಮುಚ್ಚಿ, ಇನ್ನೊಮ್ಮೆ ಹೀಗೆ ಪ್ರಶ್ನೆ ಮಾಡಿದರೆ ಚೆನ್ನಾಗಿ ಇರುವುದಿಲ್ಲ. ನೀವು ಈ ರೀತಿ ಮಾತನಾಡಬಾರದು, ಸಭ್ಯ ಪೋಷಕರ ಮಗನಂತೆ ವರ್ತಿಸಿರಿ," ಎನ್ನುವ ಹೇಳಿಕೆಯನ್ನು ನೀಡಿದರು.

How baba Ramdev lashes out at journalist over question regarding fuel price hike

ಕಷ್ಟದ ಸಂದರ್ಭದಲ್ಲಿ ಶ್ರಮವಹಿಸಿ ಕೆಲಸ ಮಾಡಲು ಕರೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಕೆರಳುವುದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಯೋಗ ಗುರು ಬಾಬಾ ರಾಮದೇವ್ ಮಾತನಾಡಿದರು. "ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಶ್ರಮವಹಿಸಿ ತಮ್ಮ ಕೆಲಸವನ್ನು ಮಾಡಬೇಕಾಗುತ್ತದೆ. ಸರ್ಕಾರ ಹೇಳುವ ಪ್ರಕಾರ, ಇಂಧನದ ಬೆಲೆಗಳು ಇಳಿಕೆಯಾದರೆ ಸರ್ಕಾರಕ್ಕೆ ತೆರಿಗೆಯೇ ಸಿಗುವುದಿಲ್ಲ. ಹಾಗಾದಾಗ ದೇಶವನ್ನು ಮುನ್ನಡೆಸುವುದು ಹೇಗ, ವೇತನವನ್ನು ನೀಡುವುದು ಹೇಗೆ, ರಸ್ತೆಗಳ ನಿರ್ಮಾಣ ಮಾಡುವುದು ಹೇಗೆ?, ಹೌದು ಹಣದುಬ್ಬರ ನಿಯಂತ್ರಿಸುವ ವಾದವನ್ನು ನಾನೂ ಒಪ್ಪಿಕೊಳ್ಳುತ್ತೇನೆ, ಆದರೆ ಜನರು ಶ್ರಮವಹಿಸಿ ದುಡಿಯಬೇಕು. ನಾನೂ ಕೂಡ ಬೆಳಗ್ಗೆ 4 ಗಂಟೆಗೆ ಎದ್ದು, ರಾತ್ರಿ 10 ಗಂಟೆವರೆಗೂ ಕೆಲಸವನ್ನು ಮಾಡುತ್ತೇನೆ," ಎಂದು ಹೇಳಿದರು.

How baba Ramdev lashes out at journalist over question regarding fuel price hike

10 ದಿನದಲ್ಲಿ ಪೆಟ್ರೋಲ್ ದರ 6.40 ರೂ. ಏರಿಕೆ:

ದೇಶದಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುತ್ತಿದೆ. ಗುರುವಾರ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 80 ಪೈಸೆ ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ 6.40 ರೂಪಾಯಿ ಹೆಚ್ಚಳವಾಗಿದೆ.

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಬೆಲೆಯು ನೂರರ ಗಡಿ ದಾಟಿದೆ. ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ದರವು ನೂರರ ಗಡಿಯನ್ನು ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ದರವು 101 ರೂಪಾಯಿಯಿಂದ 116 ರೂಪಾಯಿ ಆಸುಪಾಸಿನಲ್ಲಿದೆ. ಇನ್ನು ಡೀಸೆಲ್‌ ದರವು ದೇಶದ ಒಂದೆರಡು ಪ್ರಮುಖ ನಗರದಲ್ಲಿ ನೂರರ ಗಡಿಯನ್ನು ದಾಟಿದೆ. ಹೈದರಾಬಾದ್‌, ಮುಂಬೈನಲ್ಲಿ ಡೀಸೆಲ್‌ ದರವು ನೂರರ ಗಡಿಯನ್ನು ದಾಟಿದೆ. ಉಳಿದಂತೆ ಇತರೆ ನಗರಗಳಲ್ಲಿ 90 ರೂಪಾಯಿ ಆಸುಪಾಸಿನಲ್ಲಿದೆ.

English summary
How baba Ramdev lashes out at journalist over question regarding fuel price hike. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X